ಕಳೆದ ಎರಡು ತಿಂಗಳುಗಳಿಂದ ಜಮ್ಮುವಿನ ಬಿಜೆಪಿ ನಾಯಕರು, ಬಲಪಂಥೀಯ ಸಂಘಟನೆಗಳು ಮೊದಲ ಬ್ಯಾಚ್ನ ಪ್ರವೇಶ ಪಟ್ಟಿಯನ್ನು ತೀವ್ರವಾಗಿ ವಿರೋಧಿಸಿದ್ದು, ಆಯ್ಕೆಯನ್ನು ತಕ್ಷಣ ರದ್ದು ಮಾಡುವಂತೆ ಒತ್ತಾಯಿಸಿದ್ದವು. ಕಾಲೇಜನ್ನು ಶ್ರೀ ಮಾತಾ ವೈಷ್ಣೋದೇವಿ ದೇವಾಲಯ ಮಂಡಳಿಯು ನಡೆಸುತ್ತಿರುವುದರಿಂದ, ಪ್ರಾಥಮಿಕವಾಗಿ ಹಿಂದೂ ವಿದ್ಯಾರ್ಥಿಗಳಿಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿದ್ದವು.