

ನವದೆಹಲಿ: ಆಯುರ್ವೇದ ಹಾಗೂ ಯೋಗದ ಮೂಲಕ ಕರೊನಾ ಸೋಂಕನ್ನು ನಿರ್ವಹಣೆ ಮಾಡಿ ಸೋಂಕಿತರನ್ನು ಗುಣಮುಖರಾಗಿಸುವ ನಿಟ್ಟಿನಲ್ಲಿ ಕೇಂದ್ರ ಆರೋಗ್ಯ ಇಲಾಖೆ ಮಂಗಳವಾರ ಬಿಡುಗಡೆ ಮಾಡಿರುವ ವಿಶೇಷ ಶಿಷ್ಟಾಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ರೋಗನಿರೋಧಕ ಶಕ್ತಿ ವರ್ಧಿಸಿಕೊಳ್ಳುವುದು ಹಾಗೂ ಆರೋಗ್ಯ ಸ್ಥಿತಿ ಕಾಪಾಡಿಕೊಳ್ಳುವುದಕ್ಕೆ ಪ್ರಾಶಸ್ತ್ಯ ಕೊಡುವ ಮೂಲಕ ಕೋವಿಡ್-19 ವಿರುದ್ಧದ ಹೋರಾಟವನ್ನು ಸಶಕ್ತವಾಗಿಸಿರುವ ಈ ಪ್ರಯತ್ನ ಪ್ರಶಂಸನೀಯ ಎಂಬುದಾಗಿ ಮೋದಿ ಶ್ಲಾಘಿಸಿದ್ದಾರೆ.
ಕೇಂದ್ರ ಆರೋಗ್ಯ ಇಲಾಖೆ ಹಾಗೂ ಆಯುಷ್ ಸಚಿವಾಲಯ ಜಂಟಿಯಾಗಿ ರೂಪಿಸಿರುವ ದ ನ್ಯಾಷನಲ್ ಕ್ಲಿನಿಕಲ್ ಮ್ಯಾನೇಜ್ಮೆಂಟ್ ಪ್ರೊಟೊಕಾಲ್ಅನ್ನು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಕೆಲವೇ ಗಂಟೆಗಳ ಮುನ್ನವಷ್ಟೇ ಬಿಡುಗಡೆ ಮಾಡಿದ್ದರು.