ವಾಷಿಂಗ್ಟನ್ ಪೋಸ್ಟ್‌ನಲ್ಲಿ 300 ಪತ್ರಕರ್ತರ ವಜಾ: ಕೆಲಸ ಕಳೆದುಕೊಂಡ ಸಂಸದ ಶಶಿ ತರೂರ್ ಪುತ್ರ ಇಶಾನ್ ತರೂರ್​! Washington Post

ವಾಷಿಂಗ್​ಟನ್​ ಪೋಸ್ಟ್​, ಕಾಂಗ್ರೆಸ್ ಸಂಸದ ಶಶಿ ತರೂರ್, ಇಶಾನ್ ತರೂರ್
ವಾಷಿಂಗ್​ಟನ್​ ಪೋಸ್ಟ್​, ಕಾಂಗ್ರೆಸ್ ಸಂಸದ ಶಶಿ ತರೂರ್, ಇಶಾನ್ ತರೂರ್
Published on

ಪ್ರಮುಖ ಮುಖ್ಯಾಂಶಗಳು

  • ವಾಷಿಂಗ್​ಟನ್​ ಪೋಸ್ಟ್​ನಲ್ಲಿ 300 ಪತ್ರಕರ್ತರ ವಜಾ
  • ಕಾಂಗ್ರೆಸ್​ ಸಂಸದ ಶಶಿ ತರೂರ್​ ಪುತ್ರ ಇಶಾನ್​ ತರೂರ್​ ಸಹ ಕೆಲಸದಿಂದ ವಜಾ
  • ತಮ್ಮ ವರ್ಲ್ಡ್‌ವ್ಯೂ ಎಂಬ ಅಂಕಣದ ಮೂಲಕ ಅಪಾರ ಓದುಗ ಬಳಗವನ್ನು ಪಡೆದಿದ್ದ ಇಶಾನ್​
ಅಮೆರಿಕ: ಅಮೆರಿಕದ ಅತ್ಯಂತ ಪ್ರತಿಷ್ಠಿತ ಪತ್ರಿಕೆಗಳಲ್ಲಿ ಒಂದಾದ ವಾಷಿಂಗ್ಟನ್ ಪೋಸ್ಟ್ (Washington Post) ಬುಧವಾರ (ಫೆ.4) ಮಾಧ್ಯಮ ಇತಿಹಾಸದಲ್ಲಿ ಅತ್ಯಂತ ವ್ಯಾಪಕವಾದ ಸುದ್ದಿ ಮನೆ ಶುದ್ಧೀಕರಣವನ್ನು ನಡೆಸಿದೆ. ಇದರ ಪರಿಣಾಮವಾಗಿ ವಾಷಿಂಗ್ಟನ್ ಪೋಸ್ಟ್​ನಲ್ಲಿ ಕೆಲಸ ಮಾಡುತ್ತಿದ್ದ ಮೂರನೇ ಒಂದು ಭಾಗದಷ್ಟು ಪತ್ರಕರ್ತರು ಕೆಲಸವನ್ನು ಕಳೆದುಕೊಂಡಿದ್ದಾರೆ.
ಈ ವಿದ್ಯಮಾನದಿಂದ ಕೇವಲ ಕೆಳಹಂತದ ಪತ್ರಕರ್ತರಷ್ಟೇ ಅಲ್ಲದೇ, ವಾಷಿಂಗ್ಟನ್ ಪೋಸ್ಟ್​ನ ಹಿರಿಯ ಅಂತರರಾಷ್ಟ್ರೀಯ ವ್ಯವಹಾರಗಳ ಅಂಕಣಕಾರರಾಗಿದ್ದ ಕಾಂಗ್ರೆಸ್ ಸಂಸದ ಶಶಿ ತರೂರ್ ಅವರ ಪುತ್ರ ಇಶಾನ್ ತರೂರ್ ಕೂಡ ತಮ್ಮ ಉದ್ಯೋಗವನ್ನು ಕಳೆದುಕೊಂಡಿದ್ದಾರೆ.
ಸಾಮಾಜಿಕ ಮಾಧ್ಯಮ ವೇದಿಕೆಯಾದ ಎಕ್ಸ್​ (ಟ್ವಿಟರ್​) ನಲ್ಲಿ ಪೋಸ್ಟ್​ ಮಾಡುವ ಮೂಲಕ ಈ ಸುದ್ದಿಯನ್ನು ಖಾತರಿ ಪಡಿಸಿರುವ ಇಶಾನ್, ವಾಂಷಿಂಗ್​ಟನ್​ ಪೋಸ್ಟ್‌ನ ಅಂತರರಾಷ್ಟ್ರೀಯ ತಂಡದ ಹಲವಾರು ಪತ್ರಕರ್ತರ ಜತೆ ತಮ್ಮನ್ನು ಸಹ ವಜಾ ಮಾಡಲಾಗಿದೆ ಎಂದು ಹಂಚಿಕೊಂಡಿದ್ದಾರೆ.
ಸುದ್ದಿ ಸಂಸ್ಥೆಯು ಹಲವಾರು ವರ್ಷಗಳಿಂದ ನಷ್ಟವನ್ನು ಅನುಭವಿಸುತ್ತಿದ್ದ ಹಿನ್ನಲೆ ಇಂದು ಸುಮಾರು ಶೇ. 30 ರಷ್ಟು ಕೆಲಸಗಾರರನ್ನು ವಜಾ ಮಾಡಲಾಗಿದೆ ಎಂದು ತರೂರ್​ ಹೇಳಿದ್ದಾರೆ. ಈ ನಿರ್ಧಾರದಿಂದ ಸುಮಾರು 800 ಜನ ಕೆಲಗಾರರನ್ನು ಹೊಂದಿದ್ದ ವಾಷಿಂಗ್​ಟನ್​ ಪೋಸ್ಟ್​ನ ಸುಮಾರು 300 ಉದ್ಯೋಗಿಗಳು ಇದೀಗ ನಿರುದ್ಯೋಗಿಗಳಾಗಿದ್ದಾರೆ ಎಂದು ಇಶಾನ್​ ತರೂರ್​ ತಿಳಿಸಿದ್ದಾರೆ.
ಈ ಸಂಸ್ಥೆಯೊಂದಿಗೆ 12 ವರ್ಷಗಳ ಸಂಬಂಧ
ಕೆಸಲದಿಂದ ವಜಾಗೊಂಡ ನಂತರ ಟ್ವಿಟರ್​ನಲ್ಲಿ ಸುದೀರ್ಘವಾದ ಟ್ವಿಟ್​ ಮಾಡಿರುವ ಇಶಾನ್​ ತರೂರ್​, ಸುಮಾರು 12 ವರ್ಷಗಳಿಂದ ಈ ಪತ್ರಿಕೆಯೊಂದಿಗಿನ ಸಂಬಂಧ ನನಗೆ ಅದ್ಭುತ ಸಹೋದ್ಯೋಗಿಗಳನ್ನು ನೀಡಿದೆ ಎಂದು ಬರೆದುಕೊಂಡಿದ್ದಾರೆ.
ಸುಮಾರು 12 ವರ್ಷಗಳಿಂದ ನಾನು ಈ ಸುದ್ದಿ ಸಂಸ್ಥೆಯಲ್ಲಿ ಅಂತರರಾಷ್ಟ್ರೀಯ ಡೆಸ್ಕ್​ನಲ್ಲಿ ಕೆಲಸ ಮಾಡುತ್ತಿದೆ. ನನಗೆ ಸಮಾನ ಮನಸ್ಕ ಗೆಳೆಯರು ಮತ್ತು ಸಹದ್ಯೋಗಿಗಳು ದೊರೆತದ್ದು ನನ್ನ ಭಾಗ್ಯ, ಈಗ ಇಲ್ಲಿಂದ ನನ್ನನ್ನು ವಜಾ ಮಾಡಿದ್ದಾರೆ, ಖಂಡಿತವಾಗಿ ಈ ನಿರ್ಧಾರದಿಂದ ನಾನು ಹೃದಯವಿದ್ರಾವಕನಾಗಿದ್ದೇನೆ ಎಂದು ಇಶಾನ್​ ತರೂರ್​ ಬರೆದುಕೊಂಡಿದ್ದಾರೆ.
2017 ರಲ್ಲಿ ನನಗೆ ವರ್ಲ್ಡ್‌ವ್ಯೂ ಎಂಬ ಅಂಕಣವನ್ನು ಬರೆಯಲು ಅವಕಾಶ ನೀಡಲಾಯಿತು ಮತ್ತು ಈ ಅಂಕಣದಿಂದಾಗಿ ನನಗೆ ಸುಮಾರು ಐವತ್ತು ಸಾವಿರ ಓದುಗರು ದೊರೆಯುವಂತಾಯಿತು. ಜಗತ್ತಿನಲ್ಲಿ ಅಮೆರಿಕದ ಸ್ಥಾನದ ಕುರಿತು ಬರೆಯಲು ನನಗೆ ದೊರೆತ ಅವಕಾಶಕ್ಕೆ ನಾನು ಧನ್ಯನಾಗಿದ್ದೇನೆ ಹಾಗೂ ಈ ಅಂಕಣ ಹಲವಾರು ಭಾರಿ ವರ್ಷದ ಅಂಕಣ ಎಂಬ ಹೆಗ್ಗಳಿಕೆಗೆ ಪಾತ್ರವಾದ ಬಗ್ಗೆ ಹೆಮ್ಮೆಯಿದೆ ಎಂದು ತರೂರ್​ ಹೇಳಿದ್ದಾರೆ,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net