ಖ್ಯಾತ ಯೂಟ್ಯೂಬರ್​ ಪತ್ನಿ ಬಸ್​ ಕಂಡಕ್ಟರ್​ ಜತೆ ಪರಾರಿ: ವಿಡಿಯೋ ವೈರಲ್ ಬೆನ್ನಲ್ಲೇ ನಿಜ ಒಪ್ಪಿಕೊಂಡ ಅಖಿಲ್! Akhil NRD​

ಖ್ಯಾತ ಯೂಟ್ಯೂಬರ್​ ಪತ್ನಿ ಬಸ್​ ಕಂಡಕ್ಟರ್​ ಜತೆ ಪರಾರಿ: ವಿಡಿಯೋ ವೈರಲ್ ಬೆನ್ನಲ್ಲೇ ನಿಜ ಒಪ್ಪಿಕೊಂಡ ಅಖಿಲ್! Akhil NRD​
ಖ್ಯಾತ ಯೂಟ್ಯೂಬರ್​ ಪತ್ನಿ ಬಸ್​ ಕಂಡಕ್ಟರ್​ ಜತೆ ಪರಾರಿ: ವಿಡಿಯೋ ವೈರಲ್ ಬೆನ್ನಲ್ಲೇ ನಿಜ ಒಪ್ಪಿಕೊಂಡ ಅಖಿಲ್! Akhil NRD​
Published on

ಪ್ರಮುಖ ಮುಖ್ಯಾಂಶಗಳು

  • ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಅಖಿಲ್ ಎನ್‌ಆರ್‌ಡಿ ಅವರ ಪತ್ನಿ ನಾಪತ್ತೆಯಾಗಿರುವ ವದಂತಿ ನಿಜವೆಂದ ಸ್ನೇಹಿತ ಸಾಯಿ ಕೃಷ್ಣ
  • ಘಟನೆ ನಡೆದ ನಂತರ ಅಖಿಲ್ ಜತೆ ಮಾತನಾಡಿ ಅವರ ಒಪ್ಪಿಗೆಯ ಮೇರೆಗೆ ಮಾತ್ರ ಈ ವಿಡಿಯೋ ಮಾಡಿರುವುದಾಗಿ ಸಾಯಿ ಕೃಷ್ಣ ಹೇಳಿಕೆ
  • ಪತ್ನಿ ಬಿಟ್ಟು ಹೋದರೂ ಆಕೆಯ ವಿರುದ್ಧ ಯಾವುದೇ ಕೆಟ್ಟ ಮಾತುಗಳನ್ನಾಡದ ಅಖಿಲ್ ಅವರ ಗುಣವನ್ನು ಕೊಂಡಾಡಿದ ಸ್ನೇಹಿತ
  • ಅಖಿಲ್ ಮೂಲತಃ ಒಬ್ಬ ಇಂಟ್ರೋವರ್ಟ್ ಆಗಿದ್ದು ಈ ಕಠಿಣ ಪರಿಸ್ಥಿತಿಯಲ್ಲಿ ಅವರ ಗೌರವಕ್ಕೆ ಧಕ್ಕೆ ತರಬೇಡಿ ಎಂದು ಸಾರ್ವಜನಿಕರಲ್ಲಿ ಮನವಿ
ತಿರುವನಂತಪುರ : ಸೋಶಿಯಲ್​ ಮೀಡಿಯಾ ಇನ್ಫ್ಲುಯೆನ್ಸರ್​ ಹಾಗೂ ಡಾನ್ಸರ್​ ಅಖಿಲ್ ಎನ್‌ಆರ್‌ಡಿ ( Akhil NRD ) ಅವರ ವೈಯಕ್ತಿಕ ಜೀವನದ ವಿವಾದಗಳ ಕುರಿತು ಹರಿದಾಡುತ್ತಿರುವ ವದಂತಿಗಳ ಬಗ್ಗೆ ಅಖಿಲ್ ಅವರ ಸ್ನೇಹಿತ, ವ್ಲಾಗರ್ ಹಾಗೂ ಮಾಜಿ ಬಿಗ್ ಬಾಸ್ ಸ್ಪರ್ಧೆ ಸಾಯಿ ಕೃಷ್ಣ ಪ್ರತಿಕ್ರಿಯಿಸಿದ್ದು, ಈ ವರದಿಗಳಲ್ಲಿ ಸತ್ಯಾಂಶವಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಅಖಿಲ್ ಅವರ ಪತ್ನಿ ನಾಪತ್ತೆಯಾಗಿರುವ ಅಥವಾ ಬೇರೆಯವರೊಂದಿಗೆ ಹೋಗಿರುವ ಕುರಿತಾದ ವದಂತಿಗಳು ನಿಜವೆಂದು ಸಾಯಿ ಕೃಷ್ಣ ಖಚಿತಪಡಿಸಿದ್ದು, ಈ ಕಠಿಣ ಪರಿಸ್ಥಿತಿಯಲ್ಲಿ ಅಖಿಲ್ ಹಾಗೂ ಅವರ ಕುಟುಂಬಕ್ಕೆ ಗೌರವ ನೀಡಿ, ಸಾಮಾಜಿಕ ಜಾಲತಾಣದಲ್ಲಿ ಹಬ್ಬುತ್ತಿರುವ ಅಪಪ್ರಚಾರಗಳನ್ನು ನಿಲ್ಲಿಸುವಂತೆ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ತಮ್ಮ ಯೂಟ್ಯೂಬ್ ಚಾನಲ್ ಮೂಲಕ ಅಖಿಲ್​ ಅವರ ದಾಂಪತ್ಯ ಜೀವನದ ಕುರಿತು ಮಾತನಾಡಿರುವ ಸಾಯಿ ಕೃಷ್ಣ, ಘಟನೆ ಸಂಭವಿಸಿದ ನಂತರ ತಾನು ಅಖಿಲ್ ಜತೆ ಮಾತನಾಡಿದ್ದು, ಅವರ ಒಪ್ಪಿಗೆಯ ಮೇರೆಗೆ ಮಾತ್ರವೇ ಈ ವಿಡಿಯೋ ಮಾಡುತ್ತಿರುವುದಾಗಿ ಸ್ಪಷ್ಟಪಡಿಸಿದ್ದಾರೆ. ಅಖಿಲ್ ಮತ್ತು ಅವರ ಪತ್ನಿಯ ಮದುವೆಗೆ ನಾನು ಕೂಡ ಹೋಗಿದ್ದೆ ಎಂದು ತಿಳಿಸಿರುವ ಸಾಯಿ ಕೃಷ್ಣ, 2021ರಿಂದ ಅಖಿಲ್ ಅವರ ಉತ್ತಮ ಸ್ನೇಹಿತನಾಗಿರುವುದರಿಂದ ಈ ದಿಢೀರ್ ಸುದ್ದಿಯು ತಮಗೆ ತೀವ್ರ ಆಘಾತ ತಂದಿದೆ ಎಂದಿದ್ದಾರೆ.
ಇಂತಹ ದುರ್ಘಟನೆಗಳು ಯಾರ ಜೀವನದಲ್ಲಿ ಬೇಕಾದರೂ ಯಾವಾಗ ಬೇಕಾದರೂ ಸಂಭವಿಸಬಹುದು ಎಂದು ಹೇಳಿರುವ ಸಾಯಿ ಕೃಷ್ಣ, ಅಖಿಲ್ ಪತ್ನಿ ಬೇರೆಯವರೊಂದಿಗೆ ತೆರಳಿರುವ ವಿಚಾರದಲ್ಲಿ ಸತ್ಯಾಂಶವಿದೆ ಎಂಬುದನ್ನು ಖಚಿತಪಡಿಸಿದ್ದಾರೆ. ಅಖಿಲ್ ಅವರ ಜೀವನದಲ್ಲಿ ಇಂತಹ ದೊಡ್ಡ ಸಂಕಷ್ಟ ಬಂದಿದ್ದರೂ ಅವರು ಯಾರ ಮೇಲೂ ಗೂಬೆ ಕೂರಿಸುತ್ತಿಲ್ಲ ಮತ್ತು ಇದು ಅವರ ದೊಡ್ಡ ಗುಣ ಎಂದು ಅಖಿಲ್ ಅವರ ವ್ಯಕ್ತಿತ್ವವನ್ನು ಸಾಯಿ ಕೃಷ್ಣ ಕೊಂಡಾಡಿದ್ದಾರೆ.
ಮತ್ತೊಂದೆಡೆ, ಅಖಿಲ್ ಅವರ ವೈಯಕ್ತಿಕ ಬದುಕಿನಲ್ಲಿ ನಡೆದ ಈ ದುರಂತವನ್ನು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬಿಸಿ ಸಂಭ್ರಮಿಸುತ್ತಿರುವುದು ಅತ್ಯಂತ ಬೇಸರದ ಸಂಗತಿ ಎಂದು ಸಾಯಿ ಕೃಷ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಖಿಲ್ ಮೂಲತಃ ಒಬ್ಬ ಇಂಟ್ರೋವರ್ಟ್ ಆಗಿದ್ದು, ಸಾರ್ವಜನಿಕವಾಗಿ ಅಥವಾ ಜನಸಂದಣಿಯ ಮುಂದೆ ಬೆರೆಯಲು ಹಿಂಜರಿಯುವ ಇಂತಹ ಸ್ವಭಾವದ ವ್ಯಕ್ತಿಗೆ ಈ ಆಘಾತ ಎಷ್ಟು ನೋವುಂಟು ಮಾಡಿರಬಹುದು ಎಂಬುದನ್ನು ಎಲ್ಲರೂ ಯೋಚಿಸಬೇಕು ಎಂದಿದ್ದಾರೆ.

ಅಖಿಲ್ ಹಾಗೂ ಅವರ ಪತ್ನಿ ಸೋಶಿಯಲ್ ಮೀಡಿಯಾ ಮೂಲಕ ಪರಿಚಯವಾಗಿ, ಎರಡೂ ಕುಟುಂಬಗಳ ಒಪ್ಪಿಗೆಯೊಂದಿಗೆ ಪ್ರೀತಿಸಿ ಮದುವೆಯಾಗಿದ್ದರು ಮತ್ತು ಅವರು ಬಹಳ ಖುಷಿಯಾಗಿಯೇ ಜೀವನ ನಡೆಸುತ್ತಿದ್ದರು. ಪತ್ನಿ ಬಿಟ್ಟು ಹೋದರೂ ಆಕೆಯ ಬಗ್ಗೆ ಅಖಿಲ್ ಯಾವುದೇ ಕೆಟ್ಟ ಮಾತುಗಳನ್ನು ಆಡಿಲ್ಲ ಮತ್ತು "ಅವಳಿಗೆ ಯಾವುದು ಸರಿಯೆಂದುನಿಸಿತೋ ಅದನ್ನು ಮಾಡಿದ್ದಾಳೆ, ಬಿಡಿ" ಎಂದು ಹೇಳುವ ಮೂಲಕ ದೊಡ್ಡಮನೆತನದ ಗುಣ ತೋರಿದ್ದಾರೆ ಎಂದು ಸಾಯಿ ಕೃಷ್ಣ ವಿವರಿಸಿದ್ದಾರೆ.

ಅಂದಹಾಗೆ, ಅಖಿಲ್ ಮತ್ತು ಮೇಘಾ ಅವರ ವಿವಾಹವು 2023ರಲ್ಲಿ ಅದ್ಧೂರಿಯಾಗಿ ನೆರವೇರಿತ್ತು. ಆ ಸಂದರ್ಭದಲ್ಲಿ ಇವರ ಮದುವೆಯ ತಮಾಷೆಯ ರೀಲ್ಸ್ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿ ಎಲ್ಲರ ಗಮನ ಸೆಳೆದಿತ್ತು. ಆ ವೈರಲ್ ವಿಡಿಯೋದಲ್ಲಿ ಅಖಿಲ್ ತಮ್ಮ ನವವಧು ಮೇಘಾಗೆ, ತಾವು ಇನ್ಮುಂದೆ ಬೇರೆ ಹೆಣ್ಣುಮಕ್ಕಳ ಇನ್‌ಸ್ಟಾಗ್ರಾಮ್ ಪೋಸ್ಟ್‌ಗಳನ್ನು ಲೈಕ್ ಮಾಡುವುದಿಲ್ಲ ಹಾಗೂ ಬೇರೆ ಯಾರಿಗೂ ಡಿಎಂ (DM) ಮಾಡುವುದಿಲ್ಲ ಎಂದು ತಮಾಷೆಯಾಗಿ ಭಾಷೆ ನೀಡುತ್ತಿರುವುದು ಸೆರೆಯಾಗಿತ್ತು. ಆದರೆ ಕಾಲಚಕ್ರದ ಬದಲಾವಣೆಯಲ್ಲಿ ವಿಡಿಯೋದಲ್ಲಿ ವಾಗ್ದಾನ ನೀಡಿದ್ದ ಅಖಿಲ್‌ಗೆ ಕೈಮುಗಿದು ಜೀವನ ನಡೆಸಬೇಕಿದ್ದ ಪತ್ನಿ ಮೇಘಾ ನಾಯರ್ ಈಗ ಎಸ್ಕೇಪ್​ ಆಗಿ ವಿವಾದದ ಕೇಂದ್ರವಾಗಿದ್ದು, ಅಂದು ಅವರು ಪತ್ನಿಗೆ ಭಾಷೆ ನೀಡುವ ಬದಲು ಅವರಿಂದಲೇ ಇಂತಹದ್ದೊಂದು ಭಾಷೆ ಅಥವಾ ಪ್ರಮಾಣವನ್ನು ಪಡೆದುಕೊಳ್ಳಬೇಕಿತ್ತು ಎಂಬಂತೆ ಸದ್ಯದ ಪರಿಸ್ಥಿತಿ ಎಲ್ಲರಲ್ಲೂ ಅಚ್ಚರಿ ಹಾಗೂ ಮರುಕ ಮೂಡಿಸಿದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net