More

    ಭಾರತದಲ್ಲೂ ಸಜ್ಜಾಗುತ್ತಿದೆ ಕೋವಿಡ್​19ಗೆ ರಾಮಬಾಣ

    ನವದೆಹಲಿ: ನಿಷ್ಪ್ರಯೋಜಕವೆಂದು ಗುಜರಿಗೆ ಸೇರಿದ್ದ ಔಷಧವೊಂದು ಕೋವಿಡ್​19 ಕಾಯಿಲೆ ನಿಯಂತ್ರಣದಲ್ಲಿ ಪರಿಣಾಮಕಾರಿ ಪಾತ್ರ ನಿರ್ವಹಿಸುತ್ತಿದೆ. ಈ ಔಷಧವನ್ನು ಭಾರತದಲ್ಲೂ ತಯಾರಿಸಲು ಕಂಪನಿ ಅನುಮತಿ ನೀಡಲು ಮುಂದಾಗಿದೆ. ಇದಕ್ಕಾಗಿ ಹಲವು ದೇಶೀಯ ಕಂಪನಿಯೊಂದಿಗೆ ಮಾತುಕತೆ ಆರಂಭಿಸಿದೆ.

    ಅಂದಹಾಗೇ ಆ ಔಷಧ ರೆಮ್​ಡೆಸಿವಿರ್​. ಇದನ್ನು ಅಮೆರಿಕದ ಗಿಲಿಯಾಡ್​ ಕಂಪನಿ ಉತ್ಪಾದಿಸುತ್ತಿದೆ. ಆರಂಭದಲ್ಲಿ ಇದನ್ನು ಎಬೊಲಾ ಹಾಗೂ ಹೆಪಟೈಟಿಸ್​ ರೋಗ ನಿವಾರಣೆಗೆಂದು ತಯಾರಿಸಲಾಗಿತ್ತು. ಆದರೆ, ಇದರಲ್ಲಿ ಈ ಲಸಿಕೆ ಯಶಸ್ಸು ಕಾಣಲಿಲ್ಲ. ಆದರೆ, ಕೋವಿಡ್​ ನಿಯಂತ್ರಣದಲ್ಲಿ ಪರಿಣಾಮಕಾರಿ ಪಾತ್ರ ನಿರ್ವಹಿಸುತ್ತಿರುವುದು ಗೊತ್ತಾಗಿದೆ.

    ಕಳೆದ ವರ್ಷ ಚೀನಾದ ವುಹಾನ್​ನಲ್ಲಿ ಕರೊನಾ ರೋಗಿಗಳಿಗೆ ಇದನ್ನು ನೀಡಲಾಗಿತ್ತು. ಅಲ್ಲದೇ, ರೋಗಿಗಳ ಮೇಲೆ ಇದನ್ನು ಪ್ರಯೋಗಿಸಲು ಸ್ವತಃ ಅಮೆರಿಕದ ಸರ್ಕಾರವೇ ಪ್ರಾಯೋಜಕತ್ವ ವಹಿಸಿತ್ತು. ವೈರಾಣುಗಳು ಹರಡುವುದನ್ನು ನಿಯಂತ್ರಿಸುವುದಲ್ಲದೇ, ಕರೊನಾ ಸೋಂಕಿತರು ಬೇಗ ಚೇತರಿಸಿಕೊಳ್ಳುವಂತೆ ಮಾಡುವಲ್ಲಿ ಇದು ಯಶಸ್ವಿಯಾಗಿದೆ ಎಂದು ಅಮೆರಿಕದ ರಾಷ್ಟ್ರೀಯ ಅಲರ್ಜಿ ಮತ್ತು ಸಾಂಕ್ರಾಮಿಕ ರೋಗಗಳ ಸಂಸ್ಥೆಯ ನಿರ್ದೇಶಕ ಡಾ. ಅಂಥೋಣಿ ಫೌಸಿ ಮಾಹಿತಿ ನೀಡಿದ್ದರು. ರೆಮ್​ಡೆಸಿವಿರ್​ಅನ್ನು ಕರೊನಾ ಚಿಕಿತ್ಸೆಗೆ ಬಳಸಿ ಎಂದು ಅಮೆರಿಕ ಸರ್ಕಾರ ಶಿಫಾರಸು ಮಾಡಿದೆ.

