ನ್ಯಾಯಾಂಗದ ನಿಷ್ಪಕ್ಷಪಾತತೆ ಪ್ರಶ್ನಿಸಿದ ಅಭಿಷೇಕ್ ಬ್ಯಾನರ್ಜಿ: ಸುವೇಂದು ಅಧಿಕಾರಿ ವಿರುದ್ಧದ ಎಫ್‌ಐಆರ್​ಗೆ ತಡೆಯಾಜ್ಞೆ, ನನಗೇಕೆ ಇಲ್ಲ? | Abhishek Banerjee

ಪಶ್ಚಿಮ ಬಂಗಾಳದ ಮಾಜಿ ಸಿಎಂ ಮಮತಾ ಬ್ಯಾನರ್ಜಿ ಅವರ ಅಳಿಯ ಮತ್ತು ಟಿಎಂಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ನ್ಯಾಯಾಂಗದ ವಿರುದ್ಧದ ತಮ್ಮ ಟೀಕೆಯನ್ನು ಮತ್ತಷ್ಟು ತೀವ್ರಗೊಳಿಸಿದ್ದಾರೆ. ನ್ಯಾಯಾಂಗದ ನಿಷ್ಪಕ್ಷಪಾತವನ್ನು ಪ್ರಶ್ನಿಸಿದ್ದಾರೆ.
ತೃಣಮೂಲ ಕಾಂಗ್ರೆಸ್ ನಾಯಕ ಅಭಿಷೇಕ್ ಬ್ಯಾನರ್ಜಿ
ತೃಣಮೂಲ ಕಾಂಗ್ರೆಸ್ ನಾಯಕ ಅಭಿಷೇಕ್ ಬ್ಯಾನರ್ಜಿ
Published on: 

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಮಾಜಿ ಸಿಎಂ ಮಮತಾ ಬ್ಯಾನರ್ಜಿ ಅವರ ಅಳಿಯ ಮತ್ತು ಟಿಎಂಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ನ್ಯಾಯಾಂಗದ ವಿರುದ್ಧದ ತಮ್ಮ ಟೀಕೆಯನ್ನು ಮತ್ತಷ್ಟು ತೀವ್ರಗೊಳಿಸಿದ್ದಾರೆ. ನ್ಯಾಯಾಂಗದ ನಿಷ್ಪಕ್ಷಪಾತವನ್ನು ಪ್ರಶ್ನಿಸಿದ್ದಾರೆ.

ಕೆಲವು ನ್ಯಾಯಾಧೀಶರು ಬಿಜೆಪಿ ಪದ ಕೆಲಸ ಮಾಡ್ತಿದ್ದಾರೆ ಎಂಬ ಹೇಳಿಕೆಗೆ ಸಂಬಂಧಿಸಿದಂತೆ ನ್ಯಾಯಾಂಗದ ವಿರುದ್ಧ ನೀಡಿದ ಹೇಳಿಕೆಗಳಿಗಾಗಿ, ಮಂಗಳವಾರ(ನ. 17) ಕೋಲ್ಕತ್ತಾ ಹೈಕೋರ್ಟ್ ಅವರಿಗೆ 'ಕ್ರಿಮಿನಲ್ ನ್ಯಾಯಾಂಗ ನಿಂದನೆ' ಆರೋಪದಡಿ ಕಾರಣ ಕೇಳುವ ನೋಟಿಸ್ ಜಾರಿಗೊಳಿಸಿದೆ.

ಹೈಕೋರ್ಟ್ ನೋಟಿಸ್ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಅಭಿಷೇಕ್, ಸಾಂವಿಧಾನಿಕ ಸಂಸ್ಥೆಗಳ ವಿರುದ್ಧ ಬಿಜೆಪಿ ನಾಯಕರು ಇದೇ ರೀತಿ ಹೇಳಿಕೆ ನೀಡಿದಾಗ ಯಾಕೆ ಈ ರೀತಿ ಕ್ರಮಕೈಗೊಳ್ಳಲಿಲ್ಲ, ನನಗೆ ಮಾತ್ರ ಯಾಕೆ ನೋಟಿಸ್ ನೀಡಲಾಗಿದೆ ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ, ಬಿಜೆಪಿ ನಾಯಕರಿಗೆ ನ್ಯಾಯಾಂಗದಲ್ಲಿ ವಿಶೇಷ ಆದ್ಯತೆ ಸಿಗುತ್ತಿದೆ ಎಂದು ಆರೋಪಿಸಿದ್ದಾರೆ.

Also Read
ಅನುದಾನ ಬಿಡುಗಡೆಯಲ್ಲಿ ಕೇಂದ್ರ ತಾರತಮ್ಯ; ಮತ್ತೆ ಸುಪ್ರೀಂಕೋರ್ಟ್ ಮೆಟ್ಟಿಲೇರಲು ಸಜ್ಜಾದ ರಾಜ್ಯ ಸರ್ಕಾರ: ಈಶ್ವರ್ ಖಂಡ್ರೆ ಹೇಳಿದ್ದೇನು? | Eshwar Khandre
ತೃಣಮೂಲ ಕಾಂಗ್ರೆಸ್ ನಾಯಕ ಅಭಿಷೇಕ್ ಬ್ಯಾನರ್ಜಿ

ಈ ದೇಶದ ನಾಗರಿಕನಾಗಿ, ಭಾರತದ ಸಂವಿಧಾನವು ನನಗೆ ಪ್ರಶ್ನೆಗಳನ್ನು ಎತ್ತುವ ಹಕ್ಕನ್ನು ನೀಡಿದೆ. ಕಾನೂನಿನ ಅಡಿಯಲ್ಲಿ ಎಲ್ಲರನ್ನೂ ಸಮಾನವಾಗಿ ಪರಿಗಣಿಸಬೇಕು ಎಂದು ಪ್ರತಿಪಾದಿಸಿರುವ ಅವರು, ನ್ಯಾಯಾಂಗದ ಬಗ್ಗೆ ತಮ್ಮ ಹಿಂದಿನ ಹೇಳಿಕೆ ಬಗ್ಗೆ ವಿವರಿಸಿದ್ದಾರೆ.

ನ್ಯಾಯಾಂಗ ನಿಷ್ಪಕ್ಷಪಾತವಾಗಿಲ್ಲ ಎಂದು ನಾನು ಯಾಕೆ ಹೇಳಿದೆ? ಅಂದ್ರೆ, ಸುವೇಂದು ಅಧಿಕಾರಿ ವಿರುದ್ಧ ಎಫ್‌ಐಆರ್ ದಾಖಲಿಸಿದಾಗ, ತಡೆಯಾಜ್ಞೆ ನೀಡಲಾಗುತ್ತದೆ. ಆದರೆ ನನ್ನ ಪ್ರಕರಣದಲ್ಲಿ ಅದನ್ನು ನೀಡುವುದಿಲ್ಲ. ನಿಯಮಗಳು ಎಲ್ಲರಿಗೂ ಒಂದೇ ಆಗಿರಬೇಕು, ಆದರೆ ಅವು ಆಗಿಲ್ಲ. ತಮ್ಮ ಆಪ್ತ ಸಹಾಯಕನನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಿ ಜೈಲಿಗೆ ಕಳುಹಿಸಲಾಗಿದೆ. ಆದರೆ ಬಿಜೆಪಿ ನಾಯಕರ ಸಹಾಯಕರ ವಿರುದ್ಧ ಈ ರೀತಿ ಕ್ರಮಕೈಗೊಳ್ಳಲಾಗಿಲ್ಲ ಎಂದಿದ್ದಾರೆ.

ಟಿಎಂಸಿಯ ಮಾಜಿ ನಾಯಕರಾದ ಮುಕುಲ್ ರಾಯ್ ಮತ್ತು ಅರ್ಜುನ್ ಸಿಂಗ್ ಅವರನ್ನು ಉಲ್ಲೇಖಿಸಿದ ಅವರು, ಬಿಜೆಪಿ ಸೇರಿದ ನಂತರ ಅವರಿಗೆ ರಕ್ಷಣೆ ಸಿಕ್ಕಿದೆ ಎಂದಿದ್ದಾರೆ. ನನ್ನ ನಿವಾಸದ ಮೇಲೆ ದಾಳಿ ನಡೆಸಲಾಯಿತು, ಆದರೆ ನನ್ನ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗಿದೆ. ನನಗೆ ಶೋ-ಕಾಸ್ ನೋಟಿಸ್ ನೀಡಲಾಗುತ್ತಿದ್ದರೆ, ಜ್ಞಾನೇಶ್ ಕುಮಾರ್ ಮತ್ತು ನಿಶಿಕಾಂತ್ ದುಬೆ ಅವರಿಗೂ ಶೋ-ಕಾಸ್ ನೋಟಿಸ್ ಏಕೆ ನೀಡುತ್ತಿಲ್ಲ? ಅವರೂ ಸಹ ನ್ಯಾಯಾಲಯವನ್ನು ತಿರಸ್ಕರಿಸಿದ್ದಾರೆ. ಯಾಕೆ ಅವರು ಬಿಜೆಪಿಯೊಂದಿಗೆ ಸಂಬಂಧ ಹೊಂದಿದ್ದಾರೆ ಎಂಬ ಕಾರಣಕ್ಕೆ ನೀಡಲ್ಲವೇ ಎಂದು ಪ್ರಶ್ನಿಸಿದ್ದಾರೆ.

Also Read
ಬಿಜೆಪಿ, RSS ಬೆಂಬಲಿಗರಿಗೆ ಭಯ, ದ್ವೇಷವು ಪ್ರೀತಿ ವ್ಯಕ್ತಪಡಿಸದಂತೆ ತಡೆಯುತ್ತಿದೆ: ಮಡಿಲಲ್ಲಿ ಕುಳಿತುಕೊಳ್ಳುವ ಹೇಳಿಕೆ ಟ್ರೋಲ್​ಗೆ ರಾಹುಲ್ ತಿರುಗೇಟು | Rahul Gandhi
ತೃಣಮೂಲ ಕಾಂಗ್ರೆಸ್ ನಾಯಕ ಅಭಿಷೇಕ್ ಬ್ಯಾನರ್ಜಿ

ನ್ಯಾಯಾಂಗದ ಒಂದು ಭಾಗವು ಪಕ್ಷಪಾತದಿಂದ ವರ್ತಿಸುತ್ತಿದೆ ಎಂದ ಅವರು, ನಾವು ಸುಪ್ರೀಂ ಕೋರ್ಟ್‌ನಲ್ಲಿ ಸಂಪೂರ್ಣ ನಂಬಿಕೆ ಇಟ್ಟಿದ್ದರಿಂದಲೇ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಸೋತಿದ್ದೇವೆ. ಯಾರಾದರೂ ಬಿಜೆಪಿಯೊಂದಿಗೆ ಸಂಬಂಧ ಹೊಂದಿದ್ದರೆ, ಅವರಿಗೆ ರಕ್ಷಣೆ ಸಿಗುತ್ತದೆ ಎಂದಿದ್ದಾರೆ.

ಅಭಿಷೇಕ್ ಬ್ಯಾನರ್ಜಿಯವರು ತಮ್ಮ ಹೇಳಿಕೆ ಮತ್ತು ಸಾಮಾಜಿಕ ಮಾಧ್ಯಮ ಪೋಸ್ಟ್ ಮೂಲಕ ನ್ಯಾಯಾಲಯವನ್ನು ಗುರಿಯಾಗಿಸಿಕೊಂಡು ಎಕ್ಸ್ ಫೇಸಿ ಕ್ರಿಮಿನಲ್ ನ್ಯಾಯಾಂಗ ನಿಂದನೆ ಮಾಡಿದ್ದಾರೆ ಕೋಲ್ಕತ್ತಾ ಹೈಕೋರ್ಟ್, ಮಂಗಳವಾರ ಅವರಿಗೆ ಶೋ-ಕಾಸ್ ನೋಟಿಸ್ ಜಾರಿ ಮಾಡಲು ಆದೇಶಿಸಿದೆ. ಮತ್ತು ನೋಟಿಸ್ ಜಾರಿಯಾದ 15 ದಿನಗಳ ಒಳಗೆ ಪ್ರತಿಕ್ರಿಯೆ ನೀಡುವಂತೆ ನ್ಯಾಯಾಲಯ ಸೂಚಿಸಿದೆ (ಏಜೆನ್ಸೀಸ್).