ಅಂದಹಾಗೆ, ಅಖಿಲ್ ಮತ್ತು ಮೇಘಾ ಅವರ ವಿವಾಹವು 2024ರಲ್ಲಿ ಅದ್ಧೂರಿಯಾಗಿ ನೆರವೇರಿತ್ತು. ಆ ಸಂದರ್ಭದಲ್ಲಿ ಇವರ ಮದುವೆಯ ತಮಾಷೆಯ ರೀಲ್ಸ್ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿ ಎಲ್ಲರ ಗಮನ ಸೆಳೆದಿತ್ತು. ಆ ವೈರಲ್ ವಿಡಿಯೋದಲ್ಲಿ ಅಖಿಲ್ ತಮ್ಮ ನವವಧು ಮೇಘಾಗೆ, ತಾವು ಇನ್ಮುಂದೆ ಬೇರೆ ಹೆಣ್ಣುಮಕ್ಕಳ ಇನ್‌ಸ್ಟಾಗ್ರಾಮ್ ಪೋಸ್ಟ್‌ಗಳನ್ನು ಲೈಕ್ ಮಾಡುವುದಿಲ್ಲ ಹಾಗೂ ಬೇರೆ ಯಾರಿಗೂ ಡಿಎಂ (DM) ಮಾಡುವುದಿಲ್ಲ ಎಂದು ತಮಾಷೆಯಾಗಿ ಭಾಷೆ ನೀಡುತ್ತಿರುವುದು ಸೆರೆಯಾಗಿತ್ತು. ಆದರೆ ಕಾಲಚಕ್ರದ ಬದಲಾವಣೆಯಲ್ಲಿ ವಿಡಿಯೋದಲ್ಲಿ ವಾಗ್ದಾನ ನೀಡಿದ್ದ ಅಖಿಲ್‌ಗೆ ಕೈಮುಗಿದು ಜೀವನ ನಡೆಸಬೇಕಿದ್ದ ಪತ್ನಿ ಮೇಘಾ ನಾಯರ್ ಈಗ ಎಸ್ಕೇಪ್ ಆಗಿ ವಿವಾದದ ಕೇಂದ್ರವಾಗಿದ್ದು, ಅಂದು ಅವರು ಪತ್ನಿಗೆ ಭಾಷೆ ನೀಡುವ ಬದಲು ಅವರಿಂದಲೇ ಇಂತಹದ್ದೊಂದು ಭಾಷೆ ಅಥವಾ ಪ್ರಮಾಣವನ್ನು ಪಡೆದುಕೊಳ್ಳಬೇಕಿತ್ತು ಎಂಬಂತೆ ಸದ್ಯದ ಪರಿಸ್ಥಿತಿ ಎಲ್ಲರಲ್ಲೂ ಅಚ್ಚರಿ ಹಾಗೂ ಮರುಕ ಮೂಡಿಸಿದೆ, (ಏಜೆನ್ಸೀಸ್).