ರೈಲಿನಲ್ಲಿ ನಟಿ ರಂಪಾಟ: ಸೀಟ್ ಬಿಟ್ಟುಕೊಡಲು ಹೇಳಿದಕ್ಕೆ RPF ಮೇಲೆ ರೇಜರ್ ದಾಳಿ; ಅಂತಾರಾ ಬ್ಯಾನರ್ಜಿ ವಿರುದ್ಧ FIR! Antara Banerjee
ಆರ್‌ಪಿಎಫ್ ಸಿಬ್ಬಂದಿ ಮೇಲೆ ರೇಜರ್‌ನಿಂದ ದಾಳಿ ನಡೆಸಿದ ನಟಿ ಅಂತಾರಾ ಬ್ಯಾನರ್ಜಿ
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ರೈಲಿನಲ್ಲಿ ಸೀಟ್ ವಿಚಾರಕ್ಕೆ ನಟಿ ಹೈಡ್ರಾಮಾ
ಆರ್‌ಪಿಎಫ್ ಸಿಬ್ಬಂದಿ ಮೇಲೆ ರೇಜರ್‌ನಿಂದ ದಾಳಿ ನಡೆಸಿದ ನಟಿ ಅಂತಾರಾ ಬ್ಯಾನರ್ಜಿ
ಅಂತಾರಾ ಬ್ಯಾನರ್ಜಿ ವಿರುದ್ಧ ಪ್ರಕರಣ ದಾಖಲು
ಮುಂಬೈ: ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ, ರೈಲ್ವೆ ರಕ್ಷಣಾ ಪಡೆಯ ಸಿಬ್ಬಂದಿ ಮೇಲೆ ರೇಜರ್ ಮೂಲಕ ದಾಳಿ ನಡೆಸಿದ ಆರೋಪದಲ್ಲಿ ನಟಿ, ಮಾಡೆಲ್ ಅಂತಾರಾ ಬ್ಯಾನರ್ಜಿ (Antara Banerjee) ವಿರುದ್ಧ ಪ್ರಕರಣ ದಾಖಲಾಗಿದೆ.
ಆಗಸ್ಟ್ 12 ರಂದು ಅರಾವಳಿ ಎಕ್ಸ್ಪ್ರೆಸ್ ಮೂಲಕ, ಸೂರತ್ಗೆ ಪ್ರಯಾಣ ಬೆಳೆಸಿದ್ದ ನಟಿ, ಸ್ಲೀಪರ್ ಕೋಚ್ನ ಟಿಕೆಟ್ ಹೊಂದಿದ್ದು, ಎಸಿ ಬೋಗಿಯಲ್ಲಿ ಪ್ರಯಾಣಕ್ಕೆ ಮುಂದಾಗಿದ್ದಾಳೆ. ಆಗ ಆಕೆಯನ್ನು ತಡೆಯಲು ಮುಂದಾದ ರೈಲ್ವೆ ಪೊಲೀಸರ ಮೇಲೆ ರೇಜರ್ ಮೂಲಕ ನಟಿ ದಾಳಿ ನಡೆಸಿದ್ದಾಳೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಮಾಹಿತಿ ಪ್ರಕಾರ, ಈ ಘಟನೆಯು ಬೋರಿವಲಿ ಮತ್ತು ಧಾಹಾನು ನಿಲ್ದಾಣದ ನಡುವೆ ರಾತ್ರಿ ಸುಮಾರು 9.30 ರಿಂದ 10 ಗಂಟೆಗೆ ನಡೆದಿದೆ. ಕೇವಲ ಸ್ಲೀಪರ್ ಟಿಕೆಟ್ ಹೊಂದಿದ್ದ ನಟಿ ಅಂತಾರಾ ಬ್ಯಾನರ್ಜಿ, ಎಸಿ ಬೋಗಿಯಲ್ಲಿ ಪ್ರಯಾಣ ಆರಂಭಿಸಿದ್ದಾರೆ.
ಆದರೆ, ಆ ಎಸಿ ಸೀಟ್ ಬುಕ್ ಮಾಡಿದ್ದ ಪ್ರಯಾಣಿಕರು ಅಲ್ಲಿಗೆ ಬಂದು, ಅಂತಾರಾಗೆ ಸೀಟ್ ಬಿಟ್ಟುಕೊಡುವಂತೆ ಕೇಳಿದ್ದಾರೆ. ಇದಕ್ಕೆ ಆಕೆ ಒಪ್ಪದೆ ಜಗಳ ಮಾಡಿದಾಗ, ಅವರು ಟಿಕೆಟ್ ಕಲೆಕ್ಟರ್ ಹಾಗೂ ಆರ್ಪಿಎಫ್ಗೆ ಈ ಕುರಿತು ಮಾಹಿತಿ ನೀಡಿದ್ದಾರೆ.
ಈ ಕುರಿತು ವಿಚಾರಣೆ ನಡೆಸಿದ ಟಿಸಿ ಹರಿಕೇಶ್ ತ್ರಿಪಾಠಿ, ಹಾಗೂ ಆರ್‌ಪಿಎಫ್ ಸಬ್-ಇನ್ಸ್ಪೆಕ್ಟರ್ ಯಾಮಿನಿಕಾಂತ್ ಮಿಶ್ರಾ ಮತ್ತು ಕಾನ್ ಸ್ಟೇಬಲ್ ರಾಜೇಶ್ ಕುಮಾರ್ ಅಂತಾರಾಳಿಗೆ ಸೀಟ್ ಬಿಟ್ಟುಕೊಟ್ಟು, ತಮ್ಮ ಸ್ಲೀಪರ್ ಬೋಗಿಗೆ ಹೊರಡಲು ಹೇಳಿದ್ದಾರೆ.
ಅದರೆ, ಇದರಿಂದ ಕುಪಿತಗೊಂಡ ನಟಿ, ಟಿಸಿ ಮತ್ತು ಆರ್‌ಪಿಎಫ್ ಅಧಿಕಾರಿಗಳಿಗೆ ಅವಾಚ್ಯ ಪದಗಳಲ್ಲಿ ನಿಂದಿಸಿದ್ದಾಳೆ. ನಂತರ ತನ್ನ ಬಟ್ಟೆ ಬಿಚ್ಚಲು ಶುರುವಿಟ್ಟಾಗ, ಆಕೆಯನ್ನು ತಡೆಯಲು ಮುಂದಾದ ಯಾಮಿನಿಕಾಂತ್ ಮಿಶ್ರಾ ಅವರ ಮೇಲೆ ರೇಜರ್ ಮೂಲಕ ಹಲ್ಲೆ ನಡೆಸಿದ್ದು, ಅವರ ಮೊಬೈಲ್ನ್ನು ಆಕೆ ಒಡೆದಿದ್ದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಎಸ್ಕೇಪ್ ಆಗಲು ವಿಫಲ ಯತ್ನ!
ರೇಜರ್ ದಾಳಿ ನಡೆಸಿ ನಟಿ ಓಡಿಹೋಗಲು ಯತ್ನಿಸಿದಾಗ, ಎಸಿ ಕೋಚ್ನ ಎಲ್ಲಾ ಬಾಗಿಲನ್ನು ಲಾಕ್ ಮಾಡಲಾಗಿದೆ. ನಂತರ ನಟಿಯನ್ನು ಬಂಧಿಸಿ ಬೋರಿವಲಿ ಠಾಣೆಗೆ ಕರೆದೊಯ್ದು ಎಫ್ಐಆರ್ ದಾಖಲಿಸಲಾಗಿದೆ. ಆದರೆ ಇಂದು (ಸೋಮವಾರ, ಆ.16) ನಟಿ ಜಾಮೀನು ಪಡೆದಿದ್ದಾರೆಂದು ತಿಳಿದುಬಂದಿದೆ, (ಏಜನ್ಸೀಸ್).