‘ನಾರಿ ನಿನಗೊಂದು ಸ್ಯಾರಿ’ ಐವರು ಬಹುಮಾನಿತರ ಆಯ್ಕೆ

08 HANUR 1
ಹನೂರಿನ ಜಿ.ವಿ.ಗೌಡ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ‘ವಿಜಯವಾಣಿ’ ನಾರಿ ನಿನಗೊಂದು ಸ್ಯಾರಿ ಸ್ಪರ್ಧೆ ವಿಜೇತರನ್ನು ಲಾಟರಿ ಎತ್ತುವ ಮೂಲಕ ಆಯ್ಕೆ ಮಾಡಲಾಯಿತು. ಪ್ರಾಂಶುಪಾಲೆ ಡಾ.ಚಂದ್ರಮ್ಮ, ಲಕ್ಷ್ಮೀ ಪನ್ನಾಗೋಳ್, ಉಮಾ, ಮಮತಾ ಇತರರು ಇದ್ದರು.
Published on

ಹನೂರು: ಪಟ್ಟಣದ ಆರ್.ಎಸ್.ದೊಡ್ಡಿ ಬಳಿಯ ಜಿ.ವಿ.ಗೌಡ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ವಿಜಯವಾಣಿಯ ನಾರಿ ನಿನಗೊಂದು ಸ್ಯಾರಿ ಶೀರ್ಷಿಕೆಯಡಿಯ ಸ್ಪರ್ಧೆಯಲ್ಲಿ ಭಾಗವಹಿಸಿದ್ದರ ಪೈಕಿ ಐವರು ಬಹುಮಾನಿತ ವಿಜೇತರನ್ನು ಆಯ್ಕೆ ಮಾಡಲಾಯಿತು. ಈ ಕಾರ್ಯಕ್ರಮಕ್ಕೆ ಪ್ರಾಂಶುಪಾಲೆ ಡಾ.ಚಂದ್ರಮ್ಮ ಚಾಲನೆ ನೀಡಿದರು.

ಮಹಿಳೆಯರು ಪ್ರಶ್ನೆಗೆ ಉತ್ತರಿಸಿ ಸೀರೆಯನ್ನು ಗೆಲ್ಲುವ ಅವಕಾಶವನ್ನು ರಾಜ್ಯದ ನಂ.1 ಕನ್ನಡ ದಿನಪತ್ರಿಕೆ ವಿಜಯವಾಣಿ ಕಲ್ಪಿಸಿತ್ತು. ಕಳೆದ 45 ದಿನಗಳವರೆಗೆ ಪತ್ರಿಕೆಯಲ್ಲಿ ಪ್ರಶ್ನೋತ್ತರವನ್ನು ಆರಂಭಿಸುವುದರ ಮೂಲಕ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಪ್ರತಿದಿನವೂ ಒಂದೊಂದು ಪ್ರಶ್ನೆಗೆ ಉತ್ತರವನ್ನು ಕೇಳಲಾಗಿತ್ತು. ತಾಲೂಕಿನಿಂದ 40ಕ್ಕೂ ಹೆಚ್ಚು ಮಹಿಳೆಯರು ಹನೂರಿನಲ್ಲಿ ಇರಿಸಲಾಗಿದ್ದ ಬಾಕ್ಸ್‌ನಲ್ಲಿ ಸುಮಾರು 300ಕ್ಕೂ ಹೆಚ್ಚು ಕೂಪನ್‌ಗಳನ್ನು ಹಾಕಿದ್ದರು. ಬೆಳಗ್ಗೆ 11ರ ವೇಳೆಯಲ್ಲಿ ಕಾಲೇಜಿನ ಪ್ರಾಂಶುಪಾಲೆ ಚಂದ್ರಮ್ಮ ಹಾಗೂ ಉಪನ್ಯಾಸಕಿಯರು ಹಾಗೂ ವಿದ್ಯಾರ್ಥಿನಿಯರ ಸಮ್ಮುಖದಲ್ಲಿ ವಿಜೇತರ ಆಯ್ಕೆಗಾಗಿ ಕೂಪನ್ ಎತ್ತುವ ಕಾರ್ಯಕ್ಕೆ ಚಾಲನೆ ನೀಡಿದರು. ಜತೆಗಿದ್ದ ಉಪನ್ಯಾಸಕಿಯರು ಹಾಗೂ ವಿದ್ಯಾರ್ಥಿನಿಯರಿಂದ ಅದೃಷ್ಟಶಾಲಿ ಐವರು ವಿಜೇತರನ್ನು ಆಯ್ಕೆ ಮಾಡಲಾಯಿತು. ನೆರೆದಿದ್ದವರಿಂದ ಮೆಚ್ಚುಗೆ ವ್ಯಕ್ತವಾಯಿತು.

ಹನೂರಿನ ವಿಜೇತರು: ಎಸ್.ಮಂಜುಳಾ, ಕರ್ನಾಟಕ ಪಬ್ಲಿಕ್ ಶಾಲೆ ಲೊಕ್ಕನಹಳ್ಳಿ ಗ್ರಾಮ, ಐ.ವಿಜಯಾ, ಶಿಕ್ಷಕರ ಬಡಾವಣೆ ಹನೂರು, ಲೂರ್ದುಮೇರಿ ತೊಮಿಯಾರ್‌ಪಾಳ್ಯ ಗ್ರಾಮ, ಮೀನಾಕ್ಷಿ, ಚಿಂಚಳ್ಳಿ ಗ್ರಾಮ ಹಾಗೂ ಶಿವಮಲ್ಲಮ್ಮ ಕುರುಬರ ಬೀದಿ ಹಲಗಾಪುರ ಗ್ರಾಮ.

ಪತ್ರಿಕೆ ಓದುವ ಹವ್ಯಾಸ ಬೆಳೆಸಿಕೊಳ್ಳಿ: ಈ ವೇಳೆ ಪ್ರಾಂಶುಪಾಲೆ ಡಾ.ಚಂದ್ರಮ್ಮ ಮಾತನಾಡಿ, ಮಹಿಳೆಯರಲ್ಲಿ ಪತ್ರಿಕೆ ಓದುವ ಹವ್ಯಾಸವನ್ನು ಬೆಳೆಸುವುದರ ಜತೆಗೆ ಸ್ಪರ್ಧಾ ಮನೋಭಾವನೆಯನ್ನು ಬೆಳೆಸುವ ನಿಟ್ಟಿನಲ್ಲಿ ವಿಜಯವಾಣಿ ಪತ್ರಿಕೆ ನಾರಿ ನಿನಗೊಂದು ಸ್ಯಾರಿ ಬಹುಮಾನ ಸ್ಪರ್ಧೆಯನ್ನು ಆಯೋಜಿಸಿರುವುದು ಮೆಚ್ಚುಗೆಯ ಸಂಗತಿ. ಇಂತಹ ಕಾರ್ಯಕ್ರಮದಿಂದ ಪ್ರಚಲಿತ ವಿದ್ಯಮಾನಗಳು ಅರಿವಾಗುತ್ತದೆ. ಮಕ್ಕಳಲ್ಲೂ ಸ್ಪರ್ಧಾಭಾವನೆ ಮೂಡುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಇತ್ತೀಚಿನ ದಿನಗಳಲ್ಲಿ ಪತ್ರಿಕೆ ಓದುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಇಂತಹ ಕಾರ್ಯಕ್ರಮಗಳು ಪತ್ರಿಕೆ ಓದುವವರ ಸಂಖ್ಯೆಯನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗಲಿದೆ. ಆದ್ದರಿಂದ ಪ್ರತಿಯೊಬ್ಬರೂ ಪತ್ರಿಕೆ ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಲಕ್ಷ್ಮೀ ಪನ್ನಾಗೋಳ್, ಉಮಾ, ಮಮತಾ, ಗ್ರಂಥಪಾಲಕ ಸುರೇಂದ್ರ ಹಾಗೂ ಇನ್ನಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net