

ರಾಮನಗರ: ಲಾಕ್ಡೌನ್ ಸಮಯದಲ್ಲಿ ನಾವು ಹೈಕಮಾಂಡ್ ನಿರ್ದೇಶನದಂತೆ ಬಡವರಿಗೆ ಕಿಟ್ ವಿತರಣೆ ಮಾಡುತ್ತಿದ್ದೇವೆ. ಈ ಮೂಲಕ ಅವರ ಸಹಾಯಕ್ಕೆ ನಿಂತಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಮಾಗಡಿಯ ಕುದೂರಿನಲ್ಲಿ ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರ ನೀಡಿರುವುದು ಬೋಗಸ್ ಪ್ಯಾಕೇಜ್ಗಳು. ಇನ್ನು ನರೇಂದ್ರ ಮೋದಿಯವರು ಪ್ರಧಾನಿ ಆದಾಗಿನಿಂದಲೂ ಸುಳ್ಳು ಹೇಳುತ್ತಿದ್ದಾರೆ. ಈಗಲೂ ಅದನ್ನೇ ಮಾಡ್ತಿದ್ದಾರೆ. ಆರ್ಥಿಕವಾಗಿ ಸುಧಾರಣೆ ಆಗಬೇಕಾದರೆ ಬಡವರ ಜೇಬಿನಲ್ಲಿ ಹಣ ಇರಬೇಕು ಎಂಬುದು ಅವರಿಗೆ ಅರ್ಥವಾಗುತ್ತಿಲ್ಲ ಎಂದು ಆರೋಪಿಸಿದರು.
ಈ ಸರ್ಕಾರ ಬೇಜವಾಬ್ದಾರಿಯುತ ಸರ್ಕಾರ, ಜನವಿರೋಧಿ. ಇದೀಗ ಆರ್ಥಿಕ ಚೇತರಿಕೆಗೋಸ್ಕರ ಲಾಕ್ಡೌನ್ ಸಡಿಲಿಕೆ ಮಾಡಿದ್ದಾರೆ. ಕಷ್ಟದ ಪರಿಸ್ಥಿತಿ ಇದೆ. ಇಷ್ಟಾದರೂ ಸರ್ಕಾರಗಳು ಎಚ್ಚೆತ್ತುಕೊಳ್ಳುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.(ಏಜೆನ್ಸೀಸ್)