ಎಲ್ಐಸಿ ಹೌಸಿಂಗ್ ಫೈನಾನ್ಸ್ ದೂರಿನ ಪ್ರಕಾರ, 2018 ಮಾರ್ಚ್ನಲ್ಲಿ ಎಲ್ಐಸಿ ಹೌಸಿಂಗ್ ಫೈನಾನ್ಸ್, ವಸಂತ ಸಾಗರ್ ಪ್ರಾಪರ್ಟೀಸ್ ಪ್ರೈವೇಟ್ ಲಿಮಿಟೆಡ್ ಮತ್ತು ಪ್ಯಾನ್ ಇಂಡಿಯಾ ಇನ್ಫ್ರಾಪ್ರಾಜೆಕ್ಟ್ಸ್ ಪ್ರೈವೇಟ್ ಲಿಮಿಟೆಡ್ಗೆ ವ್ಯವಹಾರ ವಿಸ್ತರಣೆಗಾಗಿ ₹500 ಕೋಟಿ ಸಾಲವನ್ನು ಮಂಜೂರು ಮಾಡಿತ್ತು. ಮತ್ತು ಅದಕ್ಕೆ ಸುಭಾಷ್ ಚಂದ್ರ ಅವರು ವೈಯಕ್ತಿಕ ಖಾತರಿಯಾಗಿದ್ದರು.
ನಂತರ 2018 ಆಗಸ್ಟ್ನಲ್ಲಿ ಡಿಜಿಟಲ್ ಸಬ್ಸ್ಕ್ರೈಬರ್ ಮ್ಯಾನೇಜ್ಮೆಂಟ್ ಮತ್ತು ಕನ್ಸಲ್ಟೆನ್ಸಿ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್ ಮತ್ತು ಸ್ಪಿರಿಟ್ ಇನ್ಫ್ರಾಪವರ್ ಮತ್ತು ಮಲ್ಟಿವೆಂಚರ್ಸ್ ಪ್ರೈವೇಟ್ ಲಿಮಿಟೆಡ್ಗೆ ಬಾಡಿಗೆ ರಿಯಾಯಿತಿ ವ್ಯವಸ್ಥೆಯಡಿಯಲ್ಲಿ ₹480 ಕೋಟಿ ಮೊತ್ತದ ಮತ್ತೊಂದು ಸಾಲವನ್ನು ಮಂಜೂರು ಮಾಡಲಾಗಿತ್ತು. ಇದಕ್ಕೂ ಸುಭಾಷ್ ಚಂದ್ರ ಅವರು ವೈಯಕ್ತಿಕ ಖಾತರಿದಾರರಾಗಿದ್ದರು.
ಆದರೆ ಮೊದಲ ಸಾಲದ ಅನುಮೋದನೆಯು ಭಾಗಶಃ ಚಂದ್ರ ಅವರು ಸಲ್ಲಿಸಿದ್ದ ನಿವ್ವಳ ಮೌಲ್ಯದ ಪ್ರಮಾಣಪತ್ರವನ್ನು ಆಧರಿಸಿತ್ತು. ಈ ಪ್ರಮಾಣಪತ್ರವು ಮಾರ್ಚ್ 31, 2017ರ ವೇಳೆಗೆ ಅವರ ಸಂಪತ್ತಿನ ಮೌಲ್ಯವನ್ನು 6.2 ಶತಕೋಟಿ ಡಾಲರ್ ಅಂದ್ರೆ ₹59,113 ಕೋಟಿ ಎಂದು ನಮೂದಿಸಿತ್ತು. ಎರಡನೇ ಸಾಲಕ್ಕಾಗಿ ಬಳಸಲಾದ ಮತ್ತೊಂದು ಪ್ರಮಾಣಪತ್ರವು ಅವರ ನಿವ್ವಳ ಮೌಲ್ಯವನ್ನು ₹40,562 ಕೋಟಿ ಎಂದು ತೋರಿಸಿದೆ ಎಂದು ಆರೋಪಿಸಲಾಗಿದೆ.
ಬಳಿಕ ಎರಡೂ ಸಾಲ ಸೌಲಭ್ಯಗಳು ತರುವಾಯ ಡೀಫಾಲ್ಟ್ಗೆ ಜಾರಿದವು. ವಸಂತ ಸಾಗರ್ ಸೌಲಭ್ಯಕ್ಕೆ ₹570.50 ಕೋಟಿ ಮತ್ತು ಡಿಜಿಟಲ್ ಸಬ್ಸ್ಕ್ರೈಬರ್ ಮ್ಯಾನೇಜ್ಮೆಂಟ್ ಸಾಲಕ್ಕೆ ₹507.25 ಕೋಟಿ ಬಾಕಿ ಇದೆ. ವೈಯಕ್ತಿಕ ದಿವಾಳಿತನ ವಿಚಾರಣೆಯ ಸಮಯದಲ್ಲಿ ಚಂದ್ರು ನಂತರ ನಿವ್ವಳ ಮೌಲ್ಯದ ಅಂಕಿಅಂಶಗಳನ್ನು ವಿವಾದಿಸಿದ್ದಾರೆ. ಮತ್ತು ತನ್ನ ಆರ್ಥಿಕ ಸ್ಥಿತಿಯನ್ನು ಬಿಂಬಿಸಲು ಸುಳ್ಳು ದಾಖಲೆಗಳನ್ನು ಸೃಷ್ಟಿಸಲಾಗಿದೆ ಎಂದು ಎಲ್ಐಸಿ ಹೌಸಿಂಗ್ ಫೈನಾನ್ಸ್ ಆರೋಪಿಸಿದೆ (ಏಜೆನ್ಸೀಸ್).