ಅಯ್ಯೋ ದುರ್ವಿಧಿಯೇ... ಮಗುವಿನ ಡೈಪರ್ ಸುಡುವಾಗ ಬೆಂಕಿ ತಗುಲಿ ದುರಂತ ಸಾವಿಗೀಡಾದ ತಾಯಿ! Baby Diaper
ಅಯ್ಯೋ ದುರ್ವಿಧಿಯೇ... ಮಗುವಿನ ಡೈಪರ್ ಸುಡುವಾಗ ಬೆಂಕಿ ತಗುಲಿ ದುರಂತ ಸಾವಿಗೀಡಾದ ತಾಯಿ! Baby Diaper
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಮಗುವಿನ ಡೈಪರ್ ಸುಡುವ ವೇಳೆ ಆಕಸ್ಮಿಕವಾಗಿ ತಾಯಿಗೂ ತಗುಲಿದ ಬೆಂಕಿ
ತೀವ್ರವಾಗಿ ಗಾಯಗೊಂಡಿದ್ದ ಯುವ ತಾಯಿ ಚಿಕಿತ್ಸೆ ಫಲಿಸದೇ ಸಾವು
ಕೇರಳದ ಕೊಟ್ಟಾಯಂನ ಲಕ್ಕಟ್ಟೂರು ನಿವಾಸಿ ಜೋಮೋಲ್ ಸೆಬಾಸ್ಟಿಯನ್ ಮೃತಪಟ್ಟ ದುರ್ದೈವಿ
ಕೊಟ್ಟಾಯಂ: ಮಗುವಿನ ಡೈಪರ್ ( Baby Diaper ) ಸುಡುವ ವೇಳೆ ಆಕಸ್ಮಿಕವಾಗಿ ಬೆಂಕಿ ತಗುಲಿ ತೀವ್ರವಾಗಿ ಗಾಯಗೊಂಡಿದ್ದ ಯುವ ತಾಯಿಯೊಬ್ಬರು ಚಿಕಿತ್ಸೆ ಫಲಿಸದೇ ಸಾವಿಗೀಡಾಗಿದ್ದಾರೆ. ಕೊಟ್ಟಾಯಂನ ಲಕ್ಕಟ್ಟೂರು ನಿವಾಸಿ ಜೋಮೋಲ್ ಸೆಬಾಸ್ಟಿಯನ್ (26) ಮೃತಪಟ್ಟ ದುರ್ದೈವಿ.
ಜೋಮೋಲ್ ಸೆಬಾಸ್ಟಿಯನ್ ಲಕ್ಕಟ್ಟೂರಿನ ಪ್ಲಾತಾರಾಮುರಿ ನಿವಾಸಿಗಳಾದ ಸಾಲು ಮತ್ತು ಮಿನಿ ದಂಪತಿಯ ಪುತ್ರಿ. ಅವರ ಪತಿಯ ಹೆಸರು ಎಬಿಸನ್.
ಕಳೆದ ಏಪ್ರಿಲ್ 21ರಂದು ಬೆಳಗ್ಗೆ ಸುಮಾರು 11.30ರ ವೇಳೆಗೆ ಈ ಘಟನೆ ಸಂಭವಿಸಿದೆ. ತನ್ನ ಒಂದೂವರೆ ವರ್ಷದ ಹೆಣ್ಣು ಮಗುವಿನ ಡೈಪರ್ ಸುಡುವುದಕ್ಕಾಗಿ ಜೋಮೋಲ್ ಅವರು ಗ್ಯಾಸ್ ಸ್ಟೌವ್ ಹಚ್ಚಿ ಕಾಗದಕ್ಕೆ ಬೆಂಕಿ ಕೊಡಲು ಹೋದಾಗ, ಅವರು ಧರಿಸಿದ್ದ ನೈಟಿಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದೆ.
ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಕೂಡಲೇ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ಫಲಿಸದೇ ನಿನ್ನೆ (ಏಪ್ರಿಲ್ 23) ಮೃತಪಟ್ಟಿದ್ದಾರೆ. ಮೃತರ ಅಂತ್ಯಕ್ರಿಯೆಯು ಇಂದು ಸಂಜೆ ನಡೆಯಲಿದೆ.
ಪುಟ್ಟ ಮಗುವಿನ ಲಾಲನೆ-ಪಾಲನೆಯಲ್ಲಿದ್ದ ತಾಯಿ, ಹೀಗೆ ಆಕಸ್ಮಿಕ ದುರಂತಕ್ಕೆ ಬಲಿಯಾಗಿರುವುದು ಇಡೀ ಗ್ರಾಮದಲ್ಲಿ ಶೋಕದ ಛಾಯೆ ಮೂಡಿಸಿದೆ. ಸುರಕ್ಷತಾ ಕ್ರಮಗಳ ಬಗ್ಗೆ ಎಷ್ಟೇ ಎಚ್ಚರವಹಿಸಿದರೂ ಇಂತಹ ಕ್ಷಣಿಕ ಅಚಾತುರ್ಯಗಳು ಬದುಕನ್ನೇ ಕಿತ್ತುಕೊಳ್ಳುತ್ತವೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ, (ಏಜೆನ್ಸೀಸ್).