ಇಲ್ಲಿ ಮರುಪಾವತಿ ಮಾಡಿದ ಮೊತ್ತ ಸಾಧಾರಣವಾಗಿದ್ದರೂ, ವೀಕ್ಷಕರು ಆ ಸನ್ನೆಯ ಹಿಂದಿನ ಪ್ರಾಮಾಣಿಕತೆಯನ್ನು ಮೆಚ್ಚಿಕೊಂಡಿದ್ದಾರೆ. ಸದ್ದಿಲ್ಲದೆ ಆರ್ಡರ್ ಬದಲಾಯಿಸಿ ಗ್ರಾಹಕರು ಗಮನಿಸುವುದಿಲ್ಲ ಎಂದು ಭಾವಿಸುವ ಬದಲು, ರೆಸ್ಟೋರೆಂಟ್ ಪಾರದರ್ಶಕತೆ, ಕೈಬರಹದ ಕ್ಷಮೆಯಾಚನೆ ಮತ್ತು ನಗದು ಮರುಪಾವತಿಯನ್ನು ಆರಿಸಿಕೊಂಡಿದೆ. ರೆಸ್ಟೋರೆಂಟ್‌ನ ಈ ನಡೆ ಒಂದು ಸಾಮಾನ್ಯ ನಿರಾಶಾದಾಯಕ ಅನುಭವವನ್ನು ಸ್ಮರಣೀಯ ಕ್ಷಣವಾಗಿ ಪರಿವರ್ತಿಸಿದ್ದು, ಅನುಕೂಲಕ್ಕಿಂತ ಪ್ರಾಮಾಣಿಕತೆಯನ್ನು ಮೆರೆದ ರೆಸ್ಟೋರೆಂಟ್ ಆಡಳಿತ ಮಂಡಳಿಯನ್ನು ನೆಟ್ಟಿಗರು ಮುಕ್ತಕಂಠದಿಂದ ಶ್ಲಾಘಿಸುತ್ತಿದ್ದಾರೆ (ಏಜೆನ್ಸೀಸ್).