ನಂದಿನಿ ತುಪ್ಪ ದುಬಾರಿ: ಲೀಟರ್ ತುಪ್ಪಕ್ಕೆ 700 ರೂ

kmf milk
Published on

ಬೆಂಗಳೂರು:

ಕೆಎಂಎ್ ಸದ್ದುಗದ್ದಲವಿಲ್ಲದೆ, ನಂದಿನಿ ತುಪ್ಪದ ಬೆಲೆಯನ್ನು ಪ್ರತಿ ಲೀಟರ್‌ಗೆ 90 ರೂ ಹೆಚ್ಚಳ ಮಾಡಿದೆ. ಒಂದು ಲೀಟರ್‌ಗೆ 610 ರೂ ಇದ್ದ ಬೆಲೆ, 90 ರೂ ಏರಿಕೆ ಬಳಿಕ 700 ರೂ ಆಗಲಿದೆ.

ಶೇ.18ರಷ್ಟು ಜಿಎಸ್‌ಟಿ ಇದ್ದ ಸಂದರ್ಭದಲ್ಲಿ ನಂದಿನಿ ತುಪ್ಪ ಲೀಟರ್‌ಗೆ 650 ರೂ ಇತ್ತು. ಜಿಎಸ್‌ಟಿ ದರವನ್ನು ಕೇಂದ್ರ ಸರ್ಕಾರ ಶೇ.4ಕ್ಕೆ ತಗ್ಗಿಸಿದ ಪರಿಣಾಮ ಲೀಟರ್ ತುಪ್ಪದ ಬೆಲೆ 610ರೂಗೆ ಇಳಿಕೆ ಆಗಿತ್ತು. ಈಗ ಮತ್ತೆ ತುಪ್ಪದ ಬೆಲೆ ಏರಿಕೆಯಾದಂತಾಗಿದೆ.

ಪ್ರತಿ ತಿಂಗಳು 3 ಸಾವಿರ ಟನ್ ತುಪ್ಪ ಉತ್ಪತ್ತಿ ಮಾಡುವ ಸಾಮರ್ಥ್ಯವಿರುವ ಕೆಎಂಎ್, ಸದ್ಯ 2500 ಟನ್ ತುಪ್ಪ ಉತ್ಪತ್ತಿ ಮಾಡುತ್ತಿದೆ.

ರೈತರಿಗೆ ಪ್ರತಿ ಲೀಟರ್‌ಗೆ 4 ರೂ ಪ್ರೋತ್ಸಾಹಧನವನ್ನು ನೀಡಲಾಗುತ್ತಿದೆ. ಹೆಚ್ಚುವರಿ ಮಾಡಿದ ಹಣವನ್ನು ಸಹ ಈ ಪ್ರೋತ್ಸಾಹಧನಕ್ಕೆ ವರ್ಗಾಯಿಸಲಾಗುವುದು ಎಂದು ಕೆಎಂಎ್ ತಿಳಿಸಿದೆ.

ಕಳೆದ ವರ್ಷ ಜೂನ್ ತಿಂಗಳಲ್ಲಿ ಒಂದು ದಿನ ಮಾತ್ರವೇ ಕೆಎಂಎ್ಗೆ 1 ಕೋಟಿ ಲೀಟರ್ ಹಾಲು ಬಂದಿತ್ತು. ಆದರೆ, ಈ ವರ್ಷ ಮೇ 23ರಿಂದಲೂ ನಿತ್ಯವೂ ಒಂದು ಕೋಟಿ ಲೀಟರ್ ಹಾಲು ಬರುತ್ತಿದೆ. ಹಾಲು ಸಂಗ್ರಹ ಹೆಚ್ಚಳವಾದ ಹಿನ್ನೆಲೆಯಲ್ಲಿ ಅದನ್ನು ನಿಭಾಯಿಸಲು ಹಲವು ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಕೆಎಂಎ್ ಎಂಡಿ ಶಿವಸ್ವಾಮಿ ಅವರು ವಿಜಯವಾಣಿಗೆ ವಿವರಣೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net