ಆದರೆ ಮಗ ಮನೆಗೆ ಬಾರದಿದ್ದಾಗ, ಮನೆ ಮಂದಿ ಕಮಲ್ನನ್ನು ಹುಡುಕಲು ಪ್ರಾರಂಭಿಸಿದ್ದಾರೆ. ಜನಕಪುರಿ, ಸಾಗರ್‌ಪುರ, ವಿಕಾಸ್ ಪುರಿ ಮತ್ತು ರೋಹಿಣಿ ಸೇರಿದಂತೆ ಹಲವಾರು ಪೊಲೀಸ್ ಠಾಣೆಗಳಿಗೆ ರಾತ್ರಿಯಿಡೀ ಭೇಟಿ ನೀಡಿ ದೂರನ್ನು ದಾಖಲಿಸಿದ್ದಾರೆ. ಶುಕ್ರವಾರ (ಫೆ.6) ಬೆಳಿಗ್ಗೆ 7.30 ರ ಸುಮಾರಿಗೆ ಪೊಲೀಸರಿಂದ ಅಪಘಾತದ ಬಗ್ಗೆ ಮಾಹಿತಿ ದೊರೆತಿದೆ ಎಂದು ಕುಟುಂಬ ಸದಸ್ಯರು ಹೇಳಿದ್ದಾರೆ. ಅವರು ಸ್ಥಳಕ್ಕೆ ತಲುಪಿದಾಗ, ಕಮಲ್ ಮೃತದೇಹ ಮತ್ತು ಮೋಟಾರ್ ಸೈಕಲ್ ಹೊಂಡದಲ್ಲಿ ಪತ್ತೆಯಾಗಿದೆ.