ಅಮುಲ್‌ಗೆ ಸಮನಾಗಿ ನಂದಿನಿ ಅಭಿವೃದ್ಧಿ

ಹೊಸನಗರ ತಾಲೂಕಿನ ನಗರ ಚಿಕ್ಕಪೇಟೆ ನಂದಿನಿ ಮಳಿಗೆಯಲ್ಲಿ ಕೆಎಂಎಫ್ ನೂತನ ನಿರ್ದೇಶಕ ಆರ್.ಎಂ.ಮಂಜುನಾಥ ಗೌಡ ಅವರನ್ನು ಸನ್ಮಾನಿಸಲಾಯಿತು. ವಿದ್ಯಾಧರ, ಕರುಣಾಕರ ಶೆಟ್ಟಿ, ಚಂದ್ರಶೇಖರ ಶೆಟ್ಟಿ, ಅಂಬರೀಷ ಇತರರಿದ್ದರು.
ಹೊಸನಗರ ತಾಲೂಕಿನ ನಗರ ಚಿಕ್ಕಪೇಟೆ ನಂದಿನಿ ಮಳಿಗೆಯಲ್ಲಿ ಕೆಎಂಎಫ್ ನೂತನ ನಿರ್ದೇಶಕ ಆರ್.ಎಂ.ಮಂಜುನಾಥ ಗೌಡ ಅವರನ್ನು ಸನ್ಮಾನಿಸಲಾಯಿತು. ವಿದ್ಯಾಧರ, ಕರುಣಾಕರ ಶೆಟ್ಟಿ, ಚಂದ್ರಶೇಖರ ಶೆಟ್ಟಿ, ಅಂಬರೀಷ ಇತರರಿದ್ದರು.
Published on
ಹೊಸನಗರ: ನಂದಿನಿ ಹಾಲು ಮತ್ತು ಅದರ ಉತ್ಪನ್ನಗಳಿಗೆ ದೇಶಾದ್ಯಂತ ಬೇಡಿಕೆ ಇದೆ. ಅಮುಲ್‌ಗೆ ಸರಿಸಾಟಿಯಾಗಿ ನಂದಿನಿಯನ್ನು ಕೊಂಡೊಯ್ಯುವ ಗುರಿಯಿದೆ ಎಂದು ಕೆಎಂಎಫ್ ನಿರ್ದೇಶಕ ಆರ್.ಎಂ.ಮಂಜುನಾಥ ಗೌಡ ಹೇಳಿದರು.
ತಾಲೂಕಿನ ಚಿಕ್ಕಪೇಟೆ ನಂದಿನಿ ಮಳಿಗೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ನೀರು ಸೇರಿ 165ಕ್ಕೂ ಹೆಚ್ಚು ಗುಣಮಟ್ಟದ ನಂದಿನಿ ಉತ್ಪನ್ನಗಳು ಮಾರುಕಟ್ಟೆಯಲ್ಲಿವೆ. ಇನ್ನಷ್ಟು ಉತ್ಪನ್ನಗಳನ್ನು ಹೆಚ್ಚಿಸಬೇಕಿದೆ ಎಂದರು.
ಹೈನುಗಾರಿಕೆ ಬೆಳವಣಿಗೆ ಕೆಎಂಎಫ್‌ಗೆ ಅಗತ್ಯವಾಗಿದೆ. ರೈತರಿಗೆ ಎರಡು ಹಸುಗಳ ಖರೀದಿಗೆ 1.6 ಲಕ್ಷ ರೂ. ಸಾಲ ನೀಡಿ ಹೈನುಗಾರಿಕೆಗೆ ಉತ್ತೇಜನ ನೀಡುವ ಚಿಂತನೆಯಿದೆ. ಇನ್ನು ಸಾವಯವ ಗೊಬ್ಬರದಲ್ಲಿ ಯೂರಿಯಾ ಮಿಶ್ರಣ ಮಾಡಿ ರೈತರನ್ನು ಕಂಪನಿಗಳು ಮೋಸ ಮಾಡುತ್ತಿವೆ. ಹೀಗಾಗಿ ಜಾನುವಾರುಗಳು ರೋಗರುಜಿನಕ್ಕೆ ತುತ್ತಾಗುತ್ತಿವೆ. ಅಡಕೆ ತೋಟಗಳು ಎಲೆಚುಕ್ಕೆ ರೋಗ, ಕೊಳೆರೋಗಕ್ಕೆ ತತ್ತರಿಸಿವೆ ಎಂದರು.
ಶಿವಮೊಗ್ಗ ಹಾಲು ಒಕ್ಕೂಟ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. 8 ಲಕ್ಷ ಲೀಟರ್ ಹಾಲು ಉತ್ಪಾದನೆ ಆಗುತ್ತಿದೆ. 120ಕ್ಕೂ ಹೆಚ್ಚು ಹೊಸ ನಂದಿನಿ ಪಾರ್ಲರ್‌ಗಳನ್ನು ನೀಡಲಾಗಿದೆ ಎಂದು ತಿಳಿಸಿದರು.
ಶಿಮುಲ್ ಅಧ್ಯಕ್ಷ ವಿದ್ಯಾಧರ ಗುರುಶಕ್ತಿ ಮಾತನಾಡಿ, ಮಂಜುನಾಥ ಗೌಡ ಅವರು ಸಹಕಾರ ಕ್ಷೇತ್ರವನ್ನು ಬೆಳೆಸಿದ ರೀತಿ ಒಂದು ಸಾಹಸ. ಅವರ ಸೇವೆ ಕೆಎಂಎಫ್‌ಗೂ ಬೇಕಿದೆ. ಅವರು ನಿರ್ದೇಶಕರಾಗಿರುವುದು ಶಿಮುಲ್‌ಗೆ ಆನೆಬಲ ಬಂದಿದೆ. ಶಿಮುಲ್ ಅಭಿವೃದ್ಧಿಗೂ ಸಹಾಯವಾಗಲಿದೆ. ಅವರು ಕೆಎಂಎಫ್ ಅಧ್ಯಕ್ಷರಾಗಬೇಕು ಎಂಬ ಕಾರಣದಿಂದ ನಿರ್ದೇಶಕರನ್ನಾಗಿ ಆಯ್ಕೆ ಮಾಡಿದ್ದೇವೆ ಎಂದರು.
ನಗರ ಕಾಂಗ್ರೆಸ್ ಅಧ್ಯಕ್ಷ ಕರುಣಾಕರ ಶೆಟ್ಟಿ, ಚಂದ್ರಶೇಖರ ಶೆಟ್ಟಿ, ನಗರ ಸೊಸೈಟಿ ಅಧ್ಯಕ್ಷ ಅಂಬರೀಷ, ಉಪಾಧ್ಯಕ್ಷ ಗೋಪಾಲ ಶೆಟ್ಟಿ, ಗ್ರಾಪಂ ಸದಸ್ಯ ಪವನ್, ಬಿದನೂರು ಫ್ರೆಂಡ್ಸ್ ಅಧ್ಯಕ್ಷ ಎ.ಚಂದ್ರ, ಸುಭಾಷ್, ಪಾಂಡು ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net