ಅಭಿಷೇಕ್, ರಿಂಕು ಅಬ್ಬರ; ಕಿವೀಸ್ ವಿರುದ್ಧ 48 ರನ್‌ಗಳ ಭರ್ಜರಿ ಜಯ ಸಾಧಿಸಿದ ಭಾರತ: ಸರಣಿಯಲ್ಲಿ 1-0 ಮುನ್ನಡೆ | India win

ಅಭಿಷೇಕ್, ರಿಂಕು ಅಬ್ಬರ; ಕಿವೀಸ್ ವಿರುದ್ಧ 48 ರನ್‌ಗಳ ಭರ್ಜರಿ ಜಯ ಸಾಧಿಸಿದ ಭಾರತ: ಸರಣಿಯಲ್ಲಿ 1-0 ಮುನ್ನಡೆ
ಅಭಿಷೇಕ್, ರಿಂಕು ಅಬ್ಬರ; ಕಿವೀಸ್ ವಿರುದ್ಧ 48 ರನ್‌ಗಳ ಭರ್ಜರಿ ಜಯ ಸಾಧಿಸಿದ ಭಾರತ: ಸರಣಿಯಲ್ಲಿ 1-0 ಮುನ್ನಡೆ
Published on
ನಾಗ್ಪುರ: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಐದು ಪಂದ್ಯಗಳ ಟಿ20 ಸರಣಿಯ ಮೊದಲ ಹಣಾಹಣಿಯಲ್ಲಿ ಟೀಮ್ ಇಂಡಿಯಾ(India win) ಭರ್ಜರಿ ಜಯ ದಾಖಲಿಸಿದೆ. ನಾಗ್ಪುರದಲ್ಲಿ ನಡೆದ ಹೈ-ವೋಲ್ಟೇಜ್ ಪಂದ್ಯದಲ್ಲಿ ಭಾರತ ಪ್ರವಾಸಿ ನ್ಯೂಜಿಲೆಂಡ್ ತಂಡವನ್ನು 48 ರನ್‌ಗಳಿಂದ ಮಣಿಸುವ ಮೂಲಕ ಸರಣಿಯಲ್ಲಿ ಶುಭಾರಂಭ ಮಾಡಿದೆ.

ನ್ಯೂಜಿಲೆಂಡ್ ಚೇಸಿಂಗ್: ಆರಂಭದಲ್ಲೇ ಎಡವಿದ ಕಿವೀಸ್

239 ರನ್‌ಗಳ ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್‌ಗೆ ಭಾರತೀಯ ಬೌಲರ್‌ಗಳು ಆರಂಭದಲ್ಲೇ ಚಳಿ ಬಿಡಿಸಿದರು. ಅರ್ಶ್‌ದೀಪ್ ಸಿಂಗ್ ಮೊದಲ ಓವರ್‌ನಲ್ಲೇ ಕಾನ್ವೇ ವಿಕೆಟ್ ಪಡೆದರೆ, ಹಾರ್ದಿಕ್ ಪಾಂಡ್ಯ ರಚಿನ್ ರವೀಂದ್ರ ಅವರನ್ನು ಔಟ್ ಮಾಡಿದರು. ಕೇವಲ 1 ರನ್‌ಗೆ 2 ವಿಕೆಟ್ ಕಳೆದುಕೊಂಡು ನ್ಯೂಜಿಲೆಂಡ್ ಸಂಕಷ್ಟಕ್ಕೆ ಸಿಲುಕಿತು.

ಗ್ಲೆನ್ ಫಿಲಿಪ್ಸ್ ಹೋರಾಟ

ನ್ಯೂಜಿಲೆಂಡ್ ಪರ ಗ್ಲೆನ್ ಫಿಲಿಪ್ಸ್ ಅತ್ಯುತ್ತಮವಾಗಿ ಆಡಿ 78 ರನ್ (40 ಎಸೆತ) ಗಳಿಸಿದರು. ಆದರೆ ಅಕ್ಷರ್ ಪಟೇಲ್ ಅವರ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಅಲ್ಲದೆ, ವರುಣ್ ಚಕ್ರವರ್ತಿ ಮತ್ತು ಅಕ್ಷರ್ ಪಟೇಲ್ ಮಧ್ಯಮ ಓವರ್‌ಗಳಲ್ಲಿ ರನ್ ವೇಗಕ್ಕೆ ಬ್ರೇಕ್ ಹಾಕಿದರು.

ಭಾರತದ ಬ್ಯಾಟಿಂಗ್ ವೈಭವ: ರನ್‌ಗಳ ಮಳೆ

ಮೊದಲು ಬ್ಯಾಟಿಂಗ್ ಮಾಡಿದ ಭಾರತ, ಕಿವೀಸ್ ಬೌಲರ್‌ಗಳನ್ನು ಮನಬಂದಂತೆ ದಂಡಿಸಿ ಈ ಸರಣಿಯಲ್ಲಿ ಬೃಹತ್ ಮೊತ್ತ ದಾಖಲಿಸಿತು.

ಅಭಿಷೇಕ್ ಶರ್ಮಾ ಅಬ್ಬರ

ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಕೇವಲ 35 ಎಸೆತಗಳಲ್ಲಿ 84 ರನ್ ಚಚ್ಚಿದರು. ಇವರ ಇನ್ನಿಂಗ್ಸ್‌ನಲ್ಲಿ 8 ಭರ್ಜರಿ ಸಿಕ್ಸರ್‌ಗಳಿದ್ದವು. ಅಲ್ಲದೆ, ತಮ್ಮ 100ನೇ ಟಿ20 ಪಂದ್ಯವಾಡಿದ ನಾಯಕ ಸೂರ್ಯಕುಮಾರ್ ಯಾದವ್ 32 ರನ್ ಗಳಿಸಿ ಅಭಿಷೇಕ್‌ಗೆ ಉತ್ತಮ ಸಾಥ್ ನೀಡಿದರು.

ರಿಂಕು ಸಿಂಗ್ ಫಿನಿಶಿಂಗ್

ಕೊನೆಯಲ್ಲಿ ಅಬ್ಬರಿಸಿದ ರಿಂಕು ಸಿಂಗ್ ಕೇವಲ 20 ಎಸೆತಗಳಲ್ಲಿ ಔಟಾಗದೆ 44 ರನ್ ಗಳಿಸಿ ತಂಡದ ಮೊತ್ತವನ್ನು 238ಕ್ಕೆ ತಲುಪಿಸಿದರು.
ಕೊನೆಯ ಓವರ್‌ನಲ್ಲಿ ನ್ಯೂಜಿಲೆಂಡ್‌ಗೆ ಅಸಾಧ್ಯವಾದ ಗುರಿ ಇತ್ತು. ಆ ಓವರ್ ಎಸೆದ ಶಿವಂ ದುಬೆ ಎರಡು ವಿಕೆಟ್ ಕಬಳಿಸಿ ಕಿವೀಸ್ ಪಡೆಯನ್ನು 190 ರನ್‌ಗಳಿಗೆ ನಿಯಂತ್ರಿಸಿದರು. ಈ ಮೂಲಕ ಭಾರತ 48 ರನ್‌ಗಳ ಭರ್ಜರಿ ಜಯ ಸಾಧಿಸಿ, 5 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net