ಪೊಲೀಸರ ಪ್ರಕಾರ, ಅಲ್ತಾಫ್ ಮತ್ತು ಅವನ ಸಹಚರರು 1991 ಏಪ್ರಿಲ್ 2ರಂದು ಜಮ್ಮು ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್ ಸಂಖ್ಯೆ 1ರಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ ಭಾಗಿಯಾಗಿದ್ದರು. ಇದರಲ್ಲಿ ಇಬ್ಬರು ಅರೆಸೈನಿಕ ಸಿಬ್ಬಂದಿ ಸೇರಿದಂತೆ ಮೂವರು ಸಾವನ್ನಪ್ಪಿದರು. ಮತ್ತು 18 ನಾಗರಿಕರು ಗಾಯಗೊಂಡರು. ಈ ಸಂಬಂಧ ಜಮ್ಮುವಿನಲ್ಲಿ ಎಫ್‌ಐಆರ್ ಸಂಖ್ಯೆ 07/1991 ಯು/ಎಸ್ 307, 302, 120(ಬಿ) ಆರ್‌ಪಿಸಿ, 3/4 ಟಾಡಾ, 4/5 ಇಎಸ್‌ಎ ದಾಖಲಾಗಿದೆ.