ಟೀಮ್​​ ಇಂಡಿಯಾದ ಡ್ರೆಸ್ಸಿಂಗ್​ ರೂಮ್ ವಾತಾವರಣವನ್ನೇ ಬದಲಿಸಿದ ವಿವಿಎಸ್​ ಲಕ್ಷ್ಮಣ್​: ಭಾರತದ ಗೆಲುವಿನ ಸೀಕ್ರೆಟ್​ ಬಯಲು! VVS Laxman

ಟೀಮ್​​ ಇಂಡಿಯಾದ ಡ್ರೆಸ್ಸಿಂಗ್​ ರೂಮ್ ವಾತಾವರಣವನ್ನೇ ಬದಲಿಸಿದ ವಿವಿಎಸ್​ ಲಕ್ಷ್ಮಣ್​: ಭಾರತದ ಗೆಲುವಿನ ಸೀಕ್ರೆಟ್​ ಬಯಲು! VVS Laxman
ಟೀಮ್​​ ಇಂಡಿಯಾದ ಡ್ರೆಸ್ಸಿಂಗ್​ ರೂಮ್ ವಾತಾವರಣವನ್ನೇ ಬದಲಿಸಿದ ವಿವಿಎಸ್​ ಲಕ್ಷ್ಮಣ್​: ಭಾರತದ ಗೆಲುವಿನ ಸೀಕ್ರೆಟ್​ ಬಯಲು! VVS Laxman
Published on

ಪ್ರಮುಖ ಮುಖ್ಯಾಂಶಗಳು

  • ಜಿಂಬಾಬ್ವೆ ವಿರುದ್ಧ ಸರಣಿ ಗೆದ್ದು ವೈಟ್‌ವಾಶ್‌ಗೆ ಸಜ್ಜಾದ ಶ್ರೇಯಸ್ ಅಯ್ಯರ್ ಪಡೆ
  • ವಿವಿಎಸ್ ಲಕ್ಷ್ಮಣ್ ಮಾಸ್ಟರ್ ಪ್ಲಾನ್‌ನಿಂದ ಗೆಲುವಿನ ಹಾದಿಗೆ ಮರಳಿದ ಭಾರತ ಟಿ20 ತಂಡ
  • ಯುವ ಪಡೆಗೆ ಹೊಸ ಚೈತನ್ಯ ತುಂಬಿ ಜಿಂಬಾಬ್ವೆ ಸರಣಿ ಕೈವಶ ಮಾಡಿದ ಕೋಚ್ ಲಕ್ಷ್ಮಣ್
  • ತಿಲಕ್ ವರ್ಮಾ ಮತ್ತು ಇಶಾನ್ ಕಿಶನ್ ಪಾಲಾದ ಲಕ್ಷ್ಮಣ್ ಅವರ ಬೆಸ್ಟ್ ಆಟಿಟ್ಯೂಡ್ ಪ್ರಶಸ್ತಿ
VVS Laxman : ಸಾಲು ಸಾಲು ಸರಣಿ ಸೋಲುಗಳಿಂದ ಕಂಗೆಟ್ಟಿದ್ದ ಶ್ರೇಯಸ್ ಅಯ್ಯರ್​ ನಾಯಕತ್ವದ ಭಾರತದ ಟಿ20 ಕ್ರಿಕೆಟ್ ತಂಡ ಕೊನೆಗೂ ತನ್ನ ಹಳೆಯ ಲಯಕ್ಕೆ ಮರಳಿದೆ. ಸದ್ಯ ಜಿಂಬಾಬ್ವೆ ಪ್ರವಾಸದಲ್ಲಿರುವ ಟೀಮ್​ ಇಂಡಿಯಾ, ಮೂರು ಪಂದ್ಯಗಳು ಟಿ20 ಸರಣಿಯಲ್ಲಿ ಎರಡು ಪಂದ್ಯಗಳನ್ನು ಗೆದ್ದು ಸರಣಿ ಜಯಿಸಿದೆ. ಇನ್ನು ಒಂದು ಪಂದ್ಯ ಬಾಕಿ ಇದ್ದು, ಅದನ್ನು ಗೆದ್ದು ಜಿಂಬಾಬ್ವೆ ತಂಡವನ್ನು ವೈಟ್​ ವಾಶ್​ ಮಾಡಲು ಎದರು ನೋಡುತ್ತಿದೆ. ಇತ್ತೀಚೆಗೆ ಐರ್ಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧದ ಸರಣಿಗಳಲ್ಲಿ ಮುಖಭಂಗ ಅನುಭವಿಸಿದ್ದ ಭಾರತ ತಂಡಕ್ಕೆ ಈ ಗೆಲುವು ಅತ್ಯಂತ ನಿರ್ಣಾಯಕವಾಗಿದ್ದು, ನಾಯಕನಾಗಿ ಶ್ರೇಯಸ್ ಅಯ್ಯರ್ ಅವರಿಗೆ ಒಲಿದ ಚೊಚ್ಚಲ ಸರಣಿ ಜಯ ಇದಾಗಿದೆ!
