ಈ ಬಡ ಕುಟುಂಬಕ್ಕೆ ಆ 800 ರೂಪಾಯಿ ಕೂಡ ಅತ್ಯಂತ ದೊಡ್ಡ ಮೊತ್ತವಾಗಿತ್ತು. ಬಾಲಕಿಯ ಹರಿದುಹೋಗಿದ್ದ ಹಳೆಯ ಶಾಲಾ ಶೂಗಳ ಜಾಗಕ್ಕೆ ಹೊಸ ಶೂಗಳನ್ನು ಖರೀದಿಸಬೇಕು ಎನ್ನುವ ಹಂಬಲ ಅವರದ್ದಾಗಿತ್ತು. ಇದೇ ಕಾರಣಕ್ಕಾಗಿ ಶನಿವಾರದಂದು ಸುಪರ್ಣಾ ತನ್ನ ಅಣ್ಣನೊಂದಿಗೆ ಸಮೀಪದ ಗ್ರಾಹಕ ಸೇವಾ ಕೇಂದ್ರಕ್ಕೆ (ಸಿಎಸ್‌ಸಿ) ತೆರಳಿ ತನ್ನ ಖಾತೆಯಿಂದ 900 ರೂಪಾಯಿಗಳನ್ನು ಹಿಂಪಡೆದಿದ್ದಾಳೆ. ಆದರೆ, ಹಣ ಡ್ರಾ ಮಾಡಿದ ನಂತರ ಖಾತೆಯಲ್ಲಿದ್ದ ಒಟ್ಟು ಮೊತ್ತವನ್ನು ಪರಿಶೀಲಿಸಿದಾಗ ಅಲ್ಲಿ ಬರೋಬ್ಬರಿ 759 ಕೋಟಿ ರೂಪಾಯಿಗೂ ಅಧಿಕ ಬ್ಯಾಲೆನ್ಸ್ ಇರುವುದು ಪತ್ತೆಯಾಗಿದ್ದು, ಇಡೀ ಕುಟುಂಬವೇ ದಿಗಿಲುಗೊಂಡಿದೆ.