ವಿಶ್ವ ನಾಯಕರಲ್ಲಿ ನರೇಂದ್ರ ಮೋದಿಗೆ ಅಗ್ರಸ್ಥಾನ

Modi
Published on

ವಿಶ್ವದ ಜನಪ್ರಿಯ ನಾಯಕ ಎಂಬ ಹೆಗ್ಗಳಿಕೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಈ ವರ್ಷವೂ ಉಳಿಸಿಕೊಂಡಿದ್ದಾರೆ. ಸತತ 9 ವರ್ಷಗಳಿಂದ ದೇಶದ ಆಡಳಿತ ಮುನ್ನಡೆಸಿಕೊಂಡು ಹೋಗುತ್ತಿರುವ ಪ್ರಧಾನಿ ಮೋದಿ ಅವರ ವರ್ಚಸ್ಸು ವಿದೇಶಗಳಲ್ಲೂ ಎದ್ದು ಕಾಣುತ್ತಿದೆ. ಅಮೆರಿಕದ ಮಾಹಿತಿ ಗುಪ್ತಚರ ಕಂಪನಿ ಮಾರ್ನಿಂಗ್ ಕನ್ಸಲ್ಟ್ ನಡೆಸಿರುವ ಸಮೀಕ್ಷೆಯಲ್ಲಿ ಪ್ರಧಾನಿ ಮೋದಿ ಅವರು ಬೈಡೆನ್, ಸುನಕ್, ಮ್ಯಾಕ್ರನ್ ಅವರನ್ನು ಹಿಂದಿಕ್ಕಿ ಅಗ್ರಸ್ಥಾನಿಯಾಗಿದ್ದಾರೆ.

ಪ್ರಧಾನಿಗೆ ಶೇ.78 ಅಂಕ : ಜಾಗತಿಕ ನಾಯಕರ ಅನುಮೋದನೆ ರೇಟಿಂಗ್​ನಲ್ಲಿ ಪ್ರಧಾನಿ ಮೋದಿ ಶೇ. 78 ಅಂಕಗಳನ್ನು ಪಡೆದು 22 ದೇಶಗಳ ನಾಯಕರನ್ನು ಹಿಂದಿಕ್ಕಿದ್ದಾರೆ. ಈ ನಾಯಕರಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್, ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಸೇರಿದ್ದಾರೆ.

ಏನಿದು ಸಮೀಕ್ಷೆ?: ಮಾರ್ನಿಂಗ್ ಕನ್ಸಲ್ಟ್ ಸಂಸ್ಥೆಯು ಜನವರಿ 26ರಿಂದ ಜನವರಿ 31 ರ ನಡುವೆ ಈ ಸಮೀಕ್ಷೆ ನಡೆಸಿದೆ. ಇದು ದಿನಕ್ಕೆ 20 ಸಾವಿರ ಜಾಗತಿಕ ಸಂದರ್ಶನಗಳನ್ನು ನಡೆಸುತ್ತದೆ. ಸಂದರ್ಶನದಲ್ಲಿ ಪಡೆದ ಉತ್ತರಗಳ ಆಧಾರದ ಮೇಲೆ ನಾಯಕನ ರೇಟಿಂಗ್ ಸಿದ್ಧಪಡಿಸುತ್ತದೆ.

ಯಾರಿಗೆ ಯಾವ ರೇಟಿಂಗ್?: ಮೆಕ್ಸಿಕೋ ಅಧ್ಯಕ್ಷ ಲೋಪೆಜ್ ಒಬ್ರಡಾರ್ ಶೇ. 68 ರೇಟಿಂಗ್​ನೊಂದಿಗೆ 2ನೇ ಸ್ಥಾನ, ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಅಲ್ಬನೀಸ್ ಶೇ. 58 ರೇಟಿಂಗ್​ನೊಂದಿಗೆ 3ನೇ ಸ್ಥಾನ ಪಡೆದಿದ್ದಾರೆ. ಇಟಲಿ ಪ್ರಧಾನಿ ಜಾರ್ಜಿಯಾ ಶೇ. 52 ರೇಟಿಂಗ್​ನೊಂದಿಗೆ 4, ಬ್ರೆಜಿಲ್ ಅಧ್ಯಕ್ಷ ಲುಲಾ ಡ ಸಿಲ್ವಾ ಶೇ. 50 ರೇಟಿಂಗ್​ನೊಂದಿಗೆ 5, ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಶೇ. 40 ರೇಟಿಂಗ್​ನೊಂದಿಗೆ 6, ಬ್ರಿಟನ್ ಪ್ರಧಾನಿ ರಿಷಿ ಸುನಕ್ ಶೇ. 30 ರೇಟಿಂಗ್​ನೊಂದಿಗೆ 10ನೇ ಸ್ಥಾನದಲ್ಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net