ಹೆಚ್ಚಿನ ಸುಂಕ ಹಾಕಿರುವುದರಿಂದ ಪ್ರಧಾನಿ ಮೋದಿಗೆ ನನ್ನ ಮೇಲೆ ಅತೃಪ್ತಿಯಿದೆ: ಡೊನಾಲ್ಡ್ ಟ್ರಂಪ್ | Donald Trump

ಡೊನಾಲ್ಡ್ ಟ್ರಂಪ್ ಮತ್ತು ಪ್ರಧಾನಿ ಮೋದಿ
ಡೊನಾಲ್ಡ್ ಟ್ರಂಪ್ ಮತ್ತು ಪ್ರಧಾನಿ ಮೋದಿ
Published on
Donald Trump: ಭಾರತದ ಪ್ರಧಾನಿ ನರೇಂದ್ರ ಮೋದಿ ನನ್ನ ಜೊತೆ ಉತ್ತಮ ಸಂಬಂಧ ಹೊಂದಿದ್ದಾರೆ ಎಂದು ಹೇಳುವ ಜೊತೆಗೆ ದೇಶದ ಹೆಚ್ಚಿನ ಸುಂಕ ಹಾಕಿರುವುದರಿಂದ ಅವರಿಗೆ ನನ್ನ ಮೇಲೆ ಅತೃಪ್ತಿಯಿದೆ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಸದನದ GOP ಸದಸ್ಯ ರಿಟ್ರೀಟ್‌ನಲ್ಲಿ ಮಾತನಾಡಿರುವ ಟ್ರಂಪ್, ಭಾರತವು ರಷ್ಯಾದಿಂದ ತೈಲ ಆಮದುಗಳನ್ನು ತೀವ್ರವಾಗಿ ಕಡಿತಗೊಳಿಸಿದೆ. ಅಮೆರಿಕದ ನೀತಿಯ ಪರಿಣಾಮವಾಗಿ ಭಾರತ ಈಗ ಬಹಳಷ್ಟು ಸುಂಕಗಳನ್ನು ಪಾವತಿಸುತ್ತಿದೆ. ಇದರಿಂದ ಪ್ರಧಾನಿ ಮೋದಿ ನನ್ನ ಮೇಲೆ ಅಸಮಾಧಾನಗೊಂಡಿದ್ದಾರೆ ಎಂಬುದನ್ನು ಒಪ್ಪಿಕೊಂಡಿದ್ದಾರೆ.
ನನಗೆ ಅವರ ಜೊತೆ ಉತ್ತಮ ಸಂಬಂಧವಿದೆ. ಆದರೆ ಸುಂಕದಿಂದಾಗಿ ಅವರಿಗೆ ಅತೃಪ್ತಿಯಿದೆ. ಆದರೆ ಅವರು ರಷ್ಯಾದಿಂದ ತೈಲ ಖರೀದಿಸುವುದನ್ನು ಗಣನೀಯವಾಗಿ ನಿಲ್ಲಿಸಿದ್ದಾರೆ. ಈ ಕುರಿತಿ ಮೋದಿ ವೈಯಕ್ತಿಕವಾಗಿ ತಮ್ಮೊಂದಿಗೆ ಮಾತುಕತೆ ನಡೆಸಲು ಬಯಸಿದ್ದರು ಎಂದು ತಿಳಿಸಿದ್ದಾರೆ.
ಟ್ರಂಪ್ ಭಾರತೀಯ ಸರಕುಗಳ ಮೇಲೆ ಶೇ.50 ರಷ್ಟು ಸುಂಕವನ್ನು ವಿಧಿಸಿದ್ದಾರೆ. ಇದರಲ್ಲಿ ಭಾರತವು ರಷ್ಯಾದ ತೈಲವನ್ನು ನಿರಂತರವಾಗಿ ಖರೀದಿಸುವುದಕ್ಕೆ ಸಂಬಂಧಿಸಿದ ಶೇ.25 ರಷ್ಟು ಸುಂಕವೂ ಸೇರಿದೆ. ರಷ್ಯಾದೊಂದಿಗಿನ ವ್ಯಾಪಾರವನ್ನು ನಿಲ್ಲಿಸಲು ಅಮೆರಿಕಾ ಇನ್ನಿಲ್ಲದ ಒತ್ತಡ ಹೇರುತ್ತಿದೆ.

ಮತ್ತೆ ಸುಂಕ ಹೆಚ್ಚಳದ ಬೆದರಿಕೆ

ಭಾನುವಾರ ಅಧ್ಯಕ್ಷ ಟ್ರಂಪ್, ಭಾರತವು ರಷ್ಯಾದ ತೈಲ ಆಮದನ್ನು ಮತ್ತಷ್ಟು ಕಡಿಮೆ ಮಾಡದಿದ್ದರೆ ಹೆಚ್ಚುವರಿ ದಂಡವನ್ನು ಎದುರಿಸಬೇಕಾಗುತ್ತದೆ ಎಚ್ಚರಿಸಿದ್ದರು. ಪ್ರಧಾನಿ ಮೋದಿ ತುಂಬಾ ಒಳ್ಳೆಯ ವ್ಯಕ್ತಿ. ನಾನು ಸಂತೋಷವಾಗಿಲ್ಲ ಎಂದು ಅವರಿಗೆ ತಿಳಿದಿತ್ತು. ನನ್ನನ್ನು ಸಂತೋಷಪಡಿಸುವುದು ಅವರು ಬಯಸಿದ್ದರು ಎಂದು ಹೇಳಿದ್ದರು (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net