ಹಳ್ಳಿಗೆ ನುಗ್ಗಿತು ನಮೀಬಿಯಾದಿಂದ ಬಂದ ಚಿರತೆ!

oban cheetah
Published on

ಮಧ್ಯಪ್ರದೇಶ: ಭಾರತದಲ್ಲಿ ಸಂಪೂರ್ಣವಾಗಿ ಅಳಿದು ಹೋಗಿದ್ದ ಚಿರತೆ ಗಳನ್ನು ಪುನರುಜ್ಜೀವಿಸಲು ಪ್ರಧಾನಿ ಮೋದಿ ತಮ್ಮ ಹುಟ್ಟು ಹಬ್ಬದಂದು ನಮೀಬಿಯಾದಿಂದ ಬಂದ ಚಿರತೆಗಳನ್ನು ಭಾರತದ ಕಾಡಿನಲ್ಲಿ ಬಿಡುಗಡೆಗೊಳಿಸಿದ್ದು ಎಲ್ಲರಿಗೂ ಗೊತ್ತೇ ಇದೆ. ಇದೀಗ ನಮೀಬಿಯಾದಿಂದ ಬಂದಿದ್ದ ಚಿರತೆಗಳಲ್ಲಿ ಒಂದು ಈಗ ಹಳ್ಳಿಗೆ ನುಗ್ಗಿದೆ.

ನಮೀಬಿಯಾದಿಂದ ತರಲಾದ ಚಿರತೆಗಳಲ್ಲಿ ಒಂದಾದ ಚೀತಾ ಓಬಾನ್, ಕುನೋ ರಾಷ್ಟ್ರೀಯ ಉದ್ಯಾನವನದಿಂದ 20 ಕಿಮೀ ದೂರದಲ್ಲಿರುವ ವಿಜಯಪುರದ ಝರ್ ಬರೋಡಾ ಗ್ರಾಮವನ್ನು ಪ್ರವೇಶಿಸಿದೆ. ಇದೀಗ ಈ ಗ್ರಾಮಕ್ಕೆ ಚಿರತೆಯ ನಿಗಾ ತಂಡವೂ ಆಗಮಿಸಿದೆ. ಚಿರತೆಯನ್ನು ವಾಪಸ್ ಕರೆತರುವ ಪ್ರಯತ್ನ ನಡೆಯುತ್ತಿದೆ ಎಂದು ಡಿಎಫ್‌ಒ ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ಜನರು ನಾನಾ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಒಬ್ಬರಂತೂ ಅದರ ಪಾಸ್​ಪೋರ್ಟ್​ ರದ್ದು ಮಾಡಬೇಕು ಎಂದು ಬರೆದಿದ್ದಾರೆ. ಮತ್ತೋರ್ವ ಬಳಕೆದಾರರು ಮೋದಿಜಿಯವರ ಚಿರತೆಗಳು ಅಲ್ಲಿ ಇಲ್ಲಿ ಓಡಾಡುತ್ತಿವೆ ಎಂದು ಬರೆದಿದ್ದಾರೆ.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net