95% ನೆಟ್​ವರ್ಕ್​ ಸಂಪರ್ಕವನ್ನು ಮರು ಸ್ಥಾಪಿಸಲಾಗಿದೆ; ಸಹಜ ಸ್ಥಿತಿಯತ್ತ ಕಾರ್ಯಾಚರಣೆ; ಇಂಡಿಗೋ ಮಾಹಿತಿ | IndiGo flights

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
ನವದೆಹಲಿ: ಕಳೆದ ಕೆಲವು ದಿನಗಳಿಂದ ತನ್ನ ಸಂಸ್ಥೆಯ ವಿಮಾನಗಳ ಹಾರಟ ರದ್ದು, ವಿಳಂಬದ ಅವ್ಯವಸ್ಥೆಯ ಬಳಿಕ ಬಗ್ಗೆ ಇಂದು(ಡಿ. 06) ಇಂಡಿಗೋ ವಿಮಾನಯಾನ ಸಂಸ್ಥೆ, ಸಂಸ್ಥೆಯ ನೆಟವರ್ಕ್​ ಸಂಪರ್ಕ ಶೇ. 95ರಷ್ಟು ಮರು ಸ್ಥಾಪಿಸಲಾಗಿದೆ. ಸಹಜ ಸ್ಥಿತಿಯತ್ತ ಕಾರ್ಯಾಚರಣೆ ಸಾಗುತ್ತಿದೆ ಎಂದು ಮಾಹಿತಿ ನೀಡಿದೆ.
ಈ ಕುರಿತು ಮಾಹಿತಿ ಬಿಡುಗಡೆ ಮಾಡಿರುವ ಇಂಡಿಗೋ, ಸಂಸ್ಥೆಯು ಶನಿವಾರ 138 ತಾಣಗಳಲ್ಲಿ 135ಕ್ಕೂ ಹೆಚ್ಚು ಸ್ಥಳಗಳಿಗೆ ವಿಮಾನಗಳ ಕಾರ್ಯಾಚರಣೆ ನಡೆಸಿತು. ದಿನದ ಅಂತ್ಯದ ವೇಳೆಗೆ 1,500 ಕ್ಕೂ ಹೆಚ್ಚು ವಿಮಾನಗಳ ಪ್ರಯಾಣವನ್ನು ನಿರ್ವಹಿಸುವ ಗುರಿಯನ್ನು ಹೊಂದಿದೆ ಎಂದು ತಿಳಿಸಿದೆ.
ನಾವು ಇನ್ನೂ ಬಹಳ ದೂರ ಕ್ರಮಿಸಬೇಕಾಗಿದೆ ಎಂಬುದನ್ನು ನಾವು ಅರ್ಥಮಾಡಿಕೊಂಡಿದ್ದರೂ, ನಮ್ಮ ಗ್ರಾಹಕರ ವಿಶ್ವಾಸವನ್ನು ಮರಳಿ ಗಳಿಸಲು ನಾವು ಬದ್ಧರಾಗಿದ್ದೇವೆ ಎಂದು ಮತ್ತೊಮ್ಮೆ ಕ್ಷಮೆಯಾಚಿಸುತ್ತಾ ಸಂಸ್ಥೆ ಹೇಳಿದೆ.
ಇಂದು ವಿಮಾನ ನಿಲ್ದಾಣಗಳಲ್ಲಿ ಜನಸಂದಣಿ ಕಡಿಮೆಯಾಯಿತು. ದೇಶದ ಅತಿದೊಡ್ಡ ವಿಮಾನಯಾನ ಸಂಸ್ಥೆಯನ್ನು ಬಾಧಿಸಿದ ಬಿಕ್ಕಟ್ಟಿನ ಐದನೇ ದಿನದಲ್ಲಿ, ನೂರಾರು ವಿಮಾನಗಳು ರದ್ದಾಗಿದ್ದರಿಂದ ಹಲವಾರು ಕೋಪಗೊಂಡ ಪ್ರಯಾಣಿಕರು ಬೆಂಗಳೂರು ಮತ್ತು ಮುಂಬೈ ವಿಮಾನ ನಿಲ್ದಾಣಗಳ ಹೊರಗೆ ಗಲಾಟೆ ಮಾಡಿದ್ದರು ಕಂಡು ಬಂದಿತು (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net