

ನವದೆಹಲಿ: ಕರೊನಾ ಸೋಂಕು ಪರೀಕ್ಷಿಸಲು ಈವರೆಗೆ ವಿದೇಶಿ ಕಿಟ್ಗಳನ್ನೇ ಅವಲಂಬಿಸಿದ್ದ ಭಾರತವೀಗ ದೇಶೀಯವಾಗಿ ಕಿಟ್ವೊಂದನ್ನು ಅಭಿವೃದ್ಧಿಪಡಿಸಿದೆ.
ಪುಣೆಯಲ್ಲಿರುವ ನ್ಯಾಷನಲ್ ಇನ್ಸ್ಟಿಟ್ಯೂಫ್ ವೈರಾಲಜಿ ಕರೊನಾ ಪರೀಕ್ಷೆಗೆಂದೇ ವಿಶೇಷ ಕಿಟ್ ತಯಾರಿಸಿದೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಹೇಳಿದ್ದಾರೆ.
ಇದನ್ನೂ ಓದಿ; ಭಾರತದಲ್ಲೂ ಸಜ್ಜಾಗುತ್ತಿದೆ ಕೋವಿಡ್19ಗೆ ರಾಮಬಾಣ
ಕೋವಿಡ್ ಸೋಂಕು ಪತ್ತೆ ಹಾಗೂ ನಿಗಾವಣೆಯಲ್ಲಿ ಈ ಪರೀಕ್ಷಾ ಸಾಧನ ಮಹತ್ವಪೂರ್ಣ ಪಾತ್ರ ವಹಿಸಲಿದೆ. ಒಮದೇ ಬಾರಿಗೆ 90 ಮಾದರಿಗಳನ್ನು ಪರೀಕ್ಷಿಸುವ ಸಾಮರ್ಥ್ಯ ಈ ಕಿಟ್ಗೆ ಇದೆ. ಅದು ಕೂಡ ಕೇವಲ 2.5 ತಾಸಿನಲ್ಲಿ ಕಾರ್ಯ ನೆರವೇರಿಸಲಿದೆ ಎಂದು ಅವರು ಹೇಳಿದ್ದಾರೆ.
ತ್ವರಿತವಾಗಿ ಕಾರ್ಯ ನಿರ್ವಹಿಸುವುದರಿಂದ ವೈದ್ಯರು ಅಗತ್ಯ ಮುಂಜಾಗರೂಕತಾ ಕ್ರಮಗಳನ್ನು ಆದಷ್ಟು ಬೇಗನೆ ಕೈಗೊಳ್ಳಲು ಸಾಧ್ಯವಾಗಲಿದೆ ಎಂದು ಹರ್ಷವರ್ಧನ್ ತಿಳಿಸಿದ್ದಾರೆ.