ದೇಶದಲ್ಲೇ ದೊಡ್ಡ ರೋಡ್ ಶೋ.. ಪ್ರಧಾನಿ ವೇಳಾಪಟ್ಟಿ

Screenshot_2023-02-27-09-31-34-36.jpg
Published on

ದೇಶದಲ್ಲೇ ದೊಡ್ಡ ರೋಡ್ ಶೋ... ಪ್ರಧಾನಿ ವೇಳಾಪಟ್ಟಿ

ಬೆಳಗಾವಿ: ಜಿಲ್ಲೆಗೆ ಇಂದು ಪ್ರಧಾನಿ ನರೇಂದ್ರ ಮೋದಿ ಆಗಮಿಸುತ್ತಿದ್ದು, ರೋಡ್ ಶೋ ಹಾಗೂ ಬೃಹತ್ ವೇದಿಕೆಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ.

ಮೋದಿ ಭೇಟಿ ವೇಳಾಪಟ್ಟಿ:
ಶಿವಮೊಗ್ಗ ದಿಂದ ವಿಶೇಷ ವಿಮಾನ ಮೂಲಕ ಮಧ್ಯಾಹ್ನ 2.20 ಕ್ಕೆ ಬೆಳಗಾವಿ- ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸುವರು. ಮಧ್ಯಾಹ್ನ 2.45 - ಕೆಎಸ್‌ಆರ್‌ಪಿ ಮೈದಾನ ಹೆಲಿಪ್ಯಾಡ್ ತಲುಪಲಿದ್ದಾರೆ.

ಮಧ್ಯಾಹ್ನ 2.50ಕ್ಕೆ ಕೆಎಸ್‌ಆರ್‌ಪಿ ಮೈದಾನದಿಂದ ರೋಡ್ ಶೋ ಆರಂಭಿಸಲಿದ್ದಾರೆ

ಮಧ್ಯಾಹ್ನ 3.15 - ಮಾಲಿನಿ ಸಿಟಿ ಮೈದಾನ, ಸಮಾವೇಶ ನಡೆಯುವ ಸ್ಥಳಕ್ಕೆ ತಲುಪುವರು.

ಸಂಜೆ 4.35 - ರಸ್ತೆ ಮೂಲಕ ಮಾಲಿನಿ ಸಿಟಿ ಬಳಿಯ ಹೆಲಿಪ್ಯಾಡ್ ನಿಂದ ಸಂಜೆ 4.45 - ಹೆಲಿಕಾಪ್ಟರ್ ಮೂಲಕ ಸಾಂಬ್ರಾ ಏರ್‌ಪೋರ್ಟ್ ತಲುಪಿ ಅಲ್ಲಿಂದ, ಸಂಜೆ 5.10 ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ.

ರೋಡ ಶೋ ವಿವರ:
ಕಂಗ್ರಾಳಿಯಲ್ಲಿರುವ ಹೆಲಿಪ್ಯಾಡ್‌ಗೆ ಆಗಮಿಸಿ ಬಳಿಕ ಎಪಿಎಂಸಿ ವೃತ್ತದಿಂದ ರೋಡ್ ಶೋ ಆರಂಭಿಸಿ, ಬಸವೇಶ್ವರ ವೃತ್ತ, ವೈ ಜಂಕ್ಷನ್ , ಅಂಬೇಡ್ಕರ್ ರಸ್ತೆ, ಚನ್ನಮ್ಮ ವೃತ್ತ, ಸಂಭಾಜಿ ವೃತ್ತ, ರಾಮಲಿಂಗ ಖಿಂಡ ಗಲ್ಲಿ ಬೀದಿ, ಎಸ್‌ಬಿಎಂ ರೋಡ್, ಶಿವಚರಿತ್ರೆ ಡಬಲ್ ರೋಡ್, ಶಹಾಪುರ ಬಸವಣ್ಣ ಗಲ್ಲಿ, ಬೆಳಗಾವಿ ಓಲ್ಡ್ ನಾಕಾ, ಯಡಿಯೂರಪ್ಪ ಮಾರ್ಗದಲ್ಲಿ ಬಂದು ಮಾಲಿನಿ ಸಿಟಿಯಲ್ಲಿರುವ ವೇದಿಕೆ ಕಾರ್ಯಕ್ರಮಕ್ಕೆ ತಲುಪುವರು.

ರೋಡ ಶೋ ವಿಶೇಷತೆಗಳು:
ಒಟ್ಟು 10.7 ಕಿ.ಮೀ. ಮೋದಿ ರೋಡ ಶೋ ಆಗಿದ್ದು, ಇದು ದೇಶದ ಅತಿ ಉದ್ದದ ರೋಡ ಶೋ ಎನ್ನುವ ಹೆಗ್ಗಳಿಕೆ ಪಡೆಯುತ್ತಿದೆ. ಕೆಎಸ್ ಆರ್ ಪಿ ಮೈದಾನದಿಂದ ಮಾಲಿನಿ ಸಿಟಿವರೆಗೆ
ರಸ್ತೆಯುದ್ಧಕ್ಕೂ 30ಕ್ಕೂ ರಾಜ್ಯಗಳ ಸಂಸ್ಕೃತಿಕ ಕಲಾ ಪ್ರದರ್ಶನವಾಗಲಿದೆ. ಒಟ್ಟು 400ಕ್ಕೂ ಹೆಚ್ಚು ಕಲಾವಿದರಿಂದ ಒಟ್ಟು 90ಕ್ಕೂ ಹೆಚ್ಚು ವೇದಿಕೆಗಳ ಮೇಲೆ ಕಲಾ ಪ್ರದರ್ಶನವಾಗಲಿದೆ.  ಕೇಂದ್ರದ ಸರ್ಕಾರದ ಯೋಜನೆಗಳ ಅಣಕು ಪ್ರದರ್ಶನ ನಡೆಯಲಿದೆ. 10ಸಾವಿರಕ್ಕೂ ಹೆಚ್ಚು‌ಮಹಿಳೆಯರು ಭಗವಾ ಪೇಟಾ ತೊಟ್ಟು ಕುಂಭಮೇಳದೊಂದಿಗೆ ಭಾಗಿಯಾಗಲಿದ್ದಾರೆ. ದೇಶದಲ್ಲಿಯೇ ವಿಭಿನ್ನ, ವಿಶಿಷ್ಟ ಹಾಗೂ ಇತಿಹಾಸ ಸೃಷ್ಡಿಸಲಿರುವ ರೋಡ್ ಶೋ ಇದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net