

ಚೆನ್ನೈ: ತಮಿಳುನಾಡು ಸಿಎಂ ಸಿ. ಜೋಸೆಫ್ ವಿಜಯ್ ಅವರು ಶುಕ್ರವಾರ(ನ. 06) ವಿರೋಧ ವಿರೋಧ ಪಕ್ಷ ಡಿಎಂಕೆ ವಿರುದ್ಧ ವಾಗ್ದಾಳಿ ನಡೆಸಿದ್ದು, ಕೊಯಮತ್ತೂರಿನ 'ಪೆರಿಯಾರ್ ನಾಲೆಡ್ಜ್ ವರ್ಲ್ಡ್' ಗ್ರಂಥಾಲಯಕ್ಕೆ ಪುಸ್ತಕಗಳನ್ನು ಖರೀದಿಸುವಾಗ ಹಿಂದಿನ ಡಿಎಂಕೆ ಸರ್ಕಾರ ವ್ಯಾಪಕ ಭ್ರಷ್ಟಾಚಾರ ನಡೆಸಿದೆ ಎಂದು ಆರೋಪಿಸಿದ್ದಾರೆ.
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಅವರು, ಡಿಎಂಕೆ ಪಕ್ಷವನ್ನು ಭ್ರಷ್ಟಾಚಾರದ ಮೂಲ ಎಂದು ಟೀಕಿಸಿದ್ದು, ಇತ್ತೀಚಿನ ಪೆರಿಯಾರ್ ನಾಲೆಡ್ಜ್ ವರ್ಲ್ಡ್ ಗ್ರಂಥಾಲಯದ ಭ್ರಷ್ಟಾಚಾರದ ಬಹಿರಂಗಪಡಿಸುವಿಕೆಗಳು ಆ ಪಕ್ಷವು ಯಾವಾಗಲೂ ಭ್ರಷ್ಟಾಚಾರದ ಗುಂಪಾಗಿದೆ ಎಂಬುದನ್ನು ತೋರಿಸಿದೆ ಎಂದು ಕಿಡಿಕಾರಿದ್ದಾರೆ.
ಪೆರಿಯಾರ್ ನಾಲೆಡ್ಜ್ ವರ್ಲ್ಡ್ ಅನ್ನು ವ್ಯಾಪಕ ಪರಿಶೀಲನೆಯ ನಂತರವೇ ನಿರ್ಮಿಸಲಾಗಿದೆ ಎಂದು ಡಿಎಂಕೆ ನಾಯಕತ್ವ ಹೇಳಿಕೊಂಡಿದೆ. ಆದರೆ ಡಿಎಂಕೆ ಸ್ವಲ್ಪ ವಿಭಿನ್ನ ರೀತಿಯಲ್ಲಿ ಭ್ರಷ್ಟಾಚಾರದಲ್ಲಿ ತೊಡಗಿದೆ, ಕೊಯಮತ್ತೂರು ಪೆರಿಯಾರ್ ನಾಲೆಡ್ಜ್ ವರ್ಲ್ಡ್ ಅನ್ನು ಭ್ರಷ್ಟಾಚಾರದ ಜಗತ್ತನ್ನಾಗಿ ಪರಿವರ್ತಿಸಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಭ್ರಷ್ಟಾಚಾರವನ್ನೇ ಅಭ್ಯಾಸ ಮಾಡಿಕೊಂಡಿರುವ ಡಿಎಂಕೆಯನ್ನು ತಮಿಳುನಾಡಿನ ಮುಂದಿನ ಪೀಳಿಗೆಗಳು ಎಂದಿಗೂ ಕ್ಷಮಿಸುವುದಿಲ್ಲ ಎಂದಿರುವ ಅವರು, ಅದು ತಮಗಾಗಿ ಭ್ರಷ್ಟಾಚಾರದ ಒಂದು ಬೃಹತ್ ಸಾಮ್ರಾಜ್ಯವನ್ನೇ ಕಟ್ಟಿಕೊಂಡಿದೆ ಎಂಬುದು ಒಂದಾದ ಮೇಲೊಂದರಂತೆ ಬಯಲಾಗುತ್ತಿದೆ. ಈ ಅಕ್ರಮಗಳನ್ನು ಬಯಲಿಗೆಳೆದ ಲೇಖಕ ಮತ್ತು ಪ್ರಾಧ್ಯಾಪಕ ಪೆರುಮಾಳ್ ಮುರುಗನ್ ಅವರು ಶ್ಲಾಘನೆಗೆ ಅರ್ಹರು ಎಂದು ಹೇಳಿದ್ದಾರೆ (ಏಜೆನ್ಸೀಸ್).