ಹಳದಿ ಮಾರ್ಗದಲ್ಲಿ ಮೆಟ್ರೋ ರೈಲು ಓಡಾಟ; ಮೊದಲ ಹಂತದ ಪರೀಕ್ಷಾರ್ಥ ಸಂಚಾರ ಬಹುತೇಕ ಪೂರ್ಣ

Metro
Published on

ಬೆಂಗಳೂರು: ನಮ್ಮ ಮೆಟ್ರೋ ಬಹುನಿರೀತ ಹಳದಿ ಮಾರ್ಗದಲ್ಲಿ ಮೆಟ್ರೋ ರೈಲಿನ ಪರೀಕ್ಷಾರ್ಥ ಸಂಚಾರ ಮಾ.7ರಿಂದ ಆರಂಭವಾಗಿದ್ದು, ಏಪ್ರಿಲ್​ ಅಂತ್ಯಕ್ಕೆ ಮೊದಲ ಹಂತ ಬಹುತೇಕ ಪೂರ್ಣಗೊಳ್ಳುವ ಸಾಧ್ಯತೆಯಿದೆ ಎನ್ನಲಾಗಿದೆ.

ಕಳೆದ ಒಂದೂವರೆ ತಿಂಗಳಿನಿಂದ ಬೊಮ್ಮಸಂದ್ರ&ಬೊಮ್ಮನಹಳ್ಳಿ ನಿಲ್ದಾಣಗಳ ನಡುವೆ ರೈಲು ಪರೀಕ್ಷಾರ್ಥವಾಗಿ ಓಡಾಡುತ್ತಿದೆ. ನುರಿತ ಅಧಿಕಾರಿಗಳ ತಂಡ ವಿವಿಧ ಆಯಾಮಗಳಲ್ಲಿ ಪರಿಶೀಲನೆ ನಡೆಸುತ್ತಿದ್ದು, ಲೋಪದೋಷಗಳನ್ನು ಪಟ್ಟಿ ಮಾಡುತ್ತಿದ್ದಾರೆ ಎಂದು ಬಿಎಂಆರ್​ಸಿಎಲ್​ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಚೀನಾದ ಶಾಂಘೈ ಬಂದರಿನಿಂದ ಜ. 24ರಂದು ಕಳುಹಿಸಲಾಗಿದ್ದ 6 ಬೋಗಿಯುಳ್ಳ ಮೊದಲ ರೈಲು, ಫೆ. 6ರಂದು ಚೆನ್ನೆ$ ತಲುಪಿತ್ತು. ಬಳಿಕ ಬೋಗಿಗಳನ್ನು ರಸ್ತೆ ಮಾರ್ಗವಾಗಿ ಎಲೆಕ್ಟ್ರಾನಿಕ್​ ಸಿಟಿ ಸಮೀಪವಿರುವ ಹೆಬ್ಬಗೋಡಿ ಡಿಪೋಗೆ ಸಾಗಿಸಲಾಗಿತ್ತು. ಈ ರೈಲು 18.82 ಕಿ.ಮೀ. ಉದ್ದದ ಹಳದಿ ಮಾರ್ಗದಲ್ಲಿ ವಿವಿಧ ವೇಗದಲ್ಲಿ ಸಂಚರಿಸುತ್ತಿದೆ. ಮುಂದಿನ ದಿನಗಳಲ್ಲಿ ರೈಲಿನ ವೇಗ, ಒಂದು ನಿಲ್ದಾಣದಿಂದ ಇನ್ನೊಂದು ನಿಲ್ದಾಣಕ್ಕೆ ತಲುಪುವ ಸಮಯ, ವಿದ್ಯುತ್​ ಪ್ರವಹಿಸುವಿಕೆ, ಪ್ರಯಾಣಿಕರು ಭರ್ತಿಯಾಗಿದ್ದಾಗ ಹೇಗೆ ಸಂಚರಿಸುತ್ತದೆ ಮುಂತಾದವುಗಳ ಬಗ್ಗೆ ಪರಿಶೀಲನೆ ನಡೆಸಲಾಗುತ್ತದೆ.

ಜುಲೈ ಅಂತ್ಯದೊಳಗೆ ಪಶ್ಚಿಮ ಬಂಗಾಳದ ತಿತಾರ್​ ಕಂಪನಿಯಿಂದ ಎರಡು ರೈಲುಗಳು ಬರಲಿವೆ. ಬಳಿಕ ಪರೀಕ್ಷಾರ್ಥ ಸಂಚಾರ ಇನ್ನಷ್ಟು ವೇಗ ಪಡೆದುಕೊಳ್ಳುವ ಸಾಧ್ಯತೆಯಿದೆ. ಅಗತ್ಯ ಪರೀಕ್ಷೆ ಪೂರ್ಣಗೊಂಡ ಬಳಿಕ ಮೆಟ್ರೋ ರೈಲು ತಜ್ಞರ ಶಿಾರಸುಗಳನ್ನು ಆಧರಿಸಿ, ವಾಣಿಜ್ಯ ಸೇವೆ ಆರಂಭಿಸಲು ರೈಲ್ವೆ ಮಂಡಳಿಯ ಅನುಮೋದನೆ ಪಡೆಯಲಾಗುತ್ತದೆ ಎಂದು ಬಿಎಂಆರ್​ಸಿಎಲ್​ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

4 ತಿಂಗಳಲ್ಲಿ 37 ಮಾದರಿಯ ಪರೀಕ್ಷೆ

ಜೂನ್​ ಅಂತ್ಯದವರೆಗೆ ಹಳದಿ ಮಾರ್ಗದಲ್ಲಿ 37 ಮಾದರಿಯ ವಿವಿಧ ಪರೀೆಗಳು ನಡೆಯಲಿವೆ. ನಂತರ 45 ದಿನಗಳವರೆಗೆ ಸಿಗ್ನಲಿಂಗ್​, ದೂರಸಂಪರ್ಕ ವ್ಯವಸ್ಥೆ, ವಿದ್ಯುತ್​ ಸರಬರಾಜು ವ್ಯವಸ್ಥೆ ಸೇರಿ ಸಿಸ್ಟಮ್​ ಪರೀಕ್ಷೆಗಳು ನಡೆಯಲಿವೆ. ಬಳಿಕ ಸುರಕ್ಷತಾ ಪರೀಕ್ಷೆಗಳು, ರಿಸರ್ಚ್​ ಡಿಸೈನ್ಸ್​ ಮತ್ತು ಸ್ಟಾ$ಂಡರ್ಡ್​ ಆರ್ಗನೈಸೇಶನ್​ ಮೂಲಕ ಆಸಿಲೇಷನಲ್​ ಟ್ರಯಲ್ಸ್​, ಕಮಿಷನರ್​ ಆ್​ ಮೆಟ್ರೋ ರೈಲ್​ ಸೇಫ್ಟಿ (ಸಿಎಮ್​ಆರ್​ಎಸ್​) ಅವರಿಂದ ತಪಾಸಣೆ ನಡೆಯಲಿದೆ.

ವರ್ಷಾಂತ್ಯಕ್ಕೆ ವಾಣಿಜ್ಯ ಸೇವೆ?:

ವರ್ಷಾಂತ್ಯದಿಂದ ಹಳದಿ ಮಾರ್ಗದಲ್ಲಿ ಮೆಟ್ರೋ ವಾಣಿಜ್ಯ ಸೇವೆ ಆರಂಭಿಸಲಿದೆ ಎಂದು ಬಿಎಂಆರ್​ಸಿಎಲ್​ ಈಗಾಗಲೇ ತಿಳಿಸಿದೆ. ಸದ್ಯ ಈ ಮಾರ್ಗದಲ್ಲಿ ವಿವಿಧ ಪರೀಕ್ಷೆಗಳು ನಡೆಯುತ್ತಿದ್ದು, ಸೆಪ್ಟೆಂಬರ್​ ನಂತರವಷ್ಟೇ ಮೆಟ್ರೋ ರೈಲು ಸುರಕ್ಷತಾ ಆಯುಕ್ತರಿಂದ (ಸಿಎಂಆರ್​ಎಸ್​) ಅನುಮೋದನೆ ಸಿಗಬೇಕಿದೆ. ಈ ಎಲ್ಲ ಪ್ರಕ್ರಿಯೆಗಳಿಗೆ ಸಾಕಷ್ಟು ಸಮಯ ಬೇಕಿದೆ. ಜತೆಗೆ ಚುನಾವಣೆಯೂ ನಡೆಯುತ್ತಿದೆ. ಹೀಗಾಗಿ ವರ್ಷಾಂತ್ಯಕ್ಕೆ ಹಳದಿ ಮಾರ್ಗ ವಾಣಿಜ್ಯ ಸೇವೆಗೆ ತೆರೆದುಕೊಳ್ಳುವುದು ಅನುಮಾನ ಎಂದು ಮೆಟ್ರೋ ರೈಲು ಪರಿಣಿತರು ವಿಶ್ಲೇಷಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net