

ಶಿವಮೊಗ್ಗ: ಉಂಬ್ಳೆಬೈಲು ವಲಯದ ಸಾಲಗೆರೆಯಿಂದ ಗಾಜನೂರಿಗೆ ನಾಟ ಕಳ್ಳ ಸಾಗಣೆ ಮಾಡುತ್ತಿದ್ದ ನಾಲ್ವರನ್ನು ಭದ್ರಾವತಿ ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿದ್ದಾರೆ. ಒಂದು ಟಾಟಾ ಏಸ್, ಬೈಕ್ ಅನ್ನು ಜಪ್ತಿ ಮಾಡಿದ್ದಾರೆ.
ಸಾಲುಗೆರೆಯ ಮಧುಸೂಧನ್, ಉಂಬ್ಳೆಬೈಲಿನ ಕುಮಾರ್, ಕೃಷ್ಣ, ಮೈಲಾರಿ ಬಂಧಿತರು. ಟಾಟಾ ಏಸ್‌ನಲ್ಲಿ 6 ಸಾಗುವಾನಿ ಮರಗಳನ್ನು ಗಾಜನೂರಿಗೆ ಸಾಗಿಸುವಾಗ ಅರಣ್ಯ ಅಧಿಕಾರಿಗಳು ಕಾರ್ಯಾಚಾರಣೆ ನಡೆಸಿದ್ದಾರೆ. ಉಂಬ್ಳೆಬೈಲು ಆರ್‌ಎಫ್‌ಒ ಗಿಡ್ಡಸ್ವಾಮಿ, ಡಿವೈಆರ್‌ಎಫ್‌ಒ ಪವನ್ ಮಹೇಂದ್ರಕರ್, ನಾಗರಾಜ್, ಬೀಟ್ ಆಫೀಸರ್ ಶ್ರೀಕಾಂತ್, ಶಂಕರವಲಯ ಮತ್ತು ಉಂಬ್ಳೆಬೈಲ್‌ನ ವಲಯ ಅರಣ್ಯ ಇಲಾಖೆಯ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.