ಏಳನೇ ತರಗತಿಯಲ್ಲಿ ಫೇಲ್​ ಆಗಿದ್ದಕ್ಕೆ ಪ್ರಾಣವನ್ನೇ ತ್ಯಜಿಸಿದ ಪೋರ…

Crime
Published on

ಉತ್ತರಪ್ರದೇಶ: 7ನೇ ತರಗತಿ ಪರೀಕ್ಷೆಯಲ್ಲಿ ಫೇಲ್​ ಆದ ಕಾರಣಕ್ಕೆ 13 ವರ್ಷದ ಬಾಲಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಉತ್ತರಪ್ರದೇಶದ ಲಖ್ನೌನ ರೋಜಾ ಪೊಲೀಸ್ ವೃತ್ತದ ವ್ಯಾಪ್ತಿಯ ಅತ್ಸಾಲಿಯಾ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಕೊನೆಯ ಪತ್ರದಲ್ಲಿ ಬಾಲಕ, ತಾನು ಓದಿದ ಖಾಸಗಿ ಶಾಲೆಯಲ್ಲಿ ತನ್ನ ಶಿಕ್ಷಕರಿಂದ "ಅವಮಾನಿತನಾಗಿದ್ದೇನೆ". ಈ ನಡುವೆಯೂ ಓದುವುದನ್ನು ಮುಂದುವರಿಸಲು ತನ್ನ ಪೋಷಕರು ಒತ್ತಾಯಿಸಿದರು ಎಂದು ಹೇಳಿದ್ದಾನೆ.

ಶಾಲೆಯ ಶಿಕ್ಷಕರೊಬ್ಬರು ಹೆಚ್ಚುವರಿ ಟ್ಯೂಷನ್ ತರಗತಿಗಳನ್ನು ತೆಗೆದುಕೊಳ್ಳುವಂತೆ ಒತ್ತಡ ಹೇರುತ್ತಿದ್ದಾರೆ ಮತ್ತು ಉತ್ತೀರ್ಣರಾಗಲು ಬದಲಾಗಿ 5,000 ರೂ. ಕೇಳುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಎಸ್‌ಎಚ್‌ಒ ರೋಜಾ ಕೆಬಿ ಸಿಂಗ್ "ಯಾವುದೇ ದುರ್ಬಳಕೆಯ ಲಕ್ಷಣಗಳಿಲ್ಲ, ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಮತ್ತು ವಿಷಯದ ಬಗ್ಗೆ ತನಿಖೆ ನಡೆಸಲಾಗುತ್ತಿದೆ" ಎಂದು ಹೇಳಿದರು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net