    ಬಾಂಗ್ಲಾದೇಶದ ಬೆಕ್ಸಿಮ್ಕೋ ಫಾರ್ಮಾಸ್ಯುಟಿಕಲ್ಸ್​​ ಕಂಪನಿ ಈ ಲಸಿಕೆಯನ್ನು ಭಾರಿ ಪ್ರಮಾಣದಲ್ಲಿ ಉತ್ಪಾದಿಸಲು ಗಿಲಿಯಾಡ್​ನಿಂದ ಪರವಾನಗಿ ಪಡೆದಿದೆ. ಜತೆಗೆ, ಭಾರತದ ಕಂಪನಿಗಳೊಂದಿಗೂ ದೀರ್ಘ ಕಾಲದ ಒಪ್ಪಂದಕ್ಕೆ ಮುಂದಾಗಿದೆ. ಆದರೆ, ಕಂಪನಿಯ ಹೆಸರನ್ನು ಇನ್ನೂ ಬಹಿರಂಗಪಡಿಸಿಲ್ಲ.

    ಒಟ್ಟಿನಲ್ಲಿ ಕೋವಿಡ್​ಗೆ ರಾಮಬಾಣ ಭಾರತದಲ್ಲೂ ಸಜ್ಜಾಗುವುದು ಖಚಿತವಾಗಿದೆ. ಏಷ್ಯಾ, ಯುರೋಪ್​ ಹಾಗೂ ಇತರ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ 2022ರ ವೇಳೆಗೆ ಔಷಧ ಪೂರೈಕೆಯ ಗುರಿಯನ್ನು ಗಿಲಿಯಾಡ್​ ಹೊಂದಿದೆ. ಇದಲ್ಲದೇ, ಇನ್ನೂ ಹಲವು ಕಂಪನಿಗಳು ಕರೊನಾ ಲಸಿಕೆ ಸಂಶೋಧನೆಯಲ್ಲೂ ತೊಡಗಿವೆ.

    ಇದನ್ನೂ ಓದಿ; ಜೂನ್​ 1ರ ಹೊತ್ತಿಗೆ ದಿನಕ್ಕೆ 3,000 ಸಾವು, 2 ಲಕ್ಷ ಹೊಸ ಪ್ರಕರಣ….!

    ಸದ್ಯ ರೆಮ್​ಡೆಸಿವಿರ್​ ಲಸಿಕೆಯನ್ನು ಕ್ಲಿನಿಕಲ್​ ಟ್ರಯಲ್​ ಹಾಗೂ ನಿಗದಿತ ರೋಗಿಳಿಗೆ ಮಾತ್ರ ನೀಡಲಾಗುತ್ತಿದೆ. ಇದು ಪರಿಣಾಮಕಾರಿಯಾಗಿದ್ದರಿಂದ ಉತ್ಪಾದನೆ ಹೆಚ್ಚಿಸಲು ಕಂಪನಿ ಸಿದ್ಧತೆ ಮಾಡಿಕೊಳ್ಳುತ್ತಿದೆ. ಭಾರತದ ಔಷಧ ತಜ್ಞರು ಕೂಡ ರೆಮ್​ಡೆಸಿವಿರ್​ ಬಳಕೆಗೆ ಶಿಫಾರಸು ಮಾಡಿರುವುದು ಕಂಪನಿಗೆ ಇನ್ನಷ್ಟು ಉತ್ತೇಜನ ನೀಡದಂತಾಗಿದೆ.

    ಜಮ್ಮು ಕಾಶ್ಮೀರದಲ್ಲಿ 148 ವರ್ಷಗಳ ‘ದರ್ಬಾರ್​’ಗೆ ಬೀಳುತ್ತಾ ಬ್ರೇಕ್​?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts