ಕೆಪಿಸಿಸಿ ಪದವೀಧರ ವಿಭಾಗದ ಅಧ್ಯಕ್ಷರಾಗಿ ನಟರಾಜಗೌಡ ನೇಮಕ

natarajagowda
Published on

ಬೆಂಗಳೂರು: ಪ್ರದೇಶ ಕಾಂಗ್ರೆಸ್ ಸಮಿತಿ ಪದವೀಧರ ವಿಭಾಗದ ಅಧ್ಯಕ್ಷರಾಗಿ ಪಕ್ಷದ ವಕ್ತಾರ ಎ.ಎನ್​.ನಟರಾಜ ಗೌಡ ನೇಮಕಗೊಂಡಿದ್ದಾರೆ.
ಈ ಹುದ್ದೆ ರಾಜ್ಯ ಮಟ್ಟದ್ದಾಗಿದ್ದು, ಇಡೀ ರಾಜ್ಯದಲ್ಲಿ ಪ್ರವಾಸ ಮಾಡಿ ಪದವೀಧರರನ್ನು ಸಂಘಟಿಸುವ ಜವಾಬ್ದಾರಿ ಇದೆ. ವಿಧಾನ ಪರಿಷತ್ ಚುನಾವಣೆ ನಡೆಯುತ್ತಿರುವ ಸಂದರ್ಭದಲ್ಲಿ ಪದವೀಧರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಪಕ್ಷದ ಚಟುವಟಿಕೆ ಚುರುಕುಗೊಳಿಸಲು ಈ ನೇಮಕ ನಡೆದಿದೆ.
ಮಂಗಳವಾರ ನಟರಾಜ್ ಗೌಡರಿಗೆ ಜವಾಬ್ದಾರಿ ನೀಡಿದ ಆದೇಶ ಹೊರಡಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಶುಭ ಹಾರೈಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net