ಅನುಭವದಿಂದ ಅನುಭಾವಿ ಆಗಲು ಸಾಧ್ಯ : ನಂದಿವೇರಿ ಶ್ರೀ

19GDG05
ನಗರದ ಅಡವೀಂದ್ರ ಸ್ವಾಮೀ ಮಠದಲ್ಲಿ ಜರುಗಿದ ದಸಾರಾ ಕಾರ್ಯಕ್ರಮದಲ್ಲಿ ವಂದಿವೇರಿ ಶ್ರೀಗಳು ಮಾತನಾಡಿದರು. ಮಹೇಶ್ವರ ಸ್ವಾಮಿಗಳು ಹೊಸಳ್ಳಿಮಠ, ಎಂ. ಎಸ್​. ಸಾಲಿಮಠ, ವನಮಾಲಾ ಸಾಲಿಮಠ, ಎಂ. ಬಿ.ಹಿರೇಮಠ, ಲಲಿತಾ ಹಿರೇಮಠ, ಎಸ್​. ಎಸ್​. ಬೆಂತೂರ ಇತರರು ಇದ್ದರು.
Published on

ವಿಜಯವಾಣಿ ಸುದ್ದಿಜಾಲ ಗದಗ
ಅರಿವಿನ ಮೂಲಕ ಅನುಭಾವ, ಅನುಭವದಿಂದ ಅನುಭಾವಿ ಆಗಲು ಸಾಧ್ಯ. ಅನುಭವ, ಅನುಭಾವ ಇಲ್ಲದಿದ್ದರೆ ಡಿಗ್ರಿ, ಪದವಿ ಇದ್ದರೇನು ಎಂದು ಕಪ್ಪತ್ತಗುಡ್ಡ ನಂದಿವೇರಿ ಮಠದ ಶಿವಕುಮಾರ ಶ್ರೀಗಳು ಹೇಳಿದರು
ನಗರದ ಅಡವೀಂದ್ರ ಸ್ವಾಮಿ ಮಠದಲ್ಲಿ ಇತ್ತಿಚೆಗೆ ಜರುಗಿದ ದಸರಾ ಜಾತ್ರಾ ಮಹೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಪರಿಸರ, ಕೃಷಿಯನ್ನು ಅಲಸದೇ ನಾವಿಂದು ರಣೆಗೆ, ಸಂವರ್ಧನೆಗೆ ಮುಂದಾಗುವದು ಅವಶ್ಯವಿದೆ. ಕೃಷಿ ಶ್ರೇಷ್ಠ, ವ್ಯಾಪಾರ ಮಧ್ಯಮ, ನೌಕರಿ ಕನಿಷ್ಠ ಎಂಬ ಮಾತಿದೆ. ಪ್ರತಿಯೊಂದು ಮನೆಯಲ್ಲಿ ಒಕ್ಕಲುತನ ಆರಂಭಗೊಳ್ಳಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಅನ್ನಕ್ಕಾಗಿ ಪರದಾಡುವ ಸ್ಥಿತಿ ಬಂದೊದಗುತ್ತದೆ ಎಂದರು.
ಪರಿಸರ ಮತ್ತು ಕೃಷಿ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಲು ಡಿ. 6 ರಂದು ಕಪ್ಪತ್ತಗುಡ್ಡ ಉತ್ಸವ ನಡೆಸಲು ನಿರ್ಧರಿಸಲಾಗಿದೆ. ಸಾರ್ವಜನಿಕರು ಕೈಜೋಡಿಸಬೇಕೆಂದು ಹೇಳಿದರು.
ಉಚಿತ ಅಕ್ಕಿ ಪರಿಣಾಮದಿಂದಾಗಿ ಮನೆಯಲ್ಲಿ ರೊಟ್ಟಿ ಸಪ್ಪಳವೇ ನಿಂತು ಹೋಗಿದೆ. ರೊಟ್ಟಿ ಇಲ್ಲದೆ ಆರೋಗ್ಯದಲ್ಲಿ ಗಟ್ಟಿತನ ಇಲ್ಲದಾಗಿದೆ. ಗಟ್ಟಿತನ ಇಲ್ಲದೇ ಜಟ್ಟಿಗಳಿಲ್ಲದಾಗಿದೆ. ಈ ರೊಟ್ಟಿ&ಗಟ್ಟಿ& ಜಟ್ಟಿತನವನ್ನು ನಾವಿಂದು ಮರು ಸ್ಥಾಪಿಸಬೇಕಿದೆ ಎಂದರು.
ಮಹೇಶ್ವರ ಸ್ವಾಮಿಗಳು ಹೊಸಳ್ಳಿಮಠ ಸಮ್ಮುಖ ವಹಿಸಿದ್ದರು.
ಎಂ. ಎಸ್​. ಸಾಲಿಮಠ, ವನಮಾಲಾ ಸಾಲಿಮಠ, ಎಂ. ಬಿ.ಹಿರೇಮಠ, ಲಲಿತಾ ಹಿರೇಮಠ, ಎಸ್​. ಎಸ್​. ಬೆಂತೂರ, ನಾಗರತ್ನಾ ಬೆಂತೂರ, ಶಶಿಧರ ಹಿರೇವಡೆಯರ, ಸಂಜೀವ ಬೇಲೂರ, ಬಸವರಡ್ಡಿ ಬೆಳ್ಳಿಕೊಪ್ಪ, ಪಿ. ಆರ್​. ಚೌಡಣ್ಣವರ, ರವಿ ಪೂಜಾರ, ಪ್ರಕಾಶ ಬಂಡಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net