ವಿಶೇಷ ಪಡೆಗಳ ತರಬೇತಿಯು ಕಲ್ಪನೆಗೂ ಮೀರಿದ್ದಾಗಿದ್ದು, ಅಭ್ಯರ್ಥಿಗಳು 70 ರಿಂದ 80 ಕೆಜಿ ತೂಕದ ಉಪಕರಣಗಳನ್ನು ಹೊತ್ತು, ಆಹಾರ, ನೀರು ಮತ್ತು ನಿದ್ರೆಯಿಲ್ಲದೆ 30 ರಿಂದ 40 ದಿನಗಳ ಕಾಲ ತರಬೇತಿ ಪಡೆಯುತ್ತಾರೆ. ತೀವ್ರ ದೈಹಿಕ ಆಯಾಸದ ನಡುವೆಯೂ ಸುತ್ತಮುತ್ತಲಿನ ಸಣ್ಣ ವಿಷಯಗಳನ್ನು ಗಮನಿಸುವ ಮಾನಸಿಕ ಜಾಗರೂಕತೆಯನ್ನು ಅವರಿಗೆ ಕಲಿಸಲಾಗುತ್ತದೆ. ದೇಶದ ಮೂರೂ ಸೇನೆಗಳಿಂದ ಅತ್ಯುತ್ತಮ ಸೇವಾ ದಾಖಲೆ ಹೊಂದಿರುವ ಅಧಿಕಾರಿಗಳನ್ನು ಶಾರ್ಟ್‌ಲಿಸ್ಟ್ ಮಾಡಿ, ಸುದೀರ್ಘ ಸಂದರ್ಶನ ಮತ್ತು ಹಿನ್ನೆಲೆ ತನಿಖೆಯ ನಂತರವೇ ಒಬ್ಬರನ್ನು ಎಡಿಸಿ ಅಧಿಕಾರಿಯಾಗಿ ಆಯ್ಕೆ ಮಾಡಲಾಗುತ್ತದೆ ಎಂದು ಸಂಬ್ಯಾಲ್ ತಿಳಿಸಿದ್ದಾರೆ.