

ಶೃಂಗೇರಿ: ಬ್ರಹ್ಮ ಶ್ರೀ ನಾರಾಯಣ ಗುರುಗಳು ಜಾತಿ, ಧರ್ಮದ ಬೇಧವಿಲ್ಲದೇ ಪ್ರತಿಯೊಬ್ಬರಿಗೂ ದೇವರನ್ನು ಸಾಕ್ಷತ್‌ಕರಿಸಿಕೊಳ್ಳುವ ಹಕ್ಕಿದೆ ಎಂದು ತಿಳಿಸಿದರು ಎಂದು ನಿವೃತ್ತ ಶಿಕ್ಷಕ ಮಂಡಗಾರು ಜನಾರ್ಧನ್ ಹೇಳಿದರು.
ತಾಲೂಕು ಕಚೇರಿ ಸಭಾಂಗಣದಲ್ಲಿ ಗುರುವಾರ ರಾಷ್ಟ್ರೀಯ ಹಬ್ಬಗಳ ಸಮಿತಿಯಿಂದ ಏರ್ಪಡಿಸಿದ್ದ ನಾರಾಯಣ ಗುರುಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ, ಒಂದೇ ಜಾತಿ, ಒಂದೇ ದೇವರು ಎನ್ನುವ ತತ್ವದ ಮೂಲಕ ಮಾನವ ಸಂಕುಲದ ಏಳಿಗೆಗೆ ನಾರಾಯಣ ಗುರುಗಳು ಅಪೂರ್ವ ಕೊಡುಗೆ ನೀಡಿದ್ದಾರೆ. ಮಹಾನ ಸಮಾಜ ಸುಧಾರಕರಾಗಿದ್ದ ಅವರು ಯುವ ಜನಾಂಗಕ್ಕೆ ಆದರ್ಶವಾಗಿದ್ದರು ಎಂದರು.
ತಹಸೀಲ್ದಾರ್ ಗೌರಮ್ಮ ಅಧ್ಯಕ್ಷತೆ ವಹಿಸಿದ್ದರು. ಈಡಿಗ ಸಮಾಜದ ಅಧ್ಯಕ್ಷ ಅಗೊಸೊಳ್ಳಿ ನಾರಾಯಣ, ವಿದ್ಯಾರಣ್ಯಪುರ ಗ್ರಾಪಂ ಅಧ್ಯಕ್ಷ ಪ್ರವೀಣ ಪೂಜಾರಿ ಮತ್ತಿತರರು ಇದ್ದರು.