ಅರಮನೆ ಮೈದಾನದಲ್ಲಿ ಜುಲೈ.30 ರಿಂದ ರಾಷ್ಟ್ರಮಟ್ಟದ ದೇಸೀಯ ಬಹೃತ್ ಸಿದ್ಧ ಉಡುಪು ಜವಳಿಮೇಳ.

javali
Published on

ಬೆಂಗಳೂರು:ಸೌತ್ ಇಂಡಿಯಾ ಗಾರ್ಮೆಂಟ್ಸ್ ಅಸೋಸಿಯೇಷನ್ ಸಿದ್ಧಉಡುಪು ಕ್ಷೇತ್ರದಲ್ಲಿ ವ್ಯಾಪಾರಿ ವಲಯವನ್ನು ಹೊಸ ಆಯಾಮಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಜುಲೈ 30ರಿಂದ ಆಗಸ್ಟ್ 1ನೇ ವರಗೆ ನಗರದ ಅರಮನೆ ಮೈದಾನದಲ್ಲಿ 29ನೇ ವೈವಿಧ್ಯಮ ವಿನ್ಯಾಸಗಳ 29 ನೇ ನಾವೀನ್ಯತೆ ಪ್ಯಾಷನ್ ಉತ್ಸವ -2024 ಹಮ್ಮಿಕೊಂಡಿರುದಾಗಿ ಸಂಸ್ಥೆ ತಿಳಿಸಿದೆ.

ದೇಸೀಯ ರಾಷ್ಟ್ರಮಟ್ಟದ ಸಮಾವೇಶ ಇದಾಗಿದ್ದು,ವ್ಯಾಪಾರಿಗಳಿಂದ ವ್ಯಾಪಾರಿಗಳಿಗಾಗಿ ನಡೆಯುತ್ತಿರುವ ಉತ್ಸವ ಇದಾಗಿದೆ. ಮಹಿಳೆಯರು, ಪುರುಷರು ಮತ್ತು ಮಕ್ಕಳ 150 ಕ್ಕೂ ಹೆಚ್ಚು ಹೊಸ ಬ್ರ್ಯಾಂಡ್ ಗಳು, ವಿನ್ಯಾಸಗಳು, ಮದುವೆ, ಸಾಂಪ್ರದಾಯಿಕ ಉಡುಗೆ, ತೊಡುಗೆ, ಔಪಚಾರಿಕ, ಅನೌಪಚಾರಿಕ ವಸ್ತ್ರಗಳು, ಚಳಿಗಾಲದ ಉಡುಪುಗಳ ಪ್ರದರ್ಶನ ಕೂಡ ಇರಲಿದೆ. ಗೇಟ್ ಸಂಖ್ಯೆ 9 ಪ್ರಿನ್ಸೆಸ್ ಶ್ರೈನ್ ಸಭಾಂಗಣದದಲ್ಲಿ ಉತ್ಸವಕ್ಕೆ ಚಾಲನೆ ದೊರೆಯಲಿದೆ ಎಂದು ಸೌತ್ ಇಂಡಿಯಾ ಗಾರ್ಮೆಂಟ್ಸ್ ಅಸೋಸಿಯೇಷನ್ ಅಧ್ಯಕ್ಷ ಅನುರಾಗ್ ಸಿಂಘ್ಲಾ ಸುದ್ದಿಗೋಷ್ಠಿಯಲ್ಲಿ ಹೇಳಿದರು.

1 ತಿಂಗಳಿನಿಂದ ಕಾರ್ಯಕ್ರಮದ ಎಲ್ಲ ತಯಾರಿ ನಡೆಯುತ್ತಿದೆ. 100 ಕ್ಕೂ ಹೆಚ್ಚು ಜವಳಿ ಉತ್ಪಾದಕರು ಜವಳಿ ಉತ್ಸವದಲ್ಲಿ ಪಾಲ್ಗೊಳ್ಳಲು ನೊಂದಣಿ ಮಾಡಿಕೊಂಡಿದ್ದಾರೆ. ಸೂರತ್, ಜೈಪುರ, ದೆಹಲಿ, ಅಮಹದಾಬಾದ್, ನಾಗ್ಪುರ ಸೇರಿ ದೇಶದ ಪ್ರಮುಖ ನಗರಗಳ ಜವಳಿ ಉತ್ಪಾದಕರು ಪಾಲ್ಗೊಳ್ಳುತ್ತಿದ್ದಾರೆ. ಅಲ್ಲದೆ, ರಿಲಯನ್ಸ್ ರಿಟೈಲ್ ಪ್ಯಾಷನ್ ಬ್ರ್ಯಾಂಡ್, ಮುಂಬೈನ ಖ್ಯಾತ ಜೋಲಾ, ದೇಶದ ಪ್ರಮುಖ ಫ್ಯಾಷನ್ ಬ್ರ್ಯಾಂಡ್ ಕಂಪೆನಿಗಳು ಭಾಗವಹಿಸಲು ಇಚ್ಚಿಸಿವೆ. ಈಗಾಗಿ ಅಂದಾಜು 2,500 ಕ್ಕೂ ಹೆಚ್ಚು ಜವಳಿ ವ್ಯಾಪಾರಸ್ಥರು ಪಾಲ್ಗೊಳ್ಳುವ ನಿರೀಕ್ಷೆಯಿದೆ ಜತೆಗೆ 100 ಕೋಟಿ ಗೂ ಹೆಚ್ಚು ವಹಿವಾಟು ನಡೆಯುವ ವಿಶ್ವಾಸವಿದೆ ಎಂದು ಹೇಳಿದರು.

ಕರ್ನಾಟಕದಲ್ಲಿ ಮಹಿಳಾ ಉದ್ಯಮ ವಲಯ ಪ್ರಮುಖ ಮತ್ತು ನಿರ್ಣಾಯಕ ಪಾತ್ರ ವಹಿಸುತ್ತಿದ್ದು, ಸ್ತ್ರೀ ಸ್ವಸಹಾಯ ಸಂಘಗಳು ಜವಳಿ ಉತ್ಪಾದನೆ ಮತ್ತು ಮಾರಾಟದಲ್ಲೂ ತೊಡಗಿಕೊಂಡಿವೆ. ಮಹಿಳಾ ವಲಯದ ವ್ಯಾಪಾರ ವಹಿವಾಟಿಗೆ ಈ ಮೇಳ ಅತ್ಯಂತ ಮಹತ್ವದ್ದಾಗಿದೆ. ಚಿಲ್ಲರೆ ಬಟ್ಟೆ ಅಂಗಡಿಗಳಿಗೆ ಉತ್ಕೃಷ್ಟ ಮತ್ತು ಅತ್ಯುನ್ನತ ಗುಣಮಟ್ಟದ ಬ್ರ್ಯಾಂಡ್ ಗಳನ್ನು ಪೂರೈಸಲಾಗುವುದು. ರಾಷ್ಟ್ರೀಯ ಮಟ್ಟದ ವ್ಯಾಪಾರ ವಹಿವಾಟಿಗೆ ಇದು ವೇದಿಕೆಯಾಗಿದೆ. ರೂಪದರ್ಶಿಯರು ನವ ನವೀಯ ವಿನ್ಯಾಸಗಳ ಉಡುಗೆ ತೊಡುಗೆಗಳನ್ನು ತೊಟ್ಟು ಪ್ಯಾಷನ್ ಶೋನಲ್ಲಿ ಭಾಗವಹಿಸಲಿದ್ದಾರೆ ಎಂದರು.

ಅಸೋಸಿಯೇಶನ್ ಉಪಾಧ್ಯಕ್ಷ ನರೇಶ್ ಲಖನ್ವಾಲ್ ,ಕಾರ್ಯದರ್ಶಿ ರಾಜೇಶ್ ಚಾವತ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net