ಅರ್ಜಿಯನ್ನು ಪರಿಗಣಿಸಲು ನಿರಾಕರಿಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ನೇತೃತ್ವದ ಪೀಠವು, ಪಕ್ಷದ ಚುನಾವಣಾ ಸೋಲಿನ ಬಗ್ಗೆ ತೀಕ್ಷ್ಣವಾದ ಟೀಕೆ ಮಾಡುತ್ತಾ, ಜನರು ನಿಮ್ಮನ್ನು ಚುನಾವಣೆಯಲ್ಲಿ ತಿರಸ್ಕರಿಸಿದ್ದಾರೆ ಈಗ ನೀವು ಪ್ರಚಾರ ಪಡೆಯಲು ಈ ನ್ಯಾಯಾಂಗ ವೇದಿಕೆಯನ್ನು ಬಳಸುತ್ತಿದ್ದೀರಾ? ಎಂದು ನ್ಯಾಯಪೀಠ ಗರಂ ಆಗಿದೆ. ವಿಧಿ 32 ರ ಅಡಿಯಲ್ಲಿ ಈ ವಿಷಯವನ್ನು ವಿಚಾರಣೆ ಮಾಡಲು ಪೀಠ ನಿರಾಕರಿಸಿ, ಅರ್ಜಿದಾರರು ಬಿಹಾರ ಹೈಕೋರ್ಟ್ನ್ನು ಸಂಪರ್ಕಿಸುವಂತೆ ಹೇಳಿತು.