ರಾಷ್ಟ್ರೀಯ ಮೀನು ಕೃಷಿಕರ ದಿನಾಚರಣೆ

Fisharis-Day
Published on

ಕಾರವಾರ: ಪಂಜರದಲ್ಲಿ ಮೀನು ಕೃಷಿ ಮಾಡುವ ಪದ್ಧತಿಯನ್ನು ಕೇಂದ್ರೀಯ ಸಮುದ್ರ ಮೀನುಗಾರಿಕಾ ಸಂಶೋಧನಾ ಸಂಸ್ಥೆ (ಸಿಎಂಎಫ್‌ಆರ್‌ಐ) ಸಂಶೋಧಿಸಿ,ನಿರಂತರವಾಗಿ ಪ್ರಯೋಗ ನಡೆಸಿದೆ ಎಂದು ಭಾರತೀಯ ಕೃಷಿ ಸಂಶೋಧನಾ ಕೇಂದ್ರ (ಐಸಿಎಆರ್) ಮಾಜಿ ಎಡಿಜಿ ಡಾ. ಪ್ರವೀಣ ಪುತ್ರಾ ತಿಳಿಸಿದರು.
ಕಾರವಾರದ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಆಯೋಜಿಸಿದ ರಾಷ್ಟ್ರೀಯ ಮೀನು ಕೃಷಿಕರ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕುಡುಡೆ ಮೀನಿನಿಂದ ಪ್ರಾರಂಭಿಸಿ ಈಗ ಹಲವಾರು ಜಾತಿಯ ಮೀನುಗಳನ್ನು ಸಮುದ್ರ, ನದಿಗಳ ಹಿನ್ನೀರಿನಲ್ಲಿ ಕೃಷಿ ಮಾಡಿ ಪ್ರಶಂಸೆಗೆ ಪಾತ್ರವಾಗಿದೆ ಎಂದರು.
ಸಿಎಂಎಫ್‌ಆರ್‌ಐ ಮಾಜಿ ವಿಜ್ಞಾನಿ ಡಾ. ಪ್ರತಿಭಾ ರೋಹಿತ್ ಸಿಎಂಎಫ್‌ಆರ್‌ಐ ಕಾರವಾರ ಪ್ರಾದೇಶಿಕ ಕೇಂದ್ರವು ಮೀನು ಕೃಷಿ ಉತ್ತೇಜನಕ್ಕೆ ಸಾಕಷ್ಟು ಸಕ್ರಮ ವಹಿಸಿದೆ ಎಂದರು. ನಬಾರ್ಡ್ ಸಹಾಯಕ ಅಽಕಾರಿ ಸುಶೀಲ ನಾಯ್ಕ, ಪಂಜರ ಮೀನು ಕೃಷಿಗೆ ತಗಲುವ ವೆಚ್ಚ, ಬ್ಯಾಂಕ್‌ನ ಹಣಕಾಸಿನ ನೆರವಿನ ಬಗ್ಗೆ ವಿವರಿಸಿದರು. ಅಬೀಸ್ ಫೀಡ್ಸ್ ಪೈ. ಲಿಮಿಟೆಡ್ ಉಪಾಧ್ಯಕ್ಷ ಮೊಹಮ್ಮದ್ ಆಸೀಫ್,
ಉಪ-ಪ್ರಾದೇಶಿಕ ವಿಜ್ಞಾನ ಕೇಂದ್ರದ ಸದಸ್ಯ ಕಾರ್ಯದರ್ಶಿ ಡಾ. ಸಂಜೀವ ದೇಶಪಾಂಡೆ ಮಾತನಾಡಿದರು. ಪಂಜರ ಮೀನು ಕೃಷಿಯಲ್ಲಿ ಸಾಧನೆ ಮಾಡಿದ ಕುಮಟಾ ತಾಲೂಕಿನ ಪ್ರವೀಣ ಮಹಾಬಲೇಶ್ವರ ಹರಿಕಂತ್ರ ಹಾಗೂ ಜಟ್ಟಿ ಮಕ್ರಿ ಅವರನ್ನು ಸನ್ಮಾನಿಸಲಾಯಿತು.
ವಿಜ್ಞಾನಿ ಡಾ. ಸುರೇಶ ಬಾಬು ಪಿ.ಪಿ. ಸ್ವಾಗತಿಸಿದರು. ಡಾ. ಲಿಂಗಪ್ರಭು ವಂದಿಸಿದರು. ಹಿರಿಯ ತಾಂತ್ರಿಕ ಸಹಾಯಕಿ ಸೋನಾಲಿ ಎಸ್.ಎಂ. ನಿರೂಪಿಸಿದರು. ಮೀನು ಕೃಷಿಕರು, ಸಿಎಂಎಫ್‌ಆರ್‌ಐ ಕಾರವಾರ, ಮಂಗಳೂರು, ಕೊಚ್ಚಿಯ ವಿಜ್ಞಾನಿಗಳು ,ತಾಂತ್ರಿಕ ಸಹಾಯಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net