ಮುಖ್ಯ ತರಬೇತುದಾರ ಗೌತಮ್ ಗಂಭೀರ್ ಸೇರಿದಂತೆ ಹಿರಿಯ ಸಹಾಯಕ ಸಿಬ್ಬಂದಿಗೆ ಬಿಸಿ‍ಸಿಐ (BCCI) ವಿಶ್ರಾಂತಿ ನೀಡಿರುವ ಹಿನ್ನೆಲೆಯಲ್ಲಿ, ಎನ್‌ಸಿಎ (NCA) ಮುಖ್ಯಸ್ಥ ವಿ.ವಿ.ಎಸ್. ಲಕ್ಷ್ಮಣ್ ಅವರು ಈ ಸರಣಿಗೆ ಹಂಗಾಮಿ ಮುಖ್ಯ ತರಬೇತುದಾರರಾಗಿ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಅವರೊಂದಿಗೆ ಬ್ಯಾಟಿಂಗ್ ತರಬೇತುದಾರರಾಗಿ ಋಷಿಕೇಶ್ ಕಾನಿಟ್ಕರ್ ಹಾಗೂ ಬೌಲಿಂಗ್ ತರಬೇತುದಾರರಾಗಿ ಸುನಿಲ್ ಜೋಶಿ ಸಾಥ್ ನೀಡುತ್ತಿದ್ದು, ಡ್ರೆಸ್ಸಿಂಗ್ ರೂಮ್‌ನ ವಾತಾವರಣ ಮತ್ತು ತಂಡದ ಕ್ರಿಕೆಟ್ ಸಿದ್ಧಾಂತವನ್ನು ಮತ್ತಷ್ಟು ಬಲಪಡಿಸಲು ಲಕ್ಷ್ಮಣ್ ಹೊಸ ಆಲೋಚನೆಯೊಂದನ್ನು ಜಾರಿಗೆ ತಂದಿದ್ದಾರೆ.
ಮೈದಾನದಲ್ಲಿ ಪಾಸಿಟಿವ್​ ಮನೋಭಾವ ಮತ್ತು ಶಿಸ್ತನ್ನು ಉತ್ತೇಜಿಸುವ ಉದ್ದೇಶದಿಂದ 'ಬೆಸ್ಟ್ ಆಟಿಟ್ಯೂಡ್ ಪ್ರಶಸ್ತಿ'ಯನ್ನು ಪರಿಚಯಿಸಲಾಗಿದೆ. ಈ ಪ್ರಶಸ್ತಿಯನ್ನು ಕೇವಲ ಗಳಿಸಿದ ರನ್ ಅಥವಾ ಪಡೆದ ವಿಕೆಟ್‌ಗಳ ಆಧಾರದ ಮೇಲೆ ನೀಡದೆ, ಆಟಗಾರನ ಸೌಜನ್ಯಯುತ ನಡವಳಿಕೆ, ಸಹಪಾಠಿಗಳಿಗೆ ನೀಡುವ ಪ್ರೋತ್ಸಾಹ ಹಾಗೂ ಒತ್ತಡದ ಸನ್ನಿವೇಶಗಳಲ್ಲಿ ತೋರುವ ಸ್ಥಿರತೆಯನ್ನು ಪರಿಗಣಿಸಿ ಪ್ರಧಾನ ಮಾಡಲಾಗುತ್ತದೆ.
ಮೊದಲನೇ ಟಿ20 ಪಂದ್ಯದ ಮುಕ್ತಾಯದ ನಂತರ ಯುವ ಬ್ಯಾಟರ್ ತಿಲಕ್ ವರ್ಮಾ 'ಬೆಸ್ಟ್ ಆಟಿಟ್ಯೂಡ್ ಪ್ರಶಸ್ತಿ'ಗೆ ಭಾಜನರಾದರು. ಈ ಸಂದರ್ಭದಲ್ಲಿ ಮಾತನಾಡಿದ ತರಬೇತುದಾರ ಲಕ್ಷ್ಮಣ್, "ಆಟಗಾರನಿಗೆ ಕೌಶಲ್ಯ (ಸ್ಕಿಲ್) ಎಷ್ಟು ಮುಖ್ಯವೋ, ಸರಿಯಾದ ಮನೋಭಾವವೂ (ಆಟಿಟ್ಯೂಡ್) ಅಷ್ಟೇ ಮುಖ್ಯ ಎಂದು ಈ ಪ್ರಶಸ್ತಿಯ ಮಹತ್ವವನ್ನು ಬಣ್ಣಿಸಿದರು. ಇನ್ನೂ ಎರಡನೇ ಪಂದ್ಯದಲ್ಲಿ ಇಶಾನ್​ ಕಿಶನ್​ ಅವರು ಈ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.
ಒಟ್ಟಾರೆಯಾಗಿ ಹೇಳಬೇಕೆಂದರೆ, ವಿ.ವಿ.ಎಸ್. ಲಕ್ಷ್ಮಣ್ ಅವರು ಟೀಮ್ ಇಂಡಿಯಾದ ಹಂಗಾಮಿ ಮುಖ್ಯ ತರಬೇತುದಾರರಾಗಿ ಜವಾಬ್ದಾರಿ ವಹಿಸಿಕೊಂಡ ನಂತರ ಯುವ ಆಟಗಾರರಲ್ಲಿ ಹೊಸ ಚೈತನ್ಯ ಮತ್ತು ಶಿಸ್ತನ್ನು ತುಂಬುವ ಮೂಲಕ ಟಿ20 ತಂಡದ ಚಿತ್ರಣವನ್ನೇ ಬದಲಾಯಿಸಿದ್ದಾರೆ. ಸರಣಿ ಸೋಲುಗಳಿಂದ ಕಂಗಾಲಾಗಿದ್ದ ತಂಡಕ್ಕೆ ಗೆಲುವಿನ ಹಾದಿ ತೋರಿಸುವುದರ ಜೊತೆಗೆ, ನಾಯಕ ಶ್ರೇಯಸ್ ಅಯ್ಯರ್ ಹಾಗೂ ತಿಲಕ್ ವರ್ಮಾ ಅವರಂತಹ ಯುವ ಆಟಗಾರರಿಗೆ ಮುಕ್ತವಾಗಿ ಆಡುವ ಸ್ವಾತಂತ್ರ್ಯ ಮತ್ತು ಆತ್ಮವಿಶ್ವಾಸವನ್ನು ನೀಡಿದ್ದಾರೆ. ಬ್ಯಾಟಿಂಗ್ ತರಬೇತುದಾರ ಋಷಿಕೇಶ್ ಕಾನಿಟ್ಕರ್ ಮತ್ತು ಬೌಲಿಂಗ್ ತರಬೇತುದಾರ ಸುನಿಲ್ ಜೋಶಿ ಅವರೊಂದಿಗೆ ಸೇರಿ ಲಕ್ಷ್ಮಣ್ ಅವರು ಟೀಮ್ ಇಂಡಿಯಾವನ್ನು ಹೆಚ್ಚು ವೃತ್ತಿಪರ, ಕ್ರಿಯಾಶೀಲ ಮತ್ತು ಸದಾ ಸಕಾರಾತ್ಮಕವಾಗಿ ಆಲೋಚಿಸುವ ತಂಡವಾಗಿ ಪರಿವರ್ತಿಸಿದ್ದಾರೆ.
ಅಂದಹಾಗೆ, ಭಾರತ ಮತ್ತು ಜಿಂಬಾಬ್ವೆ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯು ಹರಾರೆಯಲ್ಲಿ ನಡೆಯುತ್ತಿದ್ದು, ಈಗಾಗಲೇ ಎರಡು ಟಿ20 ಪಂದ್ಯ ಮುಕ್ತಾಯಗೊಂಡಿದೆ. ಸರಣಿಯ ಮೂರನೇ ಟಿ20 ಪಂದ್ಯ ಇಂದು ಸಂಜೆ 4.30ಕ್ಕೆ ಆರಂಭವಾಗಲಿದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net