ಮಾಹೀ ಭಾಯ್​ ಇಲ್ಲಿ ಬನ್ನಿ..ನಾನು ಹುಕ್ಕಾ ಸೇದಿ ಬರುತ್ತೇನೆ! ಪಂತ್​-ಧೋನಿ ಪಾರ್ಟಿ ವಿಡಿಯೋ ವೈರಲ್​ |Pant-Dhoni Party Video

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಧೋನಿ ಮತ್ತು ಪಂತ್ ಒಟ್ಟಿಗಿರುವ ಪಾರ್ಟಿ ವಿಡಿಯೋ
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಧೋನಿ ಮತ್ತು ಪಂತ್ ಒಟ್ಟಿಗಿರುವ ಪಾರ್ಟಿ ವಿಡಿಯೋ
Published on
ನವದೆಹಲಿ: ಕ್ರಿಕೆಟ್​ ಆಟಗಾರರ ಮೋಜು-ಮಸ್ತಿಯ ಕತೆಗಳು ಇಂದು, ನಿನ್ನೆಯದಲ್ಲ. ಇದು ಕ್ರಿಕೆಟ್​ ಆವಿಷ್ಕಾರದೊಂದಿಗೆ ಹುಟ್ಟಿಕೊಂಡಿರುವ ಸಂಸ್ಕೃತಿ ಎಂದರೂ ತಪ್ಪಾಗದು.  ಮ್ಯಾಚ್​ ಮುಗಿದ ಮೇಲೆ ತಂಡದ ಸದಸ್ಯರೆಲ್ಲರೂ ಸೇರಿ ಗುಂಡು ಹಾಕುವುದು ಸಾಮಾನ್ಯ ಎಂದ ಸ್ಥಿತಿ ಭಾರತ ಸೇರಿದಂತೆ ಬಹುತೇಕ ಎಲ್ಲಾ ದೇಶದ ಕ್ರಿಕೆಟ್​ ತಂಡದಲ್ಲಿದೆ.
ಆದರೆ, ಇತ್ತೀಚೆಗೆ ಭಾರತದ ತಂಡದ ಮಾಜಿ ನಾಯಕ ಎಂ.ಎಸ್​.ಧೋನಿ ಹಾಗೂ ರಿಷಭ್​ ಪಂತ್​ ಪಾರ್ಟಿ (Pant-Dhoni Party Video) ಯೊಂದರಲ್ಲಿ ಹೇಳಿರುವ ಮಾತೊಂದು ಸೋಷಿಯಲ್​ ಮೀಡಿಯಾನಲ್ಲಿ ಭಾರಿ ವೈರಲ್​ ಆಗುತ್ತಿದೆ. 

ನಾನು ಹುಕ್ಕಾ ಸೇದಿ ಬರುತ್ತೇನೆ!

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋನಲ್ಲಿ ಎಂ.ಎಸ್​. ಧೋನಿ, ರಿಷಬ್​ ಜೊತೆಗೆ ಅವರ ಕೆಲ ಗೆಳೆಯರು ಲಂಡನ್​ನಲ್ಲಿ ಪಾರ್ಟಿ ಮಾಡುತ್ತಿರುವ ದೃಶ್ಯವೆಂದು ಈ ವಿಡಿಯೋನಲ್ಲಿ ಹೇಳಲಾಗುತ್ತಿದೆ. ವೈರಲ್​ ಆಗುತ್ತಿರುವ ವಿಡಿಯೋನಲ್ಲಿ, ಇರುವ ಎಲ್ಲರೂ ಬಹುತೇಕ ಪಾನಮತ್ತರಾಗಿ ಇರುವಂತೆ ಕಾಣಿಸುತ್ತಿದ್ದು, ರಿಷಬ್​ ಪಂತ್​, ಮಾಹೀ ಬೈ ಇಲ್ಲಿ ಬನ್ನಿ ಎಂದು ಕರೆದಾಗ, ಧೋನಿ, ನಾನು ಹುಕ್ಕಾ ಸೇದಿ ಬರುತ್ತೇನೆಂದು ಹೇಳಿದ್ದಾರೆ.
(ಆದರೆ, ಈ ಧ್ವನಿ ಧೋನಿಯವರದ್ದೇ? ಅಥವಾ ಧೋನಿ ಹುಕ್ಕಾ ಸೇದುತ್ತಾರೆ? ಎಂದು ವಿಜಯವಾಣಿ ದೃಡಪಡಿಸುತ್ತಿಲ್ಲ) ಆದರೆ, ವಿಡಿಯೋನಲ್ಲಿ ನಾನು ಹುಕ್ಕಾ ಸೇದಿ ಬರುತ್ತೇನೆ ಎಂಬ ಧ್ವನಿ ಕೇಳಿ ಬಂದಿದ್ದು, ಕಮೆಂಟ್​ ಮಾಡುತ್ತಿರುವ ಬಹಳಷ್ಟು ಜನ ಈ ಧ್ವನಿ ಧೋನಿ ಅವರದ್ದೇ ಎಂದು ಹೇಳುತ್ತಿದ್ದಾರೆ. 

ಈ ಮೊದಲು ವೈರಲ್​ ಆಗಿತ್ತು ವಿಡಿಯೋ!

ಈ ವಿಡಿಯೋ ಕ್ಕಿಂತ ಮೊದಲು ಬೇರೊಂದು ಪಾರ್ಟಿಯಲ್ಲಿ ಎಂ.ಎಸ್​.ಧೋನಿ ನಿಷೇಧಿತ ವೇಪ್​ (ಇ-ಸಿಗರೇಟ್​) ಸೇದುತ್ತಿದ್ದ ವಿಡಿಯೋವೊಂದು ವೈರಲ್​ ಆಗಿತ್ತು. ಆದರೆ ಇದನ್ನು ಕೃತಕ ಬುದ್ದಿಮತ್ತೆ ಸಹಾಯದಿಂದ ಸೃಷ್ಟಿಸಲಾಗಿತ್ತೆಂಬ ವಾದಕೇಳಿಬಂದಿತ್ತು. ಆದರೆ ಈ ಕುರಿತು ಧೋನಿ ಯಾವುದೇ ಸ್ಪಷ್ಟನೆ ನೀಡಿರಲಿಲ್ಲ, (ಏಜನ್ಸೀಸ್​). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net