ರಾಷ್ಟ್ರೀಯ ನ್ಯಾಯಾಂಗ ಡೇಟಾ ಗ್ರಿಡ್ನಲ್ಲಿ (NJDG) ಲಭ್ಯವಿರುವ ಮಾಹಿತಿಯ ಪ್ರಕಾರ, ದೇಶದ ಸುಪ್ರೀಂ, ಹೈಕೋರ್ಟ್ ಹಾಗೂ ಜಿಲ್ಲಾ ನ್ಯಾಯಾಲಯಗಳಲ್ಲಿ ಒಟ್ಟಾರೆಯಾಗಿ 5.64 ಕೋಟಿ ಪ್ರಕರಣಗಳು ಇನ್ನೂ ಬಾಕಿ ಉಳಿದಿವೆ. ಅದರಲ್ಲೂ, ಭಾರತದ ಅತ್ಯುನ್ನತ ನ್ಯಾಯಾಲಯವಾದ ಸುಪ್ರೀಂ ಕೋರ್ಟ್ ಒಂದರಲ್ಲೇ 96,000ಕ್ಕೂ ಹೆಚ್ಚು ಕೇಸ್‌ಗಳು ತೀರ್ಪು ಸಿಗದೆ ನ್ಯಾಯಕ್ಕಾಗಿ ಕಾದು ಕುಳಿತಿವೆ ಎಂಬುದು ನಿಜಕ್ಕೂ ಹುಬ್ಬೇರಿಸುವ ಸಂಗತಿ.