ಅದ್ಭುತ ದೃಶ್ಯಗಳಿಗೆ ಸಾಕ್ಷಿಯಾದ ಅಮರಾವತಿ: ಮೋದಿ ಆಶೀರ್ವಾದ ಪಡೆದ ಚಿರು, ಪವನ್​..ರಜನಿ ಉಪಸ್ಥಿತಿ!

modi
Published on

ಅಮರಾವತಿ: ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ ನಾರಾ ಚಂದ್ರಬಾಬು ನಾಯ್ಡು ಪ್ರಮಾಣ ವಚನ ಸ್ವೀಕರಿಸಿದ ಸಂದರ್ಭದಲ್ಲಿ ಅಭಿಮಾನಿಗಳು ಅನೇಕ ಅದ್ಭುತ ದೃಶ್ಯಗಳಿಗೆ ಸಾಕ್ಷಿಯಾದರು.

ಪ್ರಧಾನಿ ಮೋದಿ, ಅನೇಕ ಕೇಂದ್ರ ಸಚಿವರು ಮತ್ತು ಚಲನಚಿತ್ರ ನಟರಾದ ಚಿರಂಜೀವಿ, ರಜನಿಕಾಂತ್​ ಸೇರಿ ಅನೇಕ ನಟರು ಪ್ರಮಾಣ ವಚನ ಸಮಾರಂಭದಲ್ಲಿ ಭಾಗವಹಿಸಿದ್ದರು.

ಪ್ರಮಾಣ ವಚನ ಸ್ವೀಕರಿಸಿದ ನಂತರ ಪವನ್ ಕಲ್ಯಾಣ್, ಪ್ರಧಾನಿ ಮೋದಿ ಅವರನ್ನು ತನ್ನ ಅಣ್ಣ ಚಿರಂಜೀವಿ ಅವರಿದ್ದ ಕಡೆಗೆ ಕರೆದೊಯ್ದರು. ಈ ಸಂದರ್ಭದಲ್ಲಿ ಇಬ್ಬರು ಸಹೋದರರು ಮೋದಿಯವರ ಆಶೀರ್ವಾದ ಪಡೆದರು. ಈ ಭಾವನಾತ್ಮಕ ಕ್ಷಣದ ಫೋಟೋ ಮತ್ತು ವೀಡಿಯೋ ವೈರಲ್​ ಆಗುತ್ತಿದೆ.

ಅಲ್ಲದೇ ನಂದಮೂರಿ ಬಾಲಕೃಷ್ಣ ಅವರು ಇಡೀ ಸಮಾರಂಭದಲ್ಲಿ ಸುತ್ತಾಡಿ ಎಲ್ಲರಿಗೂ ನಮಸ್ಕರಿಸುತ್ತಿದ್ದುದು ಕಂಡು ಬಂದಿತು. ತನ್ನ ಅಕ್ಕ-ತಂಗಿಯರಿಗೆ ಆತ್ಮೀಯವಾಗಿ ನಮಸ್ಕರಿಸುವ ದೃಶ್ಯಗಳು ಅಭಿಮಾನಿಗಳನ್ನು ಸಂತಸದಲ್ಲಿ ತೇಲಿಸುವಂತಾಯಿತು. ಅಣ್ಣ-ತಂಗಿಯರ ಬಾಂಧವ್ಯ ನೋಡಿ ನೆರೆದವರು ಮೂಕವಿಸ್ಮೀತರಾದರು.

ಅಲ್ಲದೇ ಈ ಸಮಾರಂಭಕ್ಕೆ ಪವನ್ ಕಲ್ಯಾಣ್ ಅವರ ಪತ್ನಿ, ಪುತ್ರ, ಪುತ್ರಿ ಬಂದಿದ್ದರು, ಇದು ಅಭಿಮಾನಿಗಳ ಕಣ್ಣಿಗೆ ಹಬ್ಬವಾಯಿತು.

ಸಮಾರಂಭದಲ್ಲಿ ಮತ್ತೊಬ್ಬ ಟಾಪ್ ನಟ ರಾಮ್ ಚರಣ್ ಕೂಡ ಪಾಲ್ಗೊಂಡಿದ್ದರು. ವಿಜಯವಾಡ ಬಳಿಯ ರಾಜಮಂಡ್ರಿಯಲ್ಲಿ ಚಿತ್ರೀಕರಣ ನಡೆಯುತ್ತಿರುವ ‘ಗೇಮ್ ಚೇಂಜರ್’ ಸಿನಿಮಾದಿಂದ ಸ್ವಲ್ಪ ಬಿಡುವು ಮಾಡಿಕೊಂಡು ಸಮಾರಂಭ ನಡೆಯುತ್ತಿದ್ದ ಗನ್ನವರಂ ತಲುಪಿದ್ದರು.

ಇನ್ನು ರಾಮ್ ಚರಣ್ ಪಕ್ಕದಲ್ಲಿ ಸಿಎಂ ಪುತ್ರಿ ನಾರಾ ಬ್ರಾಹ್ಮಣಿ ಕುಳಿತಿದ್ದು, ಅವರಿಬ್ಬರು ಮಾತನಾಡುತ್ತಿದ್ದ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

ಪವನ್ ಕಲ್ಯಾಣ್ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಂದರ್ಭದಲ್ಲಿ ಮೋದಿಯವರು ಚಿರಂಜೀವಿ ಮತ್ತು ಪವನ್ ಕೈ ಎತ್ತಿ ಜನರಿಗೆ ಶುಭಾಶಯ ಕೋರಿದಾಗ ರಾಮ್ ಚರಣ್ ಭಾವುಕರಾದರು.

ವೇದಿಕೆಯಲ್ಲಿ ತಲೈವಾ ರಜನಿಕಾಂತ್​ ಹಾಜರಿದ್ದು, ಪ್ರಧಾನಿ ಮೋದಿ ಅವರ ಬಳಿ ಬಂದು ನಮಸ್ಕರಿಸಿದಾಗ ಪ್ರತಿಯಾಗಿ ರಜನಿ ಶಿರಭಾಗಿ ನಮಸ್ಕರಿಸಿದರು. ಇದು ಅಭಿಮಾನಿಗಳು ಹುಚ್ಚೆದ್ದು ಕುಣಿಯುವಂತೆ ಮಾಡಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net