

ಹೈದರಾಬಾದ್: ನಂದಮೂರಿ ಕುಟುಂಬದ ಮತ್ತೊಂದು ಕುಡಿ ಟಾಲಿವುಡ್ ಅಂಗಳಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಬಾಲಯ್ಯ ಅವರ ಉತ್ತರಾಧಿಕಾರಿ ನಂದಮೂರಿ ಮೋಕ್ಷಜ್ಞ ತೇಜ ನಾಯಕನಾಗಿ ನಟನೆಗೆ ಪದಾರ್ಪಣೆ ಮಾಡಲಿದ್ದಾರೆ ಎಂಬ ಮಾತುಗಳು ಕಳೆದ ಏಳೆಂಟು ವರ್ಷಗಳಿಂದ ಕೇಳಿ ಬರುತ್ತಿತ್ತು. ಆದರೆ ಯಾರ ಜತೆಗೆ ಯಾವಾಗ ಸಿನಿಮಾ ಮಾಡುತ್ತಾರೆ ಎಂಬುದು ಕನ್ಫರ್ಮ್ ಆಗಿರಲಿಲ್ಲ. ಆದ್ರೆ ಇಂದು (ಶುಕ್ರವಾರ) ಮೋಕ್ಷಜ್ಞ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಅವರ ಫಸ್ಟ್ಲುಕ್ ರಿವೀಲ್ ಆಗಿದೆ. ಇದರಿಂದ ನಂದಮೂರಿ ಅಭಿಮಾನಿಗಳು ಖುಷಿಯಾಗಿದ್ದಾರೆ.
ಮೋಕ್ಷಜ್ಞ ಅವರ ಈ ಹೊಸ ಲುಕ್ ಇದುವರೆಗೂ ಇದ್ದ ಎಲ್ಲಾ ಅನುಮಾನಗಳನ್ನು ಕ್ಲಿಯರ್ ಮಾಡಿದೆ. ಮೋಕ್ಷಜ್ಞನ ಸ್ಲಿಮ್ ಮತ್ತು ಸ್ಮಾರ್ಟ್ ಲುಕ್ ಎಲ್ಲರನ್ನು ಆಶ್ಚರ್ಯಗೊಳಿಸಿದೆ. ತೂಕ ಇಳಿಸಿಕೊಂಡು ಸಿನಿಮಾಗಳಿಗೆ ಬೇಕಾದ ಮೈಕಟ್ಟು ಸಾಧಿಸಿದ್ದಾರೆ. ಈ ಪೋಸ್ಟರ್ನಲ್ಲಿ ಮೋಕ್ಷಜ್ಞ ತೇಜ ಸ್ಟೈಲಿಶ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಮೋಕ್ಷಜ್ಞನ ಈ ಲುಕ್ ವೈರಲ್ ಆಗುತ್ತಿದೆ.
ಈ ಹಿಂದೆ ಮಗನ ಮೊದಲ ಸಿನಿಮಾವನ್ನು ನಿರ್ದೇಶನ ಮಾಡುವುದಾಗಿ ಹೇಳಿದ್ದ ಬಾಲಕೃಷ್ಣ ಈಗ ಹನುಮಾನ್ ಚಿತ್ರದ ಮೂಲಕ ಸೂಪರ್ ಹಿಟ್ ಗಳಿಸಿದ್ದ ಯುವ ನಿರ್ದೇಶಕ ಪ್ರಶಾಂತ್ ವರ್ಮಾ ಅವರ ಹೆಗಲಿಗೆ ಈ ಜವಾವ್ದಾರಿಯನ್ನು ಹೊರಿಸಿದ್ದಾರೆ. ಪ್ರಶಾಂತ್ ವರ್ಮಾ ಸಿನಿಮಾಟಿಕ್ ಯೂನಿವರ್ಸ್ ಬ್ಯಾನರ್ ಅಡಿಯಲ್ಲಿ ಈ ಚಿತ್ರ ನಿರ್ಮಾಣವಾಗಲಿದೆ. ಈ ಹಿಂದೆ ಪ್ರಶಾಂತ್ ವರ್ಮಾ ಸಿಂಹದ ಮರಿ ಬರಲಿದೆ ಎಂಬ ಅರ್ಥದಲ್ಲಿ ಸಿಂಬಾ ಬರಲಿದ್ದಾರೆ ಎಂದು ಸುಳಿವು ನೀಡಿದ್ದರು.
ಚೊಚ್ಚಲ ಚಿತ್ರಕ್ಕಾಗಿ ಮೋಕ್ಷಜ್ಞ ತೇಜ್ ಅಭಿನಯದ ಜತೆಗೆ ಡ್ಯಾನ್ಸ್ ಮತ್ತು ಆ್ಯಕ್ಷನ್ ದೃಶ್ಯಗಳಿಗಾಗಿ ವಿಶೇಷ ತರಬೇತಿ ಪಡೆದಿದ್ದಾರೆ ಎನ್ನಲಾಗಿದೆ. ಪೌರಣಿಕ ಕಥೆಯ ಆಧುನಿಕ ಸ್ವರೂಪದ ಸಿನಿಮಾ ಎಂಬ ಮಾತು ಟಾಲಿವುಡ್ ಅಂಗಳದಲ್ಲಿ ಕೇಳಿಬರುತ್ತಿದೆ. ಅಕ್ಟೋಬರ್ ನಲ್ಲಿ ಈ ಸಿನಿಮಾ ಅಧಿಕೃತವಾಗಿ ಲಾಂಚ್ ಆಗಲಿದೆ ಎಂದು ಮೂಲಗಳು ತಿಳಿಸಿವೆ. ಈ ಚಿತ್ರದಲ್ಲಿ ಶ್ರೀಲೀಲಾ ನಾಯಕಿಯಾಗಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.
ಅಲ್ಲದೆ ಮಗನ ಮೊದಲ ಸಿನಿಮಾದಲ್ಲಿ ನಂದಮೂರಿ ಬಾಲಕೃಷ್ಣ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಅದೇನೆ ಇರಲಿ ಬರಹ ದಿನದ ಊಹಾಪೋಹಾಗಳಿಗೆ ಫುಲ್ಸ್ಟಾಪ್ ಇಟ್ಟು ಬಾಲಯ್ಯ ಮಗನ ಸಿನಿಮಾ ಸೆಟ್ಟೇರಲಿದೆ ಎನ್ನುವ ಸುದ್ದಿ ಅಭಿಮಾನಿಗಳಿಗೆ ಖುಷಿನೀಡಿದೆ ಜತಗೆ ನಿರೀಕ್ಷೆಗಳನ್ನು ಹೆಚ್ಚಿಸಿದೆ. ಮನೋಜ್ಞ ಎಷ್ಟರ ಮಟ್ಟಿಗೆ ಕಮಾಲ್ ಮಾಡಲಿದ್ದಾರೆ ಎಂಬುದನ್ನು ಕಾದುನೋಡಬೇಕಿದೆ. (ಏಜೆನ್ಸೀಸ್)