ದೀಪಾವಳಿಗೂ ಮುನ್ನ ಕೇಂದ್ರ ಸರ್ಕಾರಿ ನೌಕರರಿಗೆ ಬಂಪರ್: ಶೇ.3ರಷ್ಟು ಡಿಎ ಹೆಚ್ಚಳಕ್ಕೆ ಮೋದಿ ಸಂಪುಟ ಅನುಮೋದನೆ | DA hike

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವೂ ದೀಪಾವಳಿಗೂ ಮುನ್ನವೇ ಕೇಂದ್ರ ಸರ್ಕಾರಿ ನೌಕರರಿಗೆ ಭಾರಿ ಸಿಹಿ ಸುದ್ದಿ ನೀಡಿದ್ದು, ಬುಧವಾರ(ಅ. 28) ನಡೆದ ಸಚಿವ ಸಂಪುಟ ಸಭೆಯಲ್ಲಿ ತುಟ್ಟಿ ಭತ್ಯೆ (ಡಿಎ) ಶೇ. 3 ರಷ್ಟು ಹೆಚ್ಚಳಕ್ಕೆ ಅನುಮೋದನೆ ನೀಡಿದೆ.
ಕೇಂದ್ರ ಸಚಿವ ಸಂಪುಟ ಸಭೆ
ಕೇಂದ್ರ ಸಚಿವ ಸಂಪುಟ ಸಭೆ
Published on: 

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವೂ ದೀಪಾವಳಿಗೂ ಮುನ್ನವೇ ಕೇಂದ್ರ ಸರ್ಕಾರಿ ನೌಕರರಿಗೆ ಭಾರಿ ಸಿಹಿ ಸುದ್ದಿ ನೀಡಿದ್ದು, ಬುಧವಾರ(ಅ. 28) ನಡೆದ ಸಚಿವ ಸಂಪುಟ ಸಭೆಯಲ್ಲಿ ತುಟ್ಟಿ ಭತ್ಯೆ (ಡಿಎ) ಶೇ. 3 ರಷ್ಟು ಹೆಚ್ಚಳಕ್ಕೆ ಅನುಮೋದನೆ ನೀಡಿದೆ.

ಕೇಂದ್ರ ಸರ್ಕಾರದ ಈ ನಿರ್ಧಾರವು 1.16 ಕೋಟಿಗೂ ಹೆಚ್ಚು ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಸಂತಸ ತಂದಿದೆ. ಈ ಹೆಚ್ಚಳವು 2026ರ ಜುಲೈ 1 ರಿಂದ ಪೂರ್ವಾನ್ವಯವಾಗುವಂತೆ ಜಾರಿಗೆ ಬರಲಿದೆ. ಈ ಹೊಸ ಹೆಚ್ಚಳದೊಂದಿಗೆ, 7ನೇ ವೇತನ ಆಯೋಗದ ಅಡಿಯಲ್ಲಿ ಕೇಂದ್ರ ಸರ್ಕಾರಿ ನೌಕರರು ಈಗ ಶೇಕಡಾ 63 ರಷ್ಟು ತುಟ್ಟಿಭತ್ಯೆಯನ್ನು ಪಡೆಯಲಿದ್ದಾರೆ. ಅಲ್ಲದೆ, ಸರ್ಕಾರವು ತುಟ್ಟಿ ಪರಿಹಾರವನ್ನು (DR) ಕೂಡ ಶೇಕಡಾ 3 ರಷ್ಟು ಹೆಚ್ಚಿಸುವುದಾಗಿ ಘೋಷಿಸಿದೆ.

ಹೆಚ್ಚುವರಿಯಾಗಿ, 6ನೇ ವೇತನ ಆಯೋಗದ ವ್ಯಾಪ್ತಿಗೆ ಬರುವವರಿಗೆ ತುಟ್ಟಿಭತ್ಯೆ ಶೇಕಡಾ 262ರಿಂದ ಶೇಕಡಾ 269ಕ್ಕೆ (+ಶೇಕಡಾ 7) ಮತ್ತು 5ನೇ ವೇತನ ಆಯೋಗದ ಅಡಿಯಲ್ಲಿ ಶೇಕಡಾ 483ರಿಂದ ಶೇಕಡಾ 497ಕ್ಕೆ (+ಶೇಕಡಾ 14) ಹೆಚ್ಚಾಗಿದೆ. ಈ ಒಟ್ಟು ತುಟ್ಟಿಭತ್ಯೆ ಹೆಚ್ಚಳಕ್ಕಾಗಿ ಸರ್ಕಾರವು 10,016 ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಲಿದೆ ಎನ್ನಲಾಗಿದೆ. ಪ್ರಸ್ತುತ, ಕೇಂದ್ರ ಸರ್ಕಾರಿ ನೌಕರರು ಶೇ. 60ರಷ್ಟು ತುಟ್ಟಿ ಭತ್ಯೆ (DA) ಪಡೆಯುತ್ತಿದ್ದರೆ, ಪಿಂಚಣಿದಾರರು ಶೇ. 60ರಷ್ಟು ತುಟ್ಟಿ ಪರಿಹಾರ (DR) ಪಡೆಯುತ್ತಿದ್ದಾರೆ.

Also Read
ಪರಿಷತ್ ಚುನಾವಣೆ ಫಲಿತಾಂಶ; ಮತದಾರರ ತೀರ್ಮಾನ ಗೌರವಿಸುತ್ತೇವೆ: ಸಂದೇಶದ ಬಗ್ಗೆ ಅಧ್ಯಯನ ಮಾಡ್ತೇವೆ: ಸಿಎಂ ಡಿಕೆಶಿ | DK Shivakumar
ಕೇಂದ್ರ ಸಚಿವ ಸಂಪುಟ ಸಭೆ

ಈ ಕುರಿತು ಮಾತನಾಡಿರುವ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್, ನೌಕರರು ಮತ್ತು ಪಿಂಚಣಿದಾರರು ಹಣದುಬ್ಬರವನ್ನು ನಿಭಾಯಿಸಲು ಸಹಾಯ ಮಾಡಲು ಸರ್ಕಾರವು ವರ್ಷಕ್ಕೆ ಎರಡು ಬಾರಿ ಜನವರಿ ಮತ್ತು ಜುಲೈನಲ್ಲಿ ತುಟ್ಟಿ ಭತ್ಯೆ ಮತ್ತು ತುಟ್ಟಿ ಪರಿಹಾರವನ್ನು (ಡಿಆರ್) ಪರಿಷ್ಕರಿಸುತ್ತದೆ ಎಂದು ತಿಳಿಸಿದ್ದಾರೆ.

7ನೇ ವೇತನ ಆಯೋಗದ ಶಿಫಾರಸುಗಳ ಆಧಾರದ ಮೇಲೆ ಅನುಮೋದಿತ ಸೂತ್ರವನ್ನು ಅನುಸರಿಸಿ ನೌಕರರು ಮತ್ತು ಪಿಂಚಣಿದಾರರಿಗೆ ಡಿಎ ಮತ್ತು ಡಿಆರ್‌ನಲ್ಲಿನ ಇತ್ತೀಚಿನ ಹೆಚ್ಚಳವನ್ನು ಮಾಡಲಾಗಿದೆ. ಇದರಿಂದ ಜುಲೈನಿಂದ ಸರ್ಕಾರಿ ನೌಕರರು ಹೆಚ್ಚಿದ ಸಂಬಳವನ್ನು ಪಡೆಯುತ್ತಾರೆ ಎಂದು ಹೇಳಿದ್ದಾರೆ (ಏಜೆನ್ಸಿಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net