

ತಮಿಳುನಾಡು: ಸಂವಿಧಾನಕ್ಕೆ ಅಗೌರವ(Controversy) ತೊರಿದ್ದಾರೆ ಎಂದು ತಮಿಳುನಾಡು ರಾಜ್ಯಪಾಲ ಆರ್.ಎನ್.ರವಿ ಆರೋಪಿಸಿ ಚಳಿಗಾಲ ಅಧಿವೇಶನದ ಮೊದಲ ದಿನದಂದು ತಮ್ಮ ಸಂಪ್ರಾದಾಯಕ ಭಾಷಣ ಓದದೆ ರಾಜ್ಯ ವಿಧಾನಸಭೆಯಿಂದ ಹೊರ ನಡೆದ ಘಟನೆ ಸೋಮವಾರ(ಜ.06) ನಡೆದಿದೆ.
ರಾಜ್ಯಪಾಲರು ಅಧಿವೇಶನಕ್ಕೆ ಪ್ರವೇಶ ಪಡೆದ ಬಳಿಕ ಮೊದಲು ತಮಿಳು ತಾಯಿ ವಾಳ್ತು(ನಾಡಗೀತೆ) ಗೀತೆಯನ್ನು ಹಾಡಲಾಯಿತು. ಬಳಿಕ ರಾಷ್ಟ್ರಗೀತೆ ಹಾಡುವಂತೆ ರಾಜ್ಯಪಾಲರು ಗೌರವ ಪೂರ್ವಕವಾಗಿ ಹೇಳಿದ್ದಾರೆ. ಅಲ್ಲದೆ, ಇದನ್ನು ಸ್ಪೀಕರ್ ಮತ್ತು ಸಿಎಂ ಸ್ಟಾಲಿನ್ ಬಳಿ ಮನವಿ ಮಾಡಲಾಯಿತು. ಆದರೆ, ಈ ಮನವಿಯನ್ನು ಸ್ಟಾಲಿನ್ ನಿರಾಕರಿಸಿದ್ದಾರೆ. ಇದರಿಂದ ಬೇಸರಗೊಂಡ ರಾಜ್ಯಪಾಲರು ತಮ್ಮ ಸಂಪ್ರದಾಯಕ ಭಾಷಣ ಓದದೆ ಹೊರಬಂದಿದ್ದಾರೆ ಎಂದು ವರದಿಯಾಗಿದೆ.
ಚೈನ್ನೈ ಅಣ್ಣಾ ವಿಶ್ವವಿದ್ಯಾಲಯದಲ್ಲಿ ನಡೆದ ವಿದ್ಯಾರ್ಥಿನಿ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸದನದಲ್ಲಿ ಅಡಳಿತರೂಢ ಮತ್ತು ವಿರೋಧ ಪಕ್ಷಗಳ ನಡುವೆ ಭಾರೀ ಗದ್ದಲಕ್ಕೆ ಕಾರಣವಾಯಿತು. ಆಡಳಿತರೂಢ ಡಿಎಂಕೆ ನೇತೃತ್ವದ ಇಂಡಿಯಾ ಬ್ಲಾಕ್ನ ಸದಸ್ಯರಾದ ಕಾಂಗ್ರೆಸ್ ನಾಯಕರು ವಿವಿ ಕುಲಪತಿಯಾಗಿ ರಾಜ್ಯಪಾಲರು ಘಟನೆಗೆ ಕಾರಣವಾದ ಜವಾಬ್ದಾರಿ ಲೋಪವನ್ನು ನಿಭಾಯಿಸಬೇಕು ಎಂದು ಒತ್ತಾಯಿಸಿದರು. ಈ ಗದ್ದಲ ನಡುವೆ ರಾಜ್ಯಪಾಲರು ರಾಷ್ಟ್ರಗೀತೆಗೆ ಮನವಿ ಮಾಡಿದ್ದಾರೆ. ನಿರಾಕರಣೆ ಹಿನ್ನೆಲೆ ಗೌರ್ನರ್ ಹೊರ ನಡೆದಿದ್ದಾರೆ.
ರಾಜ್ಯಪಾಲರ ಈ ನಡೆಯನ್ನು ಖಂಡಿಸಿದ ರಾಜ್ಯಧ್ಯಕ್ಷ ಸೆಲ್ವಪೆರುಂತಗೈ ನೇತೃತ್ವದಲ್ಲಿ ಕಾಂಗ್ರೆಸ್ ನಾಯಕರು ಸಭಾತ್ಯಾಗ ಮಾಡಿದರು. ಈ ಎಲ್ಲಾ ಗದ್ದಲದ ನಡುವೆ ಎಐಡಿಎಂಕೆ ಸದಸ್ಯರನ್ನು ಹೊರ ಹಾಕುವಂತೆ ಮಾರ್ಷಲ್ಗಳಿಗೆ ಸ್ಪೀಕರ್ ಆದೇಶ ನೀಡಿದ್ದಾರೆ.(ಏಜೆನ್ಸೀಸ್)