ಇನ್‌ವಾಯ್ಸ್ ರಿಯಾಯಿತಿ ಯೋಜನೆಯ ಸೋಗಿನಲ್ಲಿ ಅಲ್ಪಾವಧಿಯಲ್ಲಿ ಹೆಚ್ಚಿನ ಆದಾಯ ನೀಡುವ ಭರವಸೆಯಿಂದ 7,056 ಜನರಿಂದ 4,215 ಕೋಟಿ ರೂ. ಹಣ ಸಂಗ್ರಹಿಸಿದ್ದಾರೆ. ಬಳಿಕ ಸಾರ್ವಜನಿಕರು ಕಂಪನಿಯ ಚಟುವಟಿಕೆ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿದ್ದಂತೆ, ಕೆಲವರು ಹಣವನ್ನು ವಾಪಸ್ ಮಾಡಿದ್ದು, ಒಟ್ಟು 4,065 ಜನರ 792 ಹಣ ಬಾಕಿ ಉಳಿಸಿಕೊಂಡು ವಂಚನೆ ಮಾಡಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆ ಕಂಪನಿ ವಿರುದ್ಧ ವಿವಿಧ ಠಾಣೆಗಳಲ್ಲಿ ಹಲವು ಪ್ರಕರಣಗಳು ದಾಖಲಾಗಿವೆ.