ವಿಪರೀತ ಸೆಕೆ... ತನ್ನ ಗಂಡ ಎಸಿ ಖರೀದಿಸಲಿಲ್ಲ ಅಂತ ಮನನೊಂದು ಸಾವಿಗೆ ಶರಣಾದ ಯುವತಿ! Air Conditioner

ವಿಪರೀತ ಸೆಕೆ... ತನ್ನ ಗಂಡ ಎಸಿ ಖರೀದಿಸಲಿಲ್ಲ ಅಂತ ಮನನೊಂದು ಸಾವಿಗೆ ಶರಣಾದ ಯುವತಿ! Air Conditioner
ವಿಪರೀತ ಸೆಕೆ... ತನ್ನ ಗಂಡ ಎಸಿ ಖರೀದಿಸಲಿಲ್ಲ ಅಂತ ಮನನೊಂದು ಸಾವಿಗೆ ಶರಣಾದ ಯುವತಿ! Air Conditioner
Published on

ಪ್ರಮುಖ ಮುಖ್ಯಾಂಶಗಳು

  • ಮನೆಯಲ್ಲಿ ಸೆಕೆ ಹೆಚ್ಚಾದ್ದರಿಂದ ಎಸಿ ಬೇಕು ಅಂತ ಬೇಡಿಕೆ ಇಟ್ಟಿದ್ದಳು ಮೋನಿಕಾ
  • ಗಂಡ ಆಗುವುದಿಲ್ಲ ಅಂತ ಹೇಳಿದಾಗ ಇಬ್ಬರ ನಡುವೆ ಜಗಳ ನಡೆದಿತ್ತು
  • ಪತಿ ಎಸಿ ಖರೀದಿಸಲಿಲ್ಲ ಅಂತ ಮನನೊಂದು ಸಾವಿಗೆ ಶರಣಾದ ಮೋನಿಕಾ
Air Conditioner : ತನ್ನ ಪತಿ ಎಸಿ ಖರೀದಿಸಲಿಲ್ಲ ಅಂತ ಮನನೊಂದು ಮಹಿಳೆಯೊಬ್ಬರು ಸಾವಿಗೆ ಶರಣಾಗಿರುವ ಆಘಾತಕಾರಿ ಘಟನೆ ತಮಿಳುನಾಡಿನ ತಿರುವಲ್ಲೂರಿನಲ್ಲಿ ನಡೆದಿದೆ.
ಮೃತ ಮಹಿಳೆಯನ್ನು ಪುಲ್ಲರಂಪಕ್ಕಂ ಮೂಲದ ಮೋನಿಕಾ (23) ಎಂದು ಗುರುತಿಸಲಾಗಿದೆ. ಮೋನಿಕಾ ಮತ್ತು ಅವರ ಪತಿ ಆಕಾಶ್ (26) ನಿನ್ನೆ ರಾತ್ರಿ ಎಸಿ ಖರೀದಿಸುವ ವಿಚಾರದಲ್ಲಿ ಜಗಳವಾಡಿದ್ದರು. ಮನೆಯಲ್ಲಿ ಸೆಕೆ ಹೆಚ್ಚಾದ್ದರಿಂದ ಎಸಿ ಬೇಕು ಅಂತ ಮೋನಿಕಾ ಬೇಡಿಕೆ ಇಟ್ಟಿದ್ದಳು. ಗಂಡ ಆಗುವುದಿಲ್ಲ ಅಂತ ಹೇಳಿದಾಗ ಇಬ್ಬರ ನಡುವೆ ಜಗಳ ನಡೆದಿತ್ತು. ಇದಾದ ಬಳಿಕ, ಆಕಾಶ್​ ಮತ್ತು ಅವರ ಪಾಲಕರು ಹಾಗೂ ಸಹೋದರ ಆ ರಾತ್ರಿ ಟೆರೇಸ್ ಮೇಲೆ ಮಲಗಿದ್ದರು.
ಬೆಳಗ್ಗೆ ಎದ್ದು ಕೆಳಗೆ ಹೋದಾಗ ಮೋನಿಕಾಳ ಕೋಣೆ ಲಾಕ್ ಆಗಿತ್ತು. ಎಷ್ಟೇ ಬಾಗಿಲು ಬಡಿದರು ಮೋನಿಕಾ ಮಾತ್ರ ಬಾಗಿಲು ತೆಗೆಯಲೇ ಇಲ್ಲ. ಕೊನೆಗೆ ಬಾಗಿಲು ಒಡೆದು ಒಳಗೆ ಹೋದಾಗ ಮೋನಿಕಾ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಕೂಡಲೇ ಆಕಾಶ್ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದರು. ತಕ್ಷಣ ಘಟನಾ ಸ್ಥಳಕ್ಕೆ ತಲುಪಿದ ಪೊಲೀಸರು ಪ್ರಾಥಮಿಕ ತನಿಖೆ ನಡೆಸಿದ ನಂತರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
ತಮ್ಮ ಮಗಳ ಸಾವಿನಲ್ಲಿ ಏನೋ ಅನುಮಾನ ಕಾಡುತ್ತಿದೆ ಎಂದು ಆರೋಪಿಸಿದ ನಂತರ ಪೊಲೀಸರು ಅಸಹಜ ಸಾವಿನ ಪ್ರಕರಣವನ್ನು ದಾಖಲಿಸಿ, ತನಿಖೆ ಆರಂಭಿಸಿದ್ದಾರೆ.
ಅಂದಹಾಗೆ, ಮೋನಿಕಾ ಬಟ್ಟೆ ಅಂಗಡಿಯಲ್ಲಿ ಉದ್ಯೋಗಿಯಾಗಿದ್ದರು. ಆಕಾಶ್ ಕೂಡ ಅಲ್ಲೇ ಕೆಲಸ ಮಾಡುತ್ತಿದ್ದರು. ಇಬ್ಬರೂ ಪ್ರೀತಿಸಿ ಮೂರು ವರ್ಷಗಳ ಹಿಂದಷ್ಟೇ ವಿವಾಹವಾದರು. ಇದೀಗ ಎಸಿ ವಿಚಾರಕ್ಕೆ ಶುರುವಾದ ಜಗಳ ಒಬ್ಬರ ಸಾವಿನಲ್ಲಿ ಅಂತ್ಯವಾಗಿದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net