ರಾಷ್ಟ್ರಪತಿಯವರ ಎಡಿಸಿ ಆಗಿ ಆಯ್ಕೆಯಾದಾಗ ಮೊದಲ ಬಾರಿಗೆ ರಾಷ್ಟ್ರಪತಿಗಳನ್ನು ನೋಡಿದಾಗ ನನಗೆ ನನ್ನ ತಾಯಿಯೇ ನಿಂತಿರುವಂತೆ ಭಾಸವಾಯಿತು ಎಂದು ಮೆಲುಕುಹಾಕಿರುವ ಮೇಜರ್ ರಿಷಭ್, ತಾನು ರಾಷ್ಟ್ರಪತಿಯವರೊಂದಿಗೆ ಕಳೆದ ಮೂರು ವರ್ಷಗಳನ್ನು ಅತ್ಯಂತ ಹೆಮ್ಮೆಯಿಂದ ಕಳೆದಿದ್ದು, ಸ್ವಂತ ತಾಯಿಗಿಂತಲೂ ಹೆಚ್ಚು ಸಮಯವನ್ನು ರಾಷ್ಟ್ರಪತಿಯವರ ಜೊತೆಯೇ ಕಳೆದಿರುವುದಾಗಿ ಸಂಬ್ಯಾಲ್ ಅವರು ಭಾವುಕರಾಗಿ ನುಡಿದಿದ್ದಾರೆ.