ನಾರಾಯಣಪುರ ಡ್ಯಾಂನಲ್ಲಿ ತಗ್ಗಿದ ಒಳಹರಿವು

dvd dam
ನಾರಾಯಣಪುರ ಜಲಾಶಯದಿಂದ ಕೃಷ್ಣಾನದಿಗೆ ಹರಿಸುವ ನೀರಿನ ಪ್ರಮಾಣ 10 ಸಾವಿರ ಕ್ಯೂಸೆಕ್ ತಗ್ಗಿದ್ದರಿಂದ ಮುಳುಗಡೆಯಾಗಿದ್ದ ಹೂವಿನಹೆಡಗಿ ಶ್ರೀಗಡ್ಡೆಗೂಳಿ ಬಸವೇಶ್ವರ ದೇವಸ್ಥಾನ ಗೋಪುರ ಗೋಚರಿಸಿರುವುದು.
Published on

ದೇವದುರ್ಗ: ನಾರಾಯಣಪುರ ಜಲಾಶಯದಲ್ಲಿ ಒಳಹರಿವು ತಗ್ಗಿದ್ದರಿಂದ ಕೃಷ್ಣಾ ನದಿಗೆ ಹರಿಸುವ ನೀರಿನ ಪ್ರಮಾಣದಲ್ಲಿ ಹತ್ತು ಸಾವಿರ ಕ್ಯೂಸೆಕ್ ಇಳಿಕೆ ಮಾಡಲಾಗಿದೆ. ಇದರಿಂದ ಎರಡು ದಿನಗಳಿಂದ ಸಂಪೂರ್ಣ ಮುಳುಗಡೆಯಾಗಿದ್ದ ಹೂವಿನಹೆಡಗಿ ಶ್ರೀಗಡ್ಡೆಗೂಳಿ ಬಸವೇಶ್ವರ ದೇವಸ್ಥಾನದ ಗೋಪುರ ಶುಕ್ರವಾರ ಗೋಚರವಾಗಿದೆ.

ಕೃಷ್ಣಾ ಕೊಳ್ಳದ ಮೇಲ್ಭಾಗದಲ್ಲಿ ಮಳೆಯಾಗುತ್ತಿದ್ದು ಜಲಾಶಯದಲ್ಲಿ ಒಳಹರಿವು ಮುಂದುವರಿದಿದೆ. ಗುರುವಾರ ಸಂಜೆ ಒಳಹರಿವು ಪ್ರಮಾಣ 75 ಸಾವಿರ ಕ್ಯೂಸೆಕ್‌ನಿಂದ 70ಸಾವಿರ ಕ್ಯೂಸೆಕ್‌ಗೆ ಇಳಿಕೆಯಾಗಿದೆ. ಹೀಗಾಗಿ 25 ಕ್ರಸ್ಟ್ ಗೇಟ್‌ಗಳ ಮೂಲಕ ಕೃಷ್ಣಾನದಿಗೆ ಬಿಡಲಾಗಿದ್ದ ನೀರಿನ ಪ್ರಮಾಣ 70 ಸಾವಿರದಿಂದ 61,860 ಕ್ಯೂಸೆಕ್‌ಗೆ ಇಳಿಕೆ ಮಾಡಲಾಗಿದೆ. ಇದರಿಂದ ನದಿದಂಡೆಯಲ್ಲಿ ಅಲ್ಪ ಪ್ರಮಾಣದ ನೀರಿನ ಹರಿವು ತಗ್ಗಿದ್ದು ಜನರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

33 ಟಿಎಂಸಿ ಅಡಿ ಸಾಮರ್ಥ್ಯದ ಜಲಾಶಯದಲ್ಲಿ ಸದ್ಯ 25.27ಟಿಎಂಸಿ ಅಡಿ ನೀರಿನ ಸಂಗ್ರಹವಿದೆ. ಒಳಹರಿವು ನಿರಂತರವಾಗಿರುವ ಕಾರಣ ನದಿಗೆ ಹರಿಸುವ ನೀರಿನ ಪ್ರಮಾಣದಲ್ಲಿ ಯಾವುದೇ ಕ್ಷಣದಲ್ಲಿ ಹೆಚ್ಚಾಗಬಹುದು. ನದಿದಂಡೆ ಗ್ರಾಮಸ್ಥರು ಎಚ್ಚರಿಕೆಯಿಂದ ಇರಲು ಕೆಬಿಜೆಎನ್‌ಎಲ್ ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net