ಅಸ್ಸಾಂನ ಟಿನ್ಸುಕಿಯಾ, ದಿಬ್ರುಗಢ, ಜೋರ್ಹಾತ್, ಘೋಲ್ಗಾಟ್, ಸಿವಸಾಗರ ಸೇರಿದಂತೆ ಸುಮಾರು 10 ಜಿಲ್ಲೆಗಳು ಸಂಪೂರ್ಣ ಚಾಯ್ ಬಗಾನ್ನಿಂದ ಕೂಡಿವೆ. ನಿತ್ಯ 250 ರೂ. ದಿನಗೂಲಿಗೆ ಈ ಕಾರ್ವಿುಕರು ಚಹಾ ಎಲೆಗಳನ್ನು ಕೀಳುವ ಕೆಲಸ ಮಾಡುತ್ತಿದ್ದು, ಈ ಪ್ರದೇಶದ ಜನರು ಅತ್ಯಂತ ಕಡಿಮೆ ಜೀವಿತಾವಧಿ ಮಟ್ಟವನ್ನು ಹೊಂದಿದ್ದು, ರೋಗಗಳ ಬಾಧೆ, ಅಪೌಷ್ಟಿಕತೆ ಮತ್ತು ರಕ್ತಹೀನತೆಯ ಸಮಸ್ಯೆ ಶ್ರಮಿಕರನ್ನು ಕಾಡುತ್ತಿದೆ.