'ಇದು ಪವನ್ ಅಲ್ಲ ತೂಫಾನು': ಜನಸೇನಾನಿಗೆ ಪ್ರಧಾನಿ ಮೋದಿ ಶ್ಲಾಘನೆ

Screenshot 2024-06-07 164053
Published on

ನವದೆಹಲಿ: ಜನಸೇನಾ ನಾಯಕ ಪವನ್ ಕಲ್ಯಾಣ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಹೊಗಳಿದ್ದಾರೆ.

ಇಲ್ಲಿ ಕುಳಿತಿರುವವರು ಪವನ್ ಅಲ್ಲ ತೂಫಾನು ಎಂದು ಅವರನ್ನು ವಿಶೇಷವಾಗಿ ಅಭಿನಂದಿಸಿದ್ದಾರೆ. ದಕ್ಷಿಣದ ರಾಜ್ಯಗಳನ್ನು ಪ್ರಸ್ತಾಪಿಸಿ ಎಪಿ ನಾಯಕರನ್ನು ಹೊಗಳಿದರು.

ಶುಕ್ರವಾರ(ಜೂ7)ಹಳೆಯ ಸಂಸತ್ ಭವನದಲ್ಲಿ ಎನ್ ಡಿಎ ಸಂಸದರ ಸಭೆ ನಡೆಯಿತು. ಬಿಜೆಪಿ ನಾಯಕರಾದ ಅಮಿತ್ ಶಾ, ರಾಜನಾಥ್ ಸಿಂಗ್ ಮತ್ತು ನಿತಿನ್ ಗಡ್ಕರಿ ಅವರು ಮೈತ್ರಿ ಲೋಕಸಭೆಯ ನಾಯಕರಾಗಿ ಮೋದಿ ಹೆಸರನ್ನು ಪ್ರಸ್ತಾಪಿಸಿದರು. ಭಾಗವಹಿಸಿದ ಪಕ್ಷಗಳು ಇದನ್ನು ಬೆಂಬಲಿಸಿ ಮೋದಿ ಅವಿರೋಧವಾಗಿ ಆಯ್ಕೆಯಾದರು ಎಂದು ಘೋಷಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮೋದಿ, ಆಂಧ್ರಪ್ರದೇಶದಲ್ಲಿ ಯಲ್ಲಿ ಸಾಧಿಸಿದ ಯಶಸ್ಸು ಜನರ ಆಕಾಂಕ್ಷೆಗಳನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು.

ಚಂದ್ರಬಾಬು ಜೊತೆಗೂಡಿ ಐತಿಹಾಸಿಕ ಗೆಲುವು ಸಾಧಿಸಿದ್ದಾರೆ ಎಂದು ಸಭೆಯಲ್ಲಿ ಹಾಜರಿದ್ದ ಪವನ್ ಅವರನ್ನು ಅಭಿನಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net