ಶೀಘ್ರದಲ್ಲೇ ತಮಿಳುನಾಡಿನ ಡಿಸಿಎಂ ಆಗಲಿದ್ದಾರಂತೆ ನಟಿ ತ್ರಿಷಾ: ಭಾರಿ ಚರ್ಚೆ ಹುಟ್ಟುಹಾಕಿದ ಸ್ಫೋಟಕ ಹೇಳಿಕೆ! Actress Trisha

ಶೀಘ್ರದಲ್ಲೇ ತಮಿಳುನಾಡಿನ ಡಿಸಿಎಂ ಆಗಲಿದ್ದಾರಂತೆ ನಟಿ ತ್ರಿಷಾ: ಭಾರಿ ಚರ್ಚೆ ಹುಟ್ಟುಹಾಕಿದ ಸ್ಫೋಟಕ ಹೇಳಿಕೆ! Actress Trisha
ಶೀಘ್ರದಲ್ಲೇ ತಮಿಳುನಾಡಿನ ಡಿಸಿಎಂ ಆಗಲಿದ್ದಾರಂತೆ ನಟಿ ತ್ರಿಷಾ: ಭಾರಿ ಚರ್ಚೆ ಹುಟ್ಟುಹಾಕಿದ ಸ್ಫೋಟಕ ಹೇಳಿಕೆ! Actress Trisha
Published on

ಪ್ರಮುಖ ಮುಖ್ಯಾಂಶಗಳು

  • ನಟಿ ತ್ರಿಷಾ ಮತ್ತು ಸಿಎಂ ವಿಜಯ್ ಸಂಬಂಧ ಕುರಿತು ಎಐಎಡಿಎಂಕೆ ನಾಯಕ ಆರ್ ಬಿ ಉದಯಕುಮಾರ್ ವಿವಾದಾತ್ಮಕ ಹೇಳಿಕೆ
  • ತ್ರಿಷಾ ಶೀಘ್ರದಲ್ಲೇ ತಮಿಳುನಾಡಿನ ಉಪಮುಖ್ಯಮಂತ್ರಿ ಆಗ್ತಾರೆ ಎಂದು ಲೇವಡಿ ಮಾಡಿದ ಆರ್ ಬಿ ಉದಯಕುಮಾರ್
  • ಅರ್ಧರಾತ್ರಿ ಸಿಎಂ ಜೊತೆ ಕೇಕ್ ಕತ್ತರಿಸಲು ತ್ರಿಷಾಗೆ ಮಾತ್ರ ಸಾಧ್ಯ ಎಂದ ಎಐಎಡಿಎಂಕೆ ನಾಯಕ ಉದಯಕುಮಾರ್
  • ಜನನಾಯಗನ್ ಸಿನಿಮಾ ರಿಲೀಸ್ ದಿನ ಅಘೋಷಿತ ರಜೆ ನೀಡಿದ್ದಕ್ಕೆ ತಮಿಳುನಾಡು ಸರ್ಕಾರಕ್ಕೆ ಉದಯಕುಮಾರ್ ತೀವ್ರ ತರಾಟೆ
Actress Trisha : ತಮಿಳುನಾಡು ರಾಜಕಾರಣ ಹಾಗೂ ಕಾಲಿವುಡ್ ಸಿನಿ ಅಂಗಳದಲ್ಲಿ ಇದೀಗ ನಟ ಹಾಗೂ ತಮಿಳುನಾಡು ಸಿಎಂ ವಿಜಯ್ ಮತ್ತು ನಟಿ ತ್ರಿಷಾ ನಡುವಿನ ಸಂಬಂಧದ ಕುರಿತಾದ ಚರ್ಚೆಗಳು ಕಾವು ಪಡೆದುಕೊಂಡಿವೆ. ಎಐಎಡಿಎಂಕೆ (AIADMK) ಹಿರಿಯ ನಾಯಕ ಆರ್‌.ಬಿ. ಉದಯಕುಮಾರ್ ಅವರು ನಟಿ ತ್ರಿಷಾ ಅವರ ಕುರಿತು ನೀಡಿರುವ ಹೇಳಿಕೆಯೊಂದು ತಮಿಳುನಾಡಿನಲ್ಲಿ ದೊಡ್ಡ ಮಟ್ಟದ ವಿವಾದಕ್ಕೆ ಕಾರಣವಾಗಿದ್ದು, ತೀವ್ರ ಆಕ್ರೋಶಕ್ಕೆ ಗುರಿಯಾಗಿದೆ.
ಆರ್‌.ಬಿ. ಉದಯಕುಮಾರ್ ಅವರು ನೀಡಿದ ಪ್ರಚೋದನಾಕಾರಿ ಹೇಳಿಕೆಯಲ್ಲಿ, ಮುಖ್ಯಮಂತ್ರಿ ವಿಜಯ್ ಅವರನ್ನು ಭೇಟಿಯಾಗಲು ನಟಿ ತ್ರಿಷಾಗೆ ಮಾತ್ರ ಸಾಧ್ಯ. ಶೀಘ್ರದಲ್ಲೇ ವಿಜಯ್ ಅವರು ತ್ರಿಷಾ ಅವರನ್ನು ಉಪಮುಖ್ಯಮಂತ್ರಿಯನ್ನಾಗಿ ಮಾಡಲಿದ್ದಾರೆ ಎಂದು ಲೇವಡಿ ಮಾಡಿದ್ದಾರೆ. ಅಷ್ಟೇ ಅಲ್ಲದೆ, ಮಧ್ಯರಾತ್ರಿ 12 ಗಂಟೆಗೆ ಮುಖ್ಯಮಂತ್ರಿಯೊಂದಿಗೆ ಕೇಕ್ ಕತ್ತರಿಸಲು ಬೇರೆ ಯಾರಿಗೆ ತಾನೇ ಸಾಧ್ಯ? ಎಂದು ಪ್ರಶ್ನಿಸುವ ಮೂಲಕ ವೈಯಕ್ತಿಕವಾಗಿ ವಾಗ್ದಾಳಿ ನಡೆಸಿದ್ದಾರೆ.
ಇಷ್ಟಕ್ಕೇ ನಿಲ್ಲದ ಉದಯಕುಮಾರ್, ಇತ್ತೀಚೆಗೆ ತೆರೆಕಂಡ ವಿಜಯ್ ನಟನೆಯ 'ಜನನಾಯಗನ್​' ಚಿತ್ರದ ಬಿಡುಗಡೆಯ ದಿನದಂದು ರಾಜ್ಯ ಸರ್ಕಾರ ಘೋಷಿಸಿದ್ದ ಅಘೋಷಿತ ರಜೆಯನ್ನು ತೀವ್ರವಾಗಿ ಖಂಡಿಸಿದರು. ರಾಜ್ಯದ ಮುಖ್ಯಮಂತ್ರಿಯಿಂದ ಹಿಡಿದು ಸಚಿವರುಗಳವರೆಗೆ ಪ್ರತಿಯೊಬ್ಬರೂ ಜನಸೇವೆಯನ್ನು ಬದಿಗಿಟ್ಟು ಕೇವಲ ಸಿನಿಮಾ ವೀಕ್ಷಿಸುವುದರಲ್ಲೇ ನಿರತರಾಗಿದ್ದಾರೆ ಎಂದು ಸರ್ಕಾರದ ಆಡಳಿತದ ವೈಫಲ್ಯಗಳನ್ನು ಹಿಗ್ಗಾಮುಗ್ಗಾ ಟೀಕಿಸಿದರು.
ಮತ್ತೊಂದೆಡೆ, ವಿಜಯ್ ಅವರ ಪತ್ನಿ ಸಂಗೀತಾ ಸ್ವರ್ಣಲಿಂಗಂ ಅವರು ಇತ್ತೀಚೆಗೆ ಚೆಂಗಲ್ಪಟ್ಟು ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದಾಗಿನಿಂದಲೂ, ವಿಜಯ್ ಮತ್ತು ತ್ರಿಷಾ ಸಂಬಂಧದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗಳು ನಡೆಯುತ್ತಿವೆ. ನಟಿಯೊಂದಿಗಿನ ಅಕ್ರಮ ಸಂಬಂಧವೇ ವಿಚ್ಛೇದನಕ್ಕೆ ಕಾರಣ ಎಂದು ಸಂಗೀತಾ ತಮ್ಮ ಅರ್ಜಿಯಲ್ಲಿ ಆರೋಪಿಸಿದ್ದಾರೆನ್ನಲಾಗಿದ್ದು, ಈ ದಂಪತಿಯ ಬೇರ್ಪಡೆಗೆ ತ್ರಿಷಾ ಅವರೇ ಪ್ರಮುಖ ಕಾರಣ ಎಂದು ಹಲವರು ಆರೋಪಿಸುತ್ತಿದ್ದಾರೆ. ಇದರಿಂದಾಗಿ ತ್ರಿಷಾ ಅವರು ಸೋಷಿಯಲ್ ಮೀಡಿಯಾದಲ್ಲಿ ತೀವ್ರ ಸೈಬರ್ ದಾಳಿ ಮತ್ತು ಟ್ರೋಲ್‌ಗಳನ್ನು ಎದುರಿಸುವಂತಾಗಿದೆ.
ವಿಜಯ್ ಮತ್ತು ತ್ರಿಷಾ ಜೋಡಿಯು ಕಳೆದ ಎರಡೂವರೆ ದಶಕಗಳಿಂದ ತಮಿಳು ಚಿತ್ರರಂಗದ ಅತ್ಯಂತ ಜನಪ್ರಿಯ ಮತ್ತು ಯಶಸ್ವಿ ಜೋಡಿಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ. 2004 ರಲ್ಲಿ ಮೂಡಿಬಂದ ಸೂಪರ್ ಹಿಟ್ 'ಗಿಲ್ಲಿ' ಚಿತ್ರದ ಮೂಲಕ ಆರಂಭವಾದ ತೆರೆ ಮೇಲಿನ ಕೆಮಿಸ್ಟ್ರಿ, 'ತಿರುಪಾಚಿ', 'ಆದಿ', 'ಕುರುವಿ' ಹಾಗೂ ಇತ್ತೀಚೆಗೆ ಬಿಡುಗಡೆಯಾಗಿ ಸೌಂಡ್ ಮಾಡಿದ್ದ 'ಲಿಯೋ' ಚಿತ್ರದವರೆಗೆ